ಭಾರತ vs ಇಂಗ್ಲೆಂಡ್: 1ನೇ ಟೆಸ್ಟ್‌ ಪಂದ್ಯದಲ್ಲಿ ನಿರ್ಮಾಣವಾಗಲಿರುವ ದಾಖಲೆಗಳ ಅಂಕಿ-ಅಂಶಗಳು!

ಲಂಡನ್: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಸಜ್ಜಾಗಿವೆ. ನ್ಯಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್ ಸ್ಟೇಡಿಯಂನಲ್ಲಿ ಕುತೂಹಲಕಾರಿ ಸರಣಿಯ ಆರಂಭಿಕ ಪಂದ್ಯ ನಡೆಯಲಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರೆಗೆ ಐದು ಪಂದ್ಯಗಳ ಟೆಸ್ಟ್‌ ಸರಣಿ ಮುಂದುವರೆಯಲಿದೆ. ಇತ್ತಂಡಗಳ ಆರಂಭಿಕ ಟೆಸ್ಟ್‌ ವೇಳೆ ಎರಡೂ ತಂಡಗಳ ಆಟಗಾರರು ವಿಶೇಷ ದಾಖಲೆಗಳನ್ನು ಬರೆಯಲಿದ್ದಾರೆ. ಆ ದಾಖಲೆಗಳ ಇಣುಕು ನೋಟ ಇಲ್ಲಿದೆ.

ಟೋಕಿಯೋ ಒಲಿಂಪಿಕ್ಸ್: 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಬರೆದ ಸಿಡ್ನಿ ಮೆಕ್ಲಾಫ್ಲಿನ್ಟೋಕಿಯೋ ಒಲಿಂಪಿಕ್ಸ್: 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಬರೆದ ಸಿಡ್ನಿ ಮೆಕ್ಲಾಫ್ಲಿನ್

ವಿಶೇಷವೆಂದರೆ ಇಂಗ್ಲೆಂಡ್ ನೆಲದಲ್ಲಿ ಭಾರತೀಯ ತಂಡ ಟೆಸ್ಟ್ ಸರಣಿ ಗೆದ್ದು ಬಹಳ ವರ್ಷಗಳಾಗಿವೆ. ಈಗಾಗಲೇ 14 ವರ್ಷಗಳು ಕಳೆದಿವೆ. ಕಡೇಯ ಸಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. ಆಬಳಿಕ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೇ ಇಲ್ಲ.

ಪ್ಲೇಯಿಂಗ್ ಇಲೆವೆನ್ಗೊಸ್ಕರ ಕಾಯುತ್ತಿರುವ ಅಭಿಮಾನಿಗಳು! | Oneindia Kannada
ದ್ರಾವಿಡ್ ನಾಯಕತ್ವದಲ್ಲಿ ಕಡೇಯ ಸಾರಿ ಗೆಲುವು

ದ್ರಾವಿಡ್ ನಾಯಕತ್ವದಲ್ಲಿ ಕಡೇಯ ಸಾರಿ ಗೆಲುವು

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಮುಂಬರಲಿರುವ ಟೆಸ್ಟ್‌ ಸರಣಿಯಲ್ಲಾದರೂ ವಿರಾಟ್ ಕೊಹ್ಲಿ ಪಡೆ ಗೆಲ್ಲುತ್ತಾ ಕಾದು ನೋಡಬೇಕಿದೆ. ಟೀಮ್ ಇಂಡಿಯಾ ಈ ಬಾರಿ ಗೆದ್ದರೆ ಹೊಸ ದಾಖಲೆಯಾಗಲಿದೆ.

