ಆಸೀಸ್-ಭಾರತ 3ನೇ ಟಿ20 ಪಂದ್ಯ ರದ್ದು, ಸರಣಿ ಸಮ

Posted By:

ಹೈದರಾಬಾದ್, ಅಕ್ಟೋಬರ್ 13: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯವು ಒಂದೂ ಎಸೆತವನ್ನು ಕಾಣದೆ ರದ್ದಾಗಿದೆ.

ಪಂದ್ಯ ಪ್ರಾರಂಭಕ್ಕೂ ಮುನ್ನವೇ ಮಳೆ ಪ್ರಾರಂಭವಾಗಿತ್ತು, ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ 3 ನೇ ಟಿ20 ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯ ರದ್ದುಗೊಂಡಿರುವುದರಿಂದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ-ಭಾರತ ಸಮಬಲ ಸಾಧಿಸಿವೆ.

India vs Australia 3rd T20: Toss Delayed Due To Wet Outfield

ಇಂದು ಮೂರನೇ ಟಿ20 ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಮೊದಲನೇ ಟಿ20 ಪಂದ್ಯವನ್ನು ಭಾರತ ಜಯಿಸಿತ್ತು. ಇನ್ನು 2ನೇ ಪಂದ್ಯವನ್ನು ಆಸೀಸ್ ಗೆದ್ದುಕೊಂಡಿತ್ತು. ಇದರಿಂದ ಎರಡು ತಂಡಗಳು ಸರಣಿಯನ್ನು ಹಂಚಿಕೊಂಡವು.

Story first published: Friday, October 13, 2017, 19:40 [IST]
Other articles published on Oct 13, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