ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾನ್ಪುರ ಟೆಸ್ಟ್: ರಹಾನೆ ಮಾಡಿದ ತಪ್ಪನ್ನು ಬೊಟ್ಟು ಮಾಡಿದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್

India vs New zealand: Ajinkya Rahanes shot selection questioned by VVS Laxman
ಕಳಪೆ ಆಟ ಆಡಿದ ರಹಾನೆಗೆ ಲಕ್ಷ್ಮಣ್ ಪಾಠ | Oneindia Kannada

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡಿದೆ. 145 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರ ಅದ್ಭುತ ರೀತಿಯಲ್ಲಿ ಚೇತರಿಕೆ ಕಂಡಿದ್ದು ಶ್ರೇಯಸ್ ಐಯ್ಯರ್ ಹಾಗೂ ರವೀಂದ್ರ ಜಡೇಜಾ ಜೋಡಿ ಟೀಮ್ ಇಂಡಿಯಾ ಪರವಾಗಿ ಅದ್ಭುತವಾದ ಜೊತೆಯಾಟವನ್ನು ನೀಡಿದೆ. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 113 ರನ್‌ಗಳನ್ನು ಪೇರಿಸಿದ್ದು ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಚೊಚ್ಚಲ ಪಂದ್ಯವನ್ನು ಆಡುತ್ತಿರುವ ಶ್ರೇಯಸ್ ಐಯ್ಯರ್ 75 ರನ್‌ಗಳಿಸಿದ್ದರೆ ರವೀಂದ್ರ ಜಡೇಜಾ 50 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇನ್ನು ಆರಂಭಿಕ ಆಟಗಾರ ಶುಬ್ಮನ್ ಗಿಲ್ ಕೂಡ ಅರ್ಧ ಶತಕದ ಕೊಡುಗೆ ನೀಡಿದ್ದಾರೆ.

ಆದರೆ ಟೀಮ್ ಇಂಡಿಯಾದ ಅನುಭವಿ ಆಟಗಾರಿಬ್ಬರ ಪ್ರದರ್ಶನ ಮಾತ್ರ ಬಗ್ಗೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಈ ಪಂದ್ಯವಲ್ಲಿಯೂ ಉತ್ತಮ ರನ್‌ಗಳಿಸಲು ವಿಫಲವಾಗಿದ್ದಾರೆ. ಅದರಲ್ಲೂ ಈ ಹಿಂದಿನ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯದ ಹೊರತಾಗಿಯೂ ತಂಡದ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿರುವ ಅಜಿಂಕ್ಯಾ ರಹಾನೆ 35 ರನ್‌ಗೆ ಔಟಾಗುವ ಮೂಲಕ ಮತ್ತೊಂದು ನೀರಸ ಇನ್ನಿಂಗ್ಸ್ ನೀಡಿದ್ದಾರೆ.

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?

ರಹಾನೆ ಔಟಾಗಲು ಕಾರಣ

ರಹಾನೆ ಔಟಾಗಲು ಕಾರಣ

ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದ ಮೊದಲ ದಿನದಾಟದ ಮುಕ್ತಾಯದ ಬಳಿಕ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅಜಿಂಕ್ಯಾ ರಹಾನೆ ಪದೇ ಪದೇ ಯಾವ ಕಾರಣಕ್ಕಾಗಿ ಎಡವುತ್ತಿದ್ದಾರೆ ಎಂದು ಲಕ್ಷ್ಮಣ್ ವಿವರಿಸಿದ್ದಾರೆ. ಅಜಿಂಕ್ಯಾ ರಹಾನೆ ಕ್ರೀಸ್‌ಗೆ ಬಂದ ನಂತರ ಕೈಲ್ ಜ್ಯಾಮಿಸನ್ ರಹಾನೆಗೆ ಶಾರ್ಟ್ ಪಿಚ್ ಎಸೆತಗಳನ್ನು ಹಾಕುತ್ತಿದ್ದರು. ಶಾರ್ಟ್ ಪಿಚ್ ಎಸೆತಗಳಿಗೆ ರಹಾನೆ ಬಳಿ ಇರುವ ಏಕೈಕ ಉತ್ತರವೆಂದರೆ ಪುಲ್‌ಶಾಟ್ ಎಂಬುದು ನಮಗೆ ತಿಳಿದಿದೆ. ಆದರೆ ಇಂದು ಲೈನ್‌ನ ಆಚೆಗೆ ಹೋಗುವ ಎಸೆತವನ್ನು ಆಡಿ ಅವರು ವಿಕೆಟ್ ಕಳೆದುಕೊಂಡರು. ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾದಂತಾ ಸ್ಥಳಗಳಲ್ಲಿ ನೀವು ಲೈನ್‌ನ ಆಚೆಗಿನ ಎಸೆತವನ್ನು ಬಾರಿಸುವುದರಲ್ಲಿ ಅರ್ಥವಿದೆ. ಯಾಕೆಂದರೆ ಅಲ್ಲಿ ಹೆಚ್ಚು ಬೌನ್ಸ್ ಪಡೆಯುತ್ತದೆ. ಆಗ ನೀವು ಸ್ಕ್ವಾರ್ ಮೂಲಕ ಬಾರಿಸಬಹುದು"

