ಇನ್ನೆಷ್ಟು ಅವಕಾಶ? : ನಾಯಕತ್ವದಲ್ಲಿಯೇ ಅಂತ್ಯವಾಗುತ್ತಾ ಅಜಿಂಕ್ಯಾ ರಹಾನೆ ಟೆಸ್ಟ್ ಕೆರಿಯರ್!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಭೋಜನ ವಿರಾಟಮ ವೇಳೆಗೆ ಟೀಮ್ ಇಂಡಿಯಾ 84 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ. ಈ ಪಂದ್ಯದಲ್ಲಿ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡ ಅಜಿಂಕ್ಯಾ ರಹಾನೆ ಮತ್ತೊಂದು ಪಂದ್ಯದಲ್ಲಿಯೂ ಸಂಪೂರ್ಣ ವಿಫಲವಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಂದ ಮತ್ತೊಮ್ಮೆ ಟೀಕೆಗೆ ಒಳಗಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 35 ರನ್‌ಗಳಿಸಿದ್ದ ರಹಾನೆ ಎರಡನೇ ಇನ್ನಿಂಗ್ಸ್‌ನಲ್ಲಿ 4 ರನ್‌ಗೆ ಆಟ ಮುಗಿಸಿದ್ದಾರೆ. ಅಜಿಂಕ್ಯಾ ರಹಾನೆಯ ಈ ಕಳಪೆ ಫಾರ್ಮ್‌ನಿಂದಾಗಿ ಟೆಸ್ಟ್ ಭವಿಷ್ಯದ ಮೇಲೆಯೂ ಈಗ ಕರಿ ನೆರಳು ಆವರಿಸಿದೆ. ಸಾಕಷ್ಟು ಅವಕಾಶಗಳ ಹೊರತಾಗಿಯೂ ಅಜಿಂಕ್ಯಾ ರಹಾನೆ ಫಾರ್ಮ್‌ಗೆ ಮರಳುವಲ್ಲಿ ವಿಫಲವಾಗಿದ್ದಾರೆ. ಉತ್ತಮ ಮೊತ್ತದ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ಅನೇಕ ಪ್ರತಿಭಾನ್ವಿತ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವಾಗಿ ಮತ್ತೆ ಮತ್ತೆ ರಹಾನೆಗೆ ಅವಕಾಶ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಅಭಿಮಾನಿಗಳದ್ದಾಗಿದೆ.

ವಿಜಯ್ ಹಜಾರೆ ಟ್ರೋಫಿ 2021: ಕರ್ನಾಟಕ ತಂಡ ಪ್ರಕಟ, ಯಾರಿಗೆಲ್ಲಾ ಅವಕಾಶ?ವಿಜಯ್ ಹಜಾರೆ ಟ್ರೋಫಿ 2021: ಕರ್ನಾಟಕ ತಂಡ ಪ್ರಕಟ, ಯಾರಿಗೆಲ್ಲಾ ಅವಕಾಶ?

ಕಿವೀಸ್ ಸರಣಿಗೆ ಆಯ್ಕೆಯಾಗಿದ್ದೇ ಅಚ್ಚರಿ

ಕಿವೀಸ್ ಸರಣಿಗೆ ಆಯ್ಕೆಯಾಗಿದ್ದೇ ಅಚ್ಚರಿ

ಇನ್ನು ಅಜಿಂಕ್ಯಾ ರಹಾನೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದೇ ಅಚ್ಚರಿಯ ವಿಚಾರ. ಕೆಲ ಮಾಜಿ ಆಟಗಾರರು ಕೂಡ ಈ ಇಚಾರವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಈ ಸರಣಿಯ ಮೊದಲ ಪಂದ್ಯದಲ್ಲಿ ರಹಾನೆಗೆ ನಾಯಕತ್ವದ ಜವಾಬ್ಧಾರಿಯನ್ನು ನೀಡಲಾಗಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಾ ಅನುಭವಿಗಳ ಅಲಭ್ಯತೆಯಲ್ಲಿ ಅಜಿಂಕ್ಯಾ ರಹಾನೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಈ ಅವಕಾಶವನ್ನು ರಹಾನೆ ಉತ್ತಮವಾಗಿ ಬಳಸಿಕೊಳ್ಲುವ ಅವಕಾಶವಿತ್ತು. ಆದರೆ ರಹಾನೆ ಮತ್ತೆ ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಈ ವರ್ಷ ರಹಾನೆ ಗಳಿಸಿದ್ದು ಕೇವಲ ಎರಡು ಅರ್ಧ ಶತಕ

ಈ ವರ್ಷ ರಹಾನೆ ಗಳಿಸಿದ್ದು ಕೇವಲ ಎರಡು ಅರ್ಧ ಶತಕ

2021ರಲ್ಲಿ ಅಜಿಂಕ್ಯಾ ರಹಾನೆ 21 ಇನ್ನಿಂಗ್ಸ್‌ಗಳಲ್ಲಿ ಆಡಲು ಇಳಿದಿದ್ದಾರೆ. ಆದರೆ ಭಾರತ ತಂಡದ ಈ ಹಿರಿಯ ಆಟಗಾರ ಕೇವಲ 2 ಅರ್ಧ ಶತಕವನ್ನು ಮಾತ್ರವೇ ಗಳಿಸಿ ತಮ್ಮ ಕಳಪೆ ಫಾರ್ಮ್ ಮುಂದಿವರಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಅವಕಾಶ ಪಡೆದ ಕೆಲ ಯುವ ಪ್ರತಿಭಾನ್ವಿತ ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.

