ಅಂಡರ್ 19 ವಿಶ್ವಕಪ್: ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

Posted By:
India vs Australia ICC Under -19 World Cup: Aussies win toss, decide to bat

ಟೌರಂಗಾ(ನ್ಯೂಜಿಲೆಂಡ್), ಫೆಬ್ರವರಿ 3: ನ್ಯೂಜಿಲೆಂಡಿನ ಟೌರಂಗಾ ದಲ್ಲಿ ಇಂದು(ಫೆ.3) ನಡೆದ ಐಸಿಸಿ ಅಂಡರ್ 19 ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಆಸ್ಟ್ರೇಲಿಯ ಒಡ್ಡಿದ್ದ 217 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 38.5 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ಪಡೆಯಿತು.

ನಾಲ್ಕು ಓವರ್ ಎದುರಿಸಿ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿ ಉತ್ತಮ ಲಯದಲ್ಲಿದ್ದಾಗಲೇ ಮಳೆ ಬಂದು ಆಟ ಮುಂದಕ್ಕೆ ಹೋಗಿತ್ತು. ಕೆಲ ಸಮಯದ ನಂತರ ಮತ್ತೆ ಆಟ ಆರಂಭವಾಗಿದೆ.

ನಾಯಕ ಪೃಥ್ವಿ ಶಾ 41 ಎಸೆತಗಳಲ್ಲಿ 29 ರನ್ ಗಳಿಸಿ ವಿಲ್ ಸತರ್ಲೆಂಡ್ ಗೆ ವಿಕೆಟ್ ಒಪ್ಪಿಸಿದರು. ಮನ್ಜೋತ್ ಕೊರ್ಲಾ 66 ಎಸೆತಗಳಲ್ಲಿ 67 ರನ್ ಗಳಿಸಿ ಆಡುತ್ತಿದ್ದಾರೆ. ಶುಬ್ನಂ ಗಿಲ್ 30 ಎಸೆತಗಳಲ್ಲಿ 31 ರನ್ ಗಳಿಸಿ ಪರಮ್ ಉಪ್ಪಳ್ ಅವರಿಗೆ ವಿಕೆಟ್ ಒಪ್ಪಿಸಿದರು.

ಭಾರತದ ಬೌಲರ್‌ಗಳ ಕರಾರುವಕ್ ದಾಳಿಯ ಮುಂದೆ ಮಂಡಿ ಊರಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು 47.2 ಓವರ್‌ಗಳಿಗೆ ತಮ್ಮೆಲ್ಲಾ ವಿಕೆಟ್ ಒಪ್ಪಿಸಿದರು. ವಿಶ್ವಕಪ್ ಗೆಲ್ಲಲು ಭಾರತದ ಕಿರಿಯರು 217 ರನ್ ಗಳಿಸಬೇಕಿದೆ.

ಭಾರತದ ಪರ ಎಲ್ಲ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ದಾಳಿ ಸಂಘಟಿಸಿದರು.ಇಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರಕೋಟಿ ಮತ್ತು ಅಂಕುಲ್‌ ರಾಯ್ ತಲಾ 2 ವಿಕೆಟ್ ಗಳಿಸಿದರು. ಶಿವಮ್ ಮಣಿ ಒಂದು ವಿಕೆಟ್ ಪಡೆದರೆ 6 ಓವರ್ ಬೌಲಿಂಗ್ ಮಾಡಿದ ಅಭಿಶೇಕ್ ಶರ್ಮಾಗೆ ಯಾವುದೇ ವಿಕೆಟ್ ಲಭಿಸಲಿಲ್ಲ. ಅತ್ಯುತ್ತಮ ಬೌಲಿಂಗ್ ನಡೆಸಿದ ಶಿವ ಸಿಂಗ್ 10 ಓವರ್ ಎಸೆದು 36 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದರು.

ಉತ್ತಮ ಆರಂಭವನ್ನೇ ಪಡೆದಿದ್ದ ಆಸ್ಟ್ರೇಲಿಯಾ ಅದನ್ನು ಮುಂದುವರೆಸಿಕೊಮಡು ಹೋಗುವಲ್ಲಿ ಎಡವಿತು. ಆಸ್ಟ್ರೇಲಿಯಾ ಪರ ಜಾನಥನ್ ಮೆರ್ಲೊ 102 ಬಾಲ್ ಎದುರಿಸಿ 76 ರನ್ ಗಳಿಸಿದರು. ಯಾವುದೇ ಜೊತೆಯಾಟ ಗಟ್ಟಿಯಾಗುವುದಕ್ಕೆ ಮುಂಚೆಯೇ ಮುರಿದು ಬಿಟ್ಟರು ಭಾರತದ ಬೌಲರ್‌ಗಳು.

ಭಾರತದ ಬ್ಯಾಟಿಂಗ್‌ ಉತ್ತಮವಾಗಿದ್ದು, ಪೃಥ್ವಿ ಶಾ ಮತ್ತು ಶುಭ್‌ಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಹಾಗಾಗಿ ಭಾರತ ಈ ತಂಡವನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆ ಇದೆ.

Story first published: Saturday, February 3, 2018, 8:13 [IST]
Other articles published on Feb 3, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