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

ಹೊಡೆತದ ಆಯ್ಕೆಯಲ್ಲಿ ಎಡವಿದ ರಹಾನೆ

ಹೊಡೆತದ ಆಯ್ಕೆಯಲ್ಲಿ ಎಡವಿದ ರಹಾನೆ

"ಆದರೆ ಕಾನ್ಪುರದಲ್ಲಿ ಅಂತಾ ಹೊಡೆತಗಳನ್ನು ನೀವು ಬಾರಿಸಲು ಮುಂದಾಗುವುದು ಸರಿಯಲ್ಲ. ಯಾಕೆಂದರೆ ಅಲ್ಲಿ ಚೆಂಡು ಬೌನ್ಸ್ ಆಗುವುದೇ ಇಲ್ಲ. ನೀವು ನಿಮ್ಮ ಬ್ಯಾಟ್‌ಅನ್ನು ಸಂಪೂರ್ಣವಾಗಿ ಉಪಯೋಗಿಸಿ ಬಾರಿಸಬೇಕು. ಅಥವಾ ಬ್ಯಾಟ್‌ಅನ್ನು ಲಂಬವಾಗಿ ಬಾರಿಸಬೇಕಾಗುತ್ತದೆ. ಅಜಿಂಕ್ಯಾ ರಹಾನೆ ಹೀಗೆ ತಪ್ಪಾಗಿ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವ ಕಾರಣದಿಂದಾಗಿಯೇ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.

ಪದೇ ಪದೇ ವಿಫಲವಾಗುತ್ತಿರುವ ರಹಾನೆ

ಪದೇ ಪದೇ ವಿಫಲವಾಗುತ್ತಿರುವ ರಹಾನೆ

ಅಜಿಂಕ್ಯಾ ರಹಾನೆ ಕಳೆದ ಹಲವು ಸಮಯಗಳಿಂದ ದೊಡ್ಡ ಮೊತ್ತದ ರನ್‌ಗಳಿಸಲು ಸತತವಾಗಿ ವಿಫಲವಾಗುತ್ತಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ರಹಾನೆಗೆ ತನ್ನ ಬ್ಯಾಟಿಂಗ್ ಪ್ರದರ್ಶನವನ್ನು ಉತ್ತಮ ಪಡಿಸಿಕೊಳ್ಳಲು ಮತ್ತೊಂದು ಅವಕಾಶ ದೊರೆತಂತಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ರಹಾನೆ ವಿಫಲವಾದ ಕಾರಣ ರಹಾನೆಗೆ ಮುಂದೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡುವುದು ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರು ರಹಾನೆ ಪ್ರದರ್ಶನಕ್ಕೆ ಕಿಡಿಕಾರಿದ್ದರು.

ಮಂಕಾಗಿದೆ ರಹಾನೆ ಬ್ಯಾಟಿಂಗ್

ಮಂಕಾಗಿದೆ ರಹಾನೆ ಬ್ಯಾಟಿಂಗ್

ಇನ್ನು 2016ರಿಂದೀಚೆಗೆ ಅಜಿಂಕ್ಯಾ ರಹಾನೆಯ ಪ್ರದರ್ಶನ ಮಂಕಾಗುತ್ತಾ ಬಂದಿದೆ. ಈ ಅವಧಿಯಲ್ಲಿ ರಹಾನೆ 35 ಇನ್ನಿಂಗ್ಸ್‌ಗಳನ್ನು ಆಡಿದ್ದು ಕಧೇವಲ 1019 ರನ್ ಮಾತ್ರವೇ ಗಳಿಸಿದ್ದಾರೆ. 30ರಷ್ಟು ಸರಾಸರಿಯನ್ನು ಅವರು ಹೊಂದಿದ್ದಾರೆ. ಇದು ಟೀಮ್ ಇಂಡಿಯಾದ ಒಟ್ಟಾರೆ ಪ್ರದರ್ಶನದ ಮೇಲೆಯೂ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗುತ್ತಿದೆ.

ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್
ಬೆಂಚ್: ಪ್ರಸಿದ್ ಕೃಷ್ಣ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್

Story first published: Thursday, November 25, 2021, 19:38 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X