ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತದ ಕನಸು ಭಗ್ನ : ಅಫ್ಘಾನ್ ವಿರುದ್ಧ ಗೆದ್ದ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ

T20 world cup: New Zealand won by 8 wickets against Afghanistan, India out from semi final race

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆರಂಭದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಈಗ ಸೆಮಿಫೈನಲ್ ಪಡೆಯದೇ ನಿರ್ಗಮಿಸುವುದು ಅಧಿಕೃತವಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತದ ಸೆಮಿ ಫೈನಲ್ ಕನಸಿಕೆ ಮತ್ತೊಮ್ಮೆ ಅಡ್ಡಿಯಾಗಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಗ್ರೂಫ್ 2ರ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆಯಬೇಕಿದ್ದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ತಂಡಕ್ಕೆ ಶರಣಾಗಲೇಬೇಕಿತ್ತು. ಹಾಗಿದ್ದರೆ ಮಾತ್ರವೇ ಭಾರತದ ಸೆಮಿಫೈನಲ್ ಕನಸು ನನಸಾಗಲು ಸಾಧ್ಯವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್‌ಗಳ ಅಂತರದ ಭರ್ಜರಿ ಜಯವನ್ನು ಸಾಧಿಸಿದೆ.

ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಆರಂಭಿಕರ ವೈಫಲ್ಯ ತಂಡಕ್ಕೆ ಆಘಾತ ನೀಡಿತು. ಕೇವಲ 19 ರನ್‌ಗಳಿಗೆ ಅಫ್ಘಾನಿಸ್ತಾನ ತಂಡ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಜೊತೆಯಾದ ಗುಲದ್ದೀನ್ ಹಾಗು ನಜೀಬುಲ್ಲಾ ಸಣ್ಣ ಚೇತರಿಕೆ ನೀಡಿದರು. ತಂಡದ ಮೊತ್ತ 56 ರನ್‌ಗಳಾಗಿದ್ದಾಗ 15 ರನ್‌ಗಳಿಸಿದ್ದ ಗುಲದ್ದೀನ್ ಕೂಡ ವಿಕೆಟ್ ಕಳೆದುಕೊಂಡರು.

ನಂತರ ಉತ್ತಮ ಆಟವಾಡುತ್ತಿದ್ದ ನಜೀಬುಲ್ಲಾಗೆ ನಾಯಕ ನಬಿ ಸಾಥ್ ನೀಡಿದರು. ನಜೀಬುದ್ದೀನ್ ತಂಡದ ಸ್ಕೋರ್ ಹೆಚ್ಚಿಸುವ ಎಲ್ಲಾ ಪ್ರಯತ್ನಗಳನ್ನು ಕೂಡ ನಡೆಸಿದರು. ಈ ಜೋಡಿ ತಂಡದ ಮೊತ್ತ 115 ರನ್‌ಗಳಾಗುವವರೆಗೆ ಕ್ರೀಸ್‌ ಕಚ್ಚಿ ಬ್ಯಾಟಿಂಗ್ ನಡೆಸಿದರು. ನಬಿ ನಿಧಾನವಾಗಿ ಆಡುತ್ತಿದ್ದರೆ ನಜೀಬುಲ್ಲಾ ಉತ್ತಮವಾಗಿ ಬ್ಯಾಟ್ ಬೀಸಿದರು. ನಂತರ ನಬಿ ತಮ್ಮ ವಿಕೆಟ್ ಕಳೆದುಕೊಂಡರು. ಅದಾದ ಬಳಿಕ ತಂಡದ ಮೊತ್ತಕ್ಕೆ ನಾಲ್ಕು ರನ್ ಸೇಧರ್ಪಡೆಯಾಗುತ್ತಿದ್ದಂತೆಯೇ ನಜೀಬುಲ್ಲಾ ಕೂಡ ವಿಕೆಟ್ ಕಳೆದುಕೊಂಡರು. 48 ಎಸೆತ ಎದುರಿಸಿದ ನಜೀಬುಲ್ಲಾ 73 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು.

