ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ತ್ ಟೆಸ್ಟ್ : ನಾಲ್ಕನೇ ದಿನದ ಅಂತ್ಯಕ್ಕೆ ಭಾರತದ ಸ್ಕೋರ್ 112/5

IND VS AUS TEST 2018 : ನಾಲ್ಕನೇ ದಿನದ ಅಂತ್ಯಕ್ಕೆ ಭಾರತದ ಸ್ಕೋರ್ 112/5.
India vs Australia, 2nd Test, Day 4 Update: India look to wrap up Aussies quickly

ಪರ್ತ್, ಡಿಸೆಂಬರ್ 17: ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿದೆ. ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 243 ಸ್ಕೋರಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು 287ರನ್ ಗುರಿ ನೀಡಲಾಗಿದೆ.

ಪಂದ್ಯದ ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 190/4ಸ್ಕೋರ್ ಮಾಡಿತ್ತು. ಆದರೆ, ಭೋಜನ ವಿರಾಮದ ನಂತರ ದಿಢೀರ್ ಕುಸಿತ ಕಂಡಿತು.

ಪಂದ್ಯದ Live score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43624


ಟೀಮ್ ಪೈನ್ , ಅರೋನ್ ಫಿಂಚ್, ಖವಾಜಾ ಹಾಗೂ ಕಮಿನ್ಸ್ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ 14, ಜೋಶ್ ಹೇಜಲ್ವುಡ್ ಅಜೇಯ 17ರನ್ ಗಳಿಸಿ ತಂಡದ ಮೊತ್ತವನ್ನು 243ಸ್ಕೋರಿಗೇರಿಸಿದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡುವ ಉದ್ದೇಶದಿಂದ ಬ್ಯಾಟಿಂಗಿಗೆ ಇಳಿದ ಆಸ್ಟ್ರೇಲಿಯಾವು ಮೂರನೇ ದಿನದಾಂತ್ಯಕ್ಕೆ 4 ವಿಕೆಟ್ ನಷ್ಟದೊಂದಿಗೆ 132 ರನ್ ಗಳಿಸಿ 175 ರನ್ ಮುನ್ನಡೆ ಪಡೆದಿತ್ತು. ಉಸ್ಮಾನ್ ಖವಾಜಾ 41, ಟಿಮ್ ಪೈನೆ 8 ರನ್‌ನೊಂದಿಗೆ ಕ್ರೀಸ್‌ನಲ್ಲಿದ್ದರು. ಅರೋನ್ ಫಿಂಚ್ ಗಾಯಗೊಂಡು ಪೆವಿಲಿಯನ್ ಗೆ ತೆರಳಿದ್ದು, ಕೊಂಚ ಹಿನ್ನಡೆಯಾಯಿತು.

ನಾಲ್ಕನೇ ದಿನದ ಆರಂಭದಲ್ಲಿ ಖವಾಜಾ ಅರ್ಧಶತಕ(67) ಗಳಿಸಿದರೆ, ನಾಯಕ ಟಿಮ್ ಪೈನ್ 37ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ 200ರನ್ ಗಳಿಗೂ ಅಧಿಕ ಮುನ್ನಡೆ ಪಡೆದುಕೊಂಡಿದೆ. ಮೊಹಮ್ಮದ್ ಶಮಿ 2, ಇಶಾಂತ್ ಶರ್ಮ ಹಾಗೂ ಜಸ್ ಪ್ರೀತ್ ಬೂಮ್ರಾ ತಲಾ 1 ವಿಕೆಟ್ ಗಳಿಸಿದ್ದಾರೆ.

ಭಾರತ ತಂಡ : ಲೋಕೇಶ್ ರಾಹುಲ್, ಮುರಳಿ ವಿಜಯ್, ವಿರಾಟ್ ಕೊಹ್ಲಿ (ಸಿ), ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸೀಸ್ ತಂಡ : ಆ್ಯರನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.

Story first published: Tuesday, December 18, 2018, 11:50 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X