ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಲು ಉಳುಕಿಸಿಕೊಂಡ ಪೃಥ್ವಿ, ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ಅನುಮಾನ

ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಅಲಭ್ಯ | Oneindia Kannada
India vs Australia: Prithvi Shaw suffers ankle injury

ಸಿಡ್ನಿ, ನವೆಂಬರ್ 30 : ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುವ ಮೊದಲೇ ಭಾರತಕ್ಕೆ ಗಾಯದ ಸಮಸ್ಯೆ ಶುರುವಾಗಿದೆ. ಉದಯೋನ್ಮುಖ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ ಅವರು ಹಿಮ್ಮಡಿ ಗಂಟಿಗೆ ಗಾಯ ಮಾಡಿಕೊಂಡಿದ್ದು, ಅವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

"ವೈದ್ಯಕೀಯ ತಂಡ ಪೃಥ್ವಿ ಶಾ ಅವರಿಗೆ ಆಗಿರುವ ಗಾಯದ ಪರಿಶೀಲನೆ ನಡೆಸಿದೆ. ಅಭ್ಯಾಸ ಪಂದ್ಯದಲ್ಲಿ ಬೌಂಡರಿ ಬಳಿ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಅವರು ಎಡಗಾಲಿನ ಹಿಮ್ಮಡಿಗೆ ಗಾಯ ಮಾಡಿಕೊಂಡಿದ್ದಾರೆ. ಸ್ಕ್ಯಾನ್ ಮಾಡಿದ ನಂತರ ಗಾಯದ ಬಗ್ಗೆ ಹೆಚ್ಚಿನ ವಿವರ ದೊರೆಯಲಿದೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿ ಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿ

ಕ್ರಿಕೆಟ್ ಆಸ್ಟ್ರೇಲಿಯಾ XI ವಿರುದ್ಧದ ಪಂದ್ಯದಲ್ಲಿ ತ್ವರಿತವಾಗಿ ಅರ್ಧ ಸೆಂಚುರಿ ಬಾರಿಸಿ, ಉತ್ತಮ ಲಯ ಕಂಡುಕೊಂಡು, ಡಿಸೆಂಬರ್ 6ರಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಗೆ ತಂಡ ಸೇರಲು ಅವರು ಸಿದ್ಧರಾಗಿದ್ದರು. ಆದರೆ, ಕ್ಯಾಚ್ ಹಿಡಿಯು ಯತ್ನದಲ್ಲಿ ಹಿಮ್ಮಡಿ ಉಳುಕಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ಅವರಿಗೆ ನಡೆಯಲೂ ಆಗುತ್ತಿರಲಿಲ್ಲ.

ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಸಿಎ XI ಆರಂಭಿಕ ಆಟಗಾರ ಮ್ಯಾಕ್ಸ್ ಬ್ರಯಾಂಟ್ ಮಿಡಿ ವಿಕೆಟ್ ಮೇಲಿನಿಂದ ಎತ್ತಿಬಾರಿಸಿದ ಹೊಡೆತವನ್ನು ಬೌಂಡರಿ ಬಳಿ ಹಿಡಿಯಲು ಪೃಥ್ವಿ ಶಾ ಯತ್ನಿಸಿದಾಗ ಕಾಲು ಉಳುಕಿದೆ. ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಹೋಗಲಾಯಿತು. ಸ್ಕ್ಯಾನ್ ಮಾಡಿದ ನಂತರವೇ ಗಾಯದ ಆಳ ತಿಳಿಯಲಿದೆ. ಸದ್ಯದ ಮಾಹಿತಿ ಪ್ರಕಾರ, ಅವರು ಮೊದಲ ಟೆಸ್ಟ್ ಆಡುವುದು ಅನುಮಾನ.

ಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ ಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ

ಮೊದಲ ಇನ್ನಿಂಗ್ಸ್ ನಲ್ಲಿ ಅವರ ಆಟವನ್ನು ಗಮನಿಸಿದ್ದ ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರು, ಪೃಥ್ವಿ ಯಾವುದೇ ರೀತಿಯ ಫಾರ್ಮ್ಯಾಟ್ ನಲ್ಲೂ ಹೊಂದಿಕೊಂಡು ಆಡುವ ಗುಣ ಹೊಂದಿದ್ದಾರೆ. ಅದು, ರಣಜಿಯೇ ಇರಲಿ, ದುಲೀಪ್ ಟ್ರೋಫಿಯೇ ಇರಲಿ, ಫಸ್ಟ್ ಕ್ಲಾಸ್ ಪಂದ್ಯವೇ ಇರಲಿ, ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ, ತಮ್ಮ ಕ್ಲಾಸ್ ಎಂಥದೆಂದು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದರು.

Story first published: Friday, November 30, 2018, 11:10 [IST]
Other articles published on Nov 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X