ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಟಿ20, ಟೆಸ್ಟ್ ಸರಣಿ ಮೇಲೆ ಚಿತ್ತ: ಭಾರತದ ಸಂಭಾವ್ಯ ತಂಡ ಹೀಗಿದೆ!

India vs New zealand series: India Predicted Squad for T20 and Test Series 2021

ನಮೀಬಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತದ ಟಿ20 ವಿಶ್ವಕಪ್‌ನ ಈ ಬಾರಿಯ ಅಭಿಯಾನ ಅಂತ್ಯವಾಗಲಿದೆ. ಈ ಟೂರ್ನಿಯ ನಂತರ ಭಾರತ ತವರಿನಲ್ಲಿ ನಡೆಯಲಿರುವ ಸರಣಿಯತ್ತ ಚಿತ್ತಹರಿಸಲಿದೆ. ನ್ಯೂಜಿಲೆಂಡ್ ವಿರುದ್ಧ ಮೂರು ಒಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಹೀಗಾಗಿ ಭಾರತೀಯ ಆಟಗಾರರಿಗೆ ಹೆಚ್ಚಿನ ಸಮಯಾವಕಾಶ ದೊರೆಯುತ್ತಿಲ್ಲ.

ಆದರೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ದೊರೆಯುವುದು ನಿಶ್ಚಿತವಾಗಿದೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಕೆಲ ಯುವ ಆಟಗಾರರು ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಕೆಎಲ್ ರಾಹುಲ್ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಈ ಸರಣಿಯ ಮೂಲಕ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಕರ್ತವ್ಯವನ್ನು ವಹಿಸಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್ 2021: ಅಬ್ಬರಿಸಿದ ಶೋಯೆಬ್ ಮಲಿಕ್, ಅಜೇಯವಾಗಿ ಸೆಮಿಫೈನಲ್‌ಗೆ ಕಾಲಿಟ್ಟ ಪಾಕಿಸ್ತಾನಟಿ20 ವಿಶ್ವಕಪ್ 2021: ಅಬ್ಬರಿಸಿದ ಶೋಯೆಬ್ ಮಲಿಕ್, ಅಜೇಯವಾಗಿ ಸೆಮಿಫೈನಲ್‌ಗೆ ಕಾಲಿಟ್ಟ ಪಾಕಿಸ್ತಾನ

ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯ ಮುಕ್ತಾಯವಾದ ಬಳಿಕ ಆಯ್ಕೆ ಸಮಿತಿ ಮುಂಬರುವ ಸರಣಿಗೆ ತಂಡದ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದೆ. ಮುಂಬರುವ ಟಿ20 ಹಾಗೂ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ತಂಡ ಇಲ್ಲಿದೆ

ಭಾರತದ ಟಿ20 ಸ್ಕ್ವಾಡ್

ಭಾರತದ ಟಿ20 ಸ್ಕ್ವಾಡ್

ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಚೇತನ್ ಸಕಾರಿಯಾ, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ರಾಹುಲ್ ಚಾಹರ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ವರುಣ್ ಚಕ್ರವರ್ತಿ

ಟಿ20 ವಿಶ್ವಕಪ್: ಭಾರತದ ಕನಸು ಭಗ್ನ : ಅಫ್ಘಾನ್ ವಿರುದ್ಧ ಗೆದ್ದ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ

ಭಾರತ ಟೆಸ್ಟ್ ಸ್ಕ್ವಾಡ್

ಭಾರತ ಟೆಸ್ಟ್ ಸ್ಕ್ವಾಡ್

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಶುಭಮನ್ ಗಿಲ್, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಬಿ ಶಮಿ, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ , ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್.

ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್

ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada
ಟಿ20 ಹಾಗೂ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ

ಟಿ20 ಹಾಗೂ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಮಧ್ಯೆ ಮೊದಲಿಗೆ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ನವೆಂಬರ್ 17ರಂದು ಜೈಪುರದಲ್ಲಿ ನಡೆಯಲಿದ್ದು ಎರಡನೇ ಪಂದ್ಯ ನವೆಂಬರ್ 19 ರಾಂಚಿಯಲ್ಲಿ ಆಯೋಜನೆಯಾಗಲಿದೆ. ಅಂತಿಮ ಟಿ20 ಪಂದ್ಯ ನವೆಂಬರ್ 21 ಕೋಲ್ಕತ್ತಾದಲ್ಲಿ ನಡೆಯಲಿದೆ. ಇನ್ನು ಎರಡು ಟೆಸ್ಟ್ ಪಂದ್ಯಗಳ ಪೈಕಿ ಮೊದಲ ಪಂದ್ಯ ಕಾನ್ಪುರದಲ್ಲಿ ನವೆಂಬರ್ 25-29ರವರೆಗೆ ನಡೆಯಲಿದೆ. ಎರಡನೇ ಪಂದ್ಯ ಮುಂಬೈ ಮುಂಬೈನಲ್ಲಿ ಡಿಸೆಂಬರ್ 3-7ವರೆಗೆ ನಡೆಯಲಿದೆ.

Story first published: Tuesday, November 9, 2021, 11:05 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X