ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ವೇಗಿ ಉಮೇಶ್ ಯಾದವ್

India vs England: Umesh Yadav completed 150 Wickets in his Test Cricket Career

ಲಂಡನ್: ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ನಲ್ಲಿ 150+ ವಿಕೆಟ್‌ ಸಾಧನೆಗಾಗಿ ಉಮೇಶ್ ಗುರುತಿಸಿಕೊಂಡಿದ್ದಾರೆ. ಶುಕ್ರವಾರ (ಸೆಪ್ಟೆಂಬರ್‌ 3) ಲಂಡನ್‌ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಯಾದವ್ ಈ ಸಾಧನೆ ತೋರಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್

ನೈಟ್ ವಾಚ್‌ಮ್ಯಾನ್ ಆಗಿದ್ದ ಕ್ರೇಗ್ ಓವರ್‌ಟನ್ ಅವರನ್ನು 1 ರನ್‌ಗೆ ಔಟ್ ಮಾಡುವ ಮೂಲಕ ಉಮೇಶ್ ಯಾದವ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 150ನೇ ವಿಕೆಟ್ ದಾಖಲೆ ನಿರ್ಮಿಸಿದ್ದಾರೆ. 48ನೇ ಟೆಸ್ಟ್‌ ಪಂದ್ಯದಲ್ಲಿ ಯಾದವ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದೇ ಪಂದ್ಯದಲ್ಲಿ ನಾಯಕ ಜೋ ರೂಟ್ ಮತ್ತು ಟಿ20ಐ ನಂ.1 ಶ್ರೇಯಾಂಕಿತ ಡಾವಿಡ್ ಮಲನ್ ವಿಕೆಟ್ ಕೂಡ ಯಾದವ್‌ಗೆ ಲಭಿಸಿದೆ.

ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49715
ವೇಗದಲ್ಲಿ 150 ವಿಕೆಟ್‌ ದಾಖಲೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ವೇಗದಲ್ಲಿ 150 ವಿಕೆಟ್‌ ದಾಖಲೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ಈ ಸಾಧನೆಯೊಂದಿಗೆ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ 150+ ವಿಕೆಟ್‌ ಪಡೆದ ಭಾರತದ ಆರನೇ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಅತೀ ವೇಗವಾಗಿ 150 ಟೆಸ್ಟ್ ವಿಕೆಟ್‌ ಪಡೆದ ಭಾರತೀಯ ವೇಗಿಗಳ ದಾಖಲೆ ಪಟ್ಟಿಯಲ್ಲಿ ಯಾದವ್ 4ನೇ ಸ್ಥಾನದಲ್ಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ದಂತಕತೆ ಕಪಿಲ್ ದೇವ್ ಮೊದಲ ಸ್ಥಾನದಲ್ಲಿದ್ದಾರೆ. ದೇವ್ 39 ಟೆಸ್ಟ್‌ ಪಂದ್ಯಗಳಲ್ಲಿ 150 ವಿಕೆಟ್ ಕೆಡವಿದ್ದರು. ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ (40 ಪಂದ್ಯಗಳು), ತೃತೀಯ ಸ್ಥಾನದಲ್ಲಿ ಮೊಹಮ್ಮದ್ ಶಮಿ (42 ಪಂದ್ಯಗಳು), ನಾಲ್ಕನೇ ಸ್ಥಾನದಲ್ಲಿ ಉಮೇಶ್ ಯಾದವ್ (48 ಪಂದ್ಯಗಳು), 5ನೇ ಸ್ಥಾನದಲ್ಲಿ ಝಹೀರ್ ಖಾನ್ (49 ಪಂದ್ಯಗಳು), 6ನೇ ಸ್ಥಾನದಲ್ಲಿ ಇಶಾಂತ್ ಶರ್ಮಾ (54 ಪಂದ್ಯಗಳು) ಇದ್ದಾರೆ.

ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ವೇಗಿಗಳ ಪಟ್ಟಿ

ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ವೇಗಿಗಳ ಪಟ್ಟಿ

ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ವೇಗಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಕಪಿಲ್ ದೇವ್ ಇದ್ದಾರೆ. 131 ಟೆಸ್ಟ್‌ ಪಂದ್ಯಗಳಲ್ಲಿ ಕಪಿಲ್ 434 ವಿಕೆಟ್ ಮುರಿದಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಝಹೀರ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಝಹೀರ್ 92 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೇ ದಾಖಲೆ ಪಟ್ಟಿಯಲ್ಲಿ ಉಮೇಶ್ ಯಾದವ್ ಆರನೇ ಸ್ಥಾನದಲ್ಲಿದ್ದಾರೆ. 48ನೇ ಟೆಸ್ಟ್ ಪಂದ್ಯದಲ್ಲಿ 151 ವಿಕೆಟ್‌ನೊಂದಿಗೆ ಉಮೇಶ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ವೇಗಿಗಳ ಪಟ್ಟಿ
* ಕಪಿಲ್ ದೇವ್, 131 ಟೆಸ್ಟ್‌ ಪಂದ್ಯಗಳಲ್ಲಿ 434 ವಿಕೆಟ್‌ಗಳು
* ಝಹೀರ್ ಖಾನ್, 92 ಟೆಸ್ಟ್‌ ಪಂದ್ಯಗಳಲ್ಲಿ, 311 ವಿಕೆಟ್‌ಗಳು
* ಇಶಾಂತ್ ಶರ್ಮಾ, 104 ಟೆಸ್ಟ್‌ ಪಂದ್ಯಗಳು, 311 ವಿಕೆಟ್‌ಗಳು
* ಜಾವಗಲ್ ಶ್ರೀನಾಥ್, 67 ಟೆಸ್ಟ್‌ ಪಂದ್ಯಗಳು, 236 ವಿಕೆಟ್‌ಗಳು
* ಮೊಹಮ್ಮದ್ ಶಮಿ, 54 ಟೆಸ್ಟ್‌ ಪಂದ್ಯಗಳು, 195 ವಿಕೆಟ್‌ಗಳು*
* ಉಮೇಶ್ ಯಾದವ್, 48 ಪಂದ್ಯಗಳು, 151 ವಿಕೆಟ್‌ಗಳು
* ಕರ್ಸನ್ ಘೌರಿ, 39 ಟೆಸ್ಟ್‌ ಪಂದ್ಯಗಳು, 109 ವಿಕೆಟ್‌ಗಳು
* ಇರ್ಫಾನ್ ಪಠಾಣ್, 29 ಟೆಸ್ಟ್‌ ಪಂದ್ಯಗಳು, 100 ವಿಕೆಟ್‌ಗಳು

ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್

ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳಲ್ಲಿ ರನ್ ಬಾರಿಸಿದ್ದು ವಿರಾಟ್ ಕೊಹ್ಲಿ ಮಾತ್ರ. ಕೊಹ್ಲಿ ಅರ್ಧ ಶತಕ ಬಾರಿಸಿದರು. ಅದು ಬಿಟ್ಟರೆ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಗಮನಾರ್ಹವೆನಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ 11 ರನ್ ಬಾರಿಸಿ ಕ್ರಿಸ್ ವೋಕ್ಸ್ ಓವರ್‌ನಲ್ಲಿ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರೆ, ಮತ್ತೊಬ್ಬ ಆರಂಭಿಕ ಆಟಗಾರ ಕೆಎಲ್ ರಾಹುಲ್ 17 ರನ್ ಬಾರಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್‌ ನೀಡಿದ್ದರು. ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಚೇತೇಶ್ವರ್ ಪೂಜಾರ ಕೂಡ 4 ರನ್ ಬಾರಿಸಿ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ ಬೇರ್ಸ್ಟೋವ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ 10 ರನ್ ಬಾರಿಸಿ ಔಟ್ ಆದರು. ಇನ್ನು ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ಉಮೇಶ್ ಯಾದವ್ 10 ರನ್ ಸೇರಿಸಿದರು. 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶಾರ್ದೂಲ್ 7 ಫೋರ್, 3 ಸಿಕ್ಸರ್ ಸೇರಿಸಿ 57 ರನ್ ಕೊಡುಗೆ ನೀಡಿದರು. ಅದೂ ಕೂಡ 36 ಎಸೆತಗಳಲ್ಲಿ ಅನ್ನೋದು ವಿಶೇಷ.

ಮತ್ತೆ ಮೈದಾನಕ್ಕೆ ನುಗ್ಗಿ ಕಿರಿಕಿರಿ ಮಾಡಿದ ಜಾವ್ರೋ! | Oneindia Kannada
ಇತ್ತಂಡಗಳ ಪ್ಲೇಯಿಂಗ್ XI

ಇತ್ತಂಡಗಳ ಪ್ಲೇಯಿಂಗ್ XI

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ಸಿ), ಆಲ್ಲಿ ಪೋಪ್, ಜಾನಿ ಬೈರ್‌ಸ್ಟೊ (ಡಬ್ಲ್ಯೂ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.

Story first published: Saturday, September 4, 2021, 9:44 [IST]
Other articles published on Sep 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X