ಯುವ ಆಟಗಾರರೊಂದಿಗೆ ಹೋಲಿಕೆ

ಯುವ ಆಟಗಾರರೊಂದಿಗೆ ಹೋಲಿಕೆ

ಅಜಿಂಕ್ಯಾ ರಹಾನೆ ಕಳಪೆ ಫಾರ್ಮ್‌ನಲ್ಲಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಿರುವುದು ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ದೊರೆಯದೊರೆಯದಿರಲು ಕಾರಣವಾಗುತ್ತಿದೆ ಎಂದು ಕ್ರಿಕೆಟ್ ಪ್ರೇ ಮಿಗಳು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರ ಪ್ರದರ್ಶನದ ಅಂಕಿಅಂಶಗಳು ಕೂಡ ಇದನ್ನು ಸಾರಿ ಹೇಳುತ್ತಿದೆ. ಯುವ ಆಲ್‌ರೌಂಡರ್ ಆಟಗಾರ ವಾಶಿಂಗ್ಟನ್ ಸುಂದರ್ ಈ ವರ್ಷ ಕೇವಲ 6 ಇನ್ನಿಂಗ್ಸ್‌ಗಳಲ್ಲಿ ಆಡಿದ್ದು ಇದರಲ್ಲಿ ಮೂರು ಅರ್ಧ ಶತಕಗಳಿಸಿದ್ದಾರೆ. ಮತ್ತೋರ್ವ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಈ ವರ್ಷ 5 ಇನ್ನಿಂಗ್ಸ್‌ಗಳಲ್ಲಿ ಆಡಿದ್ದು 3 ಅರ್ಧ ಶತಕಗಳಿಸಿದ್ದಾರೆ. ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ 15 ಇನ್ನಿಂಗ್ಸ್‌ಗಳಲ್ಲಿ 4 ಅರ್ಧ ಶತಕ ಗಳಿಸಿದ್ದಾರೆ. ಶ್ರೇಯಸ್ ಐಯ್ಯರ್ ಆಡಿದ 2 ಇನ್ನಿಂಗ್ಸ್‌ನಲ್ಲಿ ಒಂದು ಶತಕ ಸಿಡಿಸಿ ಮಿಂಚಿದ್ದಾರೆ.

ನಾಯಕತ್ವದಲ್ಲಿಯೇ ಕೊನೆಯಾಗುತ್ತಾ ರಹಾನೆ ಕೆರಿಯರ್

ನಾಯಕತ್ವದಲ್ಲಿಯೇ ಕೊನೆಯಾಗುತ್ತಾ ರಹಾನೆ ಕೆರಿಯರ್

ಅಜಿಂಕ್ಯಾ ರಹಾನೆಯ ಇಂತಾ ಕಳಪೆ ಪ್ರದರ್ಶನದ ನಂತರವೂ ತಂಡದಲ್ಲಿ ಸ್ಥಾನ ನೀಡಿದರೆ ಮ್ಯಾನೇಜ್‌ಮೆಂಟ್ ತೀವ್ರ ಟೀಕೆಗೆ ಒಳಗಾಗಬೇಕಾಗುತ್ತದೆ. ಈಗಾಗಲೇ ಇನ್ನಿಲ್ಲದಷ್ಟು ಅವಕಾಶಗಳು ಅನುಭವಿ ಆಟಗಾರನಿಗೆ ದೊರೆತಿರುವಾದ ಮತ್ತಷ್ಟು ಅವಕಾಶ ನೀಡುವುದು ಯುವ ಆಟಗಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಿರಾಟ್ ಕೊಹ್ಲಿ ವಹಿಸಿಕೊಳ್ಳಲಿದ್ದು ರಹಾನೆ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಕೆಲ ಕ್ರಿಕೆಟ್ ವಿಶ್ಲೇಷಕರು ಅಜಿಂಕ್ಯಾ ರಹಾನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ನಾಯಕತ್ವದಲ್ಲಿಯೇ ಅಂತ್ಯವಾಗಲಿದೆ ಎಂಬ ಭವಿಷ್ಯವನ್ನು ಕೂಡ ನುಡಿದಿದ್ದಾರೆ.

ಪೂಜಾರ ಫಾರ್ಮ್ ಬಗ್ಗೆಯೂ ಟೀಕೆ

ಪೂಜಾರ ಫಾರ್ಮ್ ಬಗ್ಗೆಯೂ ಟೀಕೆ

ಇನ್ನು ಟೆಸ್ಟ್ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ಕೂಡ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ರಹಾನೆ ಜೊತೆಗೆ ಪೂಜಾರ ಸ್ಥಾನವೂ ತೂಗುಯ್ಯಾಲೆಯಲ್ಲಿದೆ. ಅನುಭವಿಗಳಾಗಿ ಈ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರದಿರುವುದು ಇತರ ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಹೀಗಾಗಿ ಚೇತೇಶ್ವರ್ ಪೂಜಾರ ಬಗ್ಗೆಯೂ ಟೀಕೆಗಳು ಹೆಚ್ಚಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 26 ರನ್‌ಗಳಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್‌ಗಳಿಸಿ ಔಟಾಗಿದ್ದಾರೆ.

RCBಗೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎನ್ನುವುದೇ ತಲೆನೋವು | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, November 28, 2021, 13:17 [IST]
Other articles published on Nov 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X