ನಂತರ ಮತ್ತೊಮ್ಮೆ ನ್ಯೂಜಿಲೆಂಡ್ ಬೌಲರ್‌ಗಳ ಕೈಮೇಲಾಯಿತು. ಅದರಲ್ಲೀ 20ನೇ ಓವರ್‌ನಲ್ಲಿ ನೀಶಮ್ ಕೇವಲ 2 ರನ್‌ಗಳನ್ನು ಮಾತ್ರವೇ ನೀಡುವ ಮೂಲಕ ಅಫ್ಘಾನಿಸ್ತಾನದ ಮೊತ್ತ 125ರ ಗಡಿ ದಾಟದಂತೆ ನೋಡಿಕೊಂಡರು. ಈ ಮೂಲಕ ನ್ಯೂಜಿಲೆಂಡ್ ತಂಡ ಸುಲಭ ಸವಾಲನ್ನು ಪಡೆದುಕೊಂಡಿತು. ಇನ್ನು ನ್ಯೂಜಿಲೆಂಡ್ ತಂಡದ ಪರವಾಗಿ ಟ್ರೆಂಟ್ ಬೋಲ್ಟ್ 3 ವಿಕೆಟ್ ಕಿತ್ತಿ ಮಿಂಚಿದರೆ ಸೌಥಿ 2 ವಿಕೆಟ್ ಪಡೆದರು. ಸ್ಯಾಂಟ್ನರ್ ಹಾಗೂ ಇಶ್ ಸೋಧಿ ತಲಾ 1 ವಿಕೆಟ್ ಸಂಪಾದಿಸಿದರು.

ಅಫ್ಘಾನಿಸ್ತಾನ ನೀಡಿದ 125 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಮೊದಲ ವಿಕೆಟ್‌ಗೆ ಹೇಳಿಕೊಳ್ಳುವಂತಾ ಉತ್ತಮ ಆರಂಬ ಪಡೆಯಲು ಸಾಧ್ಯವಾಗಲಿಲ್ಲ. ಡೇರ್ಯಲ್ ಮಿಚೆಲ್ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ತಂಡದ ಮೊತ್ತ 57 ರನ್‌ಗಳಾಗಿದ್ದಾಗ ಮಾರ್ಟಿನ್ ಗಪ್ಟಿಲ್ ಕೂಡ ವಿಕೆಟ್ ಕಳೆದುಕೊಂಡರು. ಆದರೆ ಅದಾದ ಬಳಿಕ ಕಿವೀಸ್ ನಾಯಕ ಹಾಗೂ ಡೆವೋನ್ ಕಾನ್ವೆ ಮುರಿಯದ ಮೂರನೇ ವಿಕೆಟ್‌ಗೆ 68 ರನ್‌ಗಳ ಅಜೇಯ ಜೊತೆಯಾಟ ದಾಖಲಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದಿತ್ತರು. ಈ ಮೂಲಕ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ತಾನು ಪ್ರವೇಶ ಪಡೆದಿದ್ದಲ್ಲದೆ ಭಾರತ ಹಾಗೂ ಅಫ್ಘಾನಿಸ್ತಾನ ಎರಡು ತಂಡಗಳಿಗೂ ಕೂಡ ಮನೆಯ ಹಾದಿ ತೋರಿಸಿದೆ.

ಇನ್ನು ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ರಶೀದ್ ಖಾನ್ ಪ್ರಮುಖ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ರಶೀದ್ 400 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಮತ್ತೊಂದೆಡೆ ಭಾರತ ಕಳೆದ 9 ವರ್ಷಗಳ ನಂತರ ಐಸಿಸಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೆ ತಲುಪದೆ ತವರಿಗೆ ವಾಪಾಸಾಗುವಂತಾಗಿದೆ.

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೋಲ್ಟ್

ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್ಮನ್

ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಝದ್ರಾನ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ನವೀನ್-ಉಲ್-ಹಕ್, ಹಮೀದ್ ಹಸನ್, ಮುಜೀಬ್ ಉರ್ ರಹಮಾನ್
ಆಡುವ ಬಳಗ: ಶರಫುದ್ದೀನ್ ಅಶ್ರಫ್, ಹಷ್ಮತುಲ್ಲಾ ಶಾಹಿದಿ, ಫರೀದ್ ಅಹ್ಮದ್, ಉಸ್ಮಾನ್ ಘನಿ

ಟೀಂ‌ ಇಂಡಿಯಾ ಪಾಲಿಗೆ ಇದು ಅತಿ ಕೆಟ್ಟ ದಾಖಲೆ | Oneindia Kannada

Story first published: Monday, November 8, 2021, 9:41 [IST]
Other articles published on Nov 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X