ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಪ್ರದರ್ಶನದಿಂದ ತೃಪ್ತಿಯಾಗಿದೆ: ಅದ್ಭುತ ಪ್ರದರ್ಶನದ ಬಗ್ಗೆ ಶುಬ್ಮನ್ ಗಿಲ್ ಸಂತಸ

India vs New Zealand: Shubman Gill happy for his performance said Its satisfying

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾದ ಯುವ ಆರಂಬಿಕ ಆಟಗಾರ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿದ್ದಾರೆ. ಈ ಮೂಲಕ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದು ತಮ್ಮ ಪ್ರದರ್ಶನದ ಬಗ್ಗೆ ಪಂದ್ಯದ ಬಳಿಕ ಸಂತಸ ಹಂಚಿಕೊಂಡಿದ್ದಾರೆ. ಶುಬ್ಮನ್ ಗಿಲ್ ಕಳೆದ ನಾಲ್ಕು ಏಕದಿನ ಪಂದ್ಯಗಳಲ್ಲಿ ಮೂರು ಶತಕ ಬಾರಿಸಿದ್ದಾರೆ.

"ಉತ್ತಮ ಪ್ರದರ್ಶನ ನೀಡಿದ ಬಳಿಕ ಉತ್ತಮ ಭಾವನೆಯುಂಟಾಗುತ್ತದೆ. ನಿಜಕ್ಕೂ ತೃಪ್ತಿದಾಯಕವಾಗಿದೆ. ಆಟದಲ್ಲಿ ನಾನು ಹೆಚ್ಚಿನ ಬದಲಾವಣೆ ಮಾಡಿಕೊಂಡಿಲ್ಲ. ಉತ್