1ನೇ ಟೆಸ್ಟ್‌ ವೇಳೆ ಆಗಲಿರುವ ವಿಶೇಷ ದಾಖಲೆಗಳು

1ನೇ ಟೆಸ್ಟ್‌ ವೇಳೆ ಆಗಲಿರುವ ವಿಶೇಷ ದಾಖಲೆಗಳು

* ವಿರಾಟ್ ಕೊಹ್ಲಿಗೆ ಕ್ಲೈವ್ ಲಾಯ್ಡ್ (36) ಅವರನ್ನು ಮೀರಿಸಲು ನಾಯಕನಾಗಿ ಇನ್ನು ಕೇವಲ ಒಂದು ಟೆಸ್ಟ್ ಗೆಲುವು ಬೇಕು. ಕೊಹ್ಲಿ ಈಗ ನಾಯಕರಾಗಿ 36 ಟೆಸ್ಟ್‌ ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನೊಂದು ಪಂದ್ಯ ಗೆದ್ದರೂ ಕೊಹ್ಲಿ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದ್ದಾರೆ.

* ಮೈಕೆಲ್ ವಾನ್ (26) ಅವರನ್ನು ಹಿಂದಿಕ್ಕಲು ಮತ್ತು ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಲು ಜೋ ರೂಟ್‌ಗೆ ನಾಯಕನಾಗಿ ಇನ್ನೂ ಒಂದು ಟೆಸ್ಟ್ ಗೆಲುವು ಅಗತ್ಯವಿದೆ. ಜೋ ರೂಟ್ ಈಗ ನಾಯಕರಾಗಿ 26 ಟೆಸ್ಟ್‌ ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನೊಂದು ಪಂದ್ಯ ಗೆದ್ದರೆ ವಾನ್ ದಾಖಲೆ ಬದಿಗೆ ಸರಿಯಲಿದೆ.

* ಭಾರತದ ನಾಯಕ ವಿರಾಟ್ ಕೊಹ್ಲಿಗೆ ಎಲ್ಲಾ ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 23,000 ರನ್ ಪೂರೈಸಲು 125 ರನ್ ಗಳ ಅಗತ್ಯವಿದೆ. ಕೊಹ್ಲಿ 23000 ಅಂತಾರಾಷ್ಟ್ರೀಯ ರನ್ ಗಳನ್ನು ವೇಗವಾಗಿ ತಲುಪಿದ ವಿಶ್ವದಾಖಲೆಯನ್ನು ನಿರ್ಮಿಸಲಿದ್ದಾರೆ.

ಜಡೇಜಾ, ಆ್ಯಂಡರ್ಸನ್, ಕರನ್, ಸಿಬ್ಲಿ

ಜಡೇಜಾ, ಆ್ಯಂಡರ್ಸನ್, ಕರನ್, ಸಿಬ್ಲಿ

* ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ 2000 ಟೆಸ್ಟ್ ರನ್ ಪೂರೈಸಲು 15 ರನ್ ಗಳ ಅಗತ್ಯವಿದೆ. ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಮತ್ತು 2000 ರನ್ ಪೂರೈಸಿದ ಐದನೇ ಭಾರತೀಯರಾಗಲಿದ್ದಾರೆ.

* ಸ್ಪಿನ್ನರ್ ಆರ್ ಅಶ್ವಿನ್ ಟೆಸ್ಟ್ ವಿಕೆಟ್ ಗಳ ಲೆಕ್ಕದಲ್ಲಿ ಹರ್ಭಜನ್ ಸಿಂಗ್ (417) ಅವರನ್ನು ಹಿಂದಿಕ್ಕಲು 5 ವಿಕೆಟ್ ಅಗತ್ಯವಿದೆ.

* ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ (617) ಗೆ ಇನ್ನು 3 ವಿಕೆಟ್‌ಗಳು ದೊರೆತರೆ ಅನಿಲ್ ಕುಂಬ್ಳೆ (619) ಅವರನ್ನು ಹಿಂದಿಕ್ಕಲು ಮತ್ತು ಮುತ್ತಯ್ಯ ಮುರಳೀಧರನ್ (800), ಶೇನ್ ವಾರ್ನ್ (708) ಅವರರ ನಂತರ ಮೂರನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆ ಸರದಾರನಾಗಿ ಮಿಂಚಲಿದ್ದಾರೆ.

* ಆಂಗ್ಲ ಆಲ್ ರೌಂಡರ್ ಸ್ಯಾಮ್ ಕರನ್ 50 ಟೆಸ್ಟ್ ವಿಕೆಟ್‌ಗಳಿಗೆ 6 ವಿಕೆಟ್ ಪಡೆಯಬೇಕಾಗಿದೆ. ಮೊದಲ ಟೆಸ್ಟ್‌ನಲ್ಲಿ ಕರನ್ ಈ ಸಾಧನೆ ಮಾಡೋದು ಕಷ್ಟ ಸಾಧ್ಯ.

* ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಡಾಮ್ ಸಿಬ್ಲಿ 1000 ಟೆಸ್ಟ್ ರನ್ ಪೂರೈಸಲು 15 ರನ್ ಗಳ ಅಗತ್ಯವಿದೆ. ಆರಂಭಿಕ ಪಂದ್ಯದಲ್ಲೇ ಸಿಬ್ಲಿ ಈ ದಾಖಲೆ ಪೂರೈಸುವ ನಿರೀಕ್ಷೆಯಿದೆ.

ಇಂಗ್ಲೆಂಡ್ ಪ್ಲೇಯಿಂಗ್ XI, ಸಂಭಾವ್ಯ ತಂಡ

ಇಂಗ್ಲೆಂಡ್ ಪ್ಲೇಯಿಂಗ್ XI, ಸಂಭಾವ್ಯ ತಂಡ

ಇಂಗ್ಲೆಂಡ್ ಸಂಪೂರ್ಣ ತಂಡ: ಜೋ ರೂಟ್ (ಸಿ), ಜೋಸ್ ಬಟ್ಲರ್ (ಡಬ್ಲ್ಯುಕೆ), ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾಲೆ, ಜಾನಿ ಬೈರ್‌ಸ್ಟೊ, ಡೇನಿಯಲ್ ಲಾರೆನ್ಸ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಕ್ರೇಗ್ ಓವರ್ಟನ್, ಸ್ಯಾಮ್ ಕರ್ರನ್, ಜ್ಯಾಕ್ ಲೀಚ್, ಡೊಮಿನಿಕ್ ಬೆಸ್ ಓಲಿ ಪೋಪ್, ಹಸೀಬ್ ಹಮೀದ್.

ಇಂಗ್ಲೆಂಡ್ ಸಂಭಾವ್ಯ ತಂಡ: ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಝ್ಯಾಕ್ ಕ್ರಾವ್ಲಿ, ಜೋ ರೂಟ್ (ಸಿ), ಒಲ್ಲಿ ಪೋಪ್/ಜಾನಿ ಬೈರ್‌ಸ್ಟೊ, ಡಾನ್ ಲಾರೆನ್ಸ್, ಜೋಸ್ ಬಟ್ಲರ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

ಭಾರತ ಪ್ಲೇಯಿಂಗ್ XI, ಸಂಭಾವ್ಯ ತಂಡ

ಭಾರತ ಪ್ಲೇಯಿಂಗ್ XI, ಸಂಭಾವ್ಯ ತಂಡ

ಭಾರತ ಸಂಪೂರ್ಣ ತಂಡ: ವಿರಾಟ್ ಕೊಹ್ಲಿ (c), ರಿಷಭ್ ಪಂತ್ (wk), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ವೃದ್ಧಿಮಾನ್ ಸಾಹ, ಉಮೇಶ್ ಯಾದವ್, ಹನುಮ ವಿಹಾರಿ, ಅಭಿಮನ್ಯು ಈಶ್ವರನ್.

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್/ಹನುಮ ವಿಹಾರಿ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ/ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 4, 2021, 11:08 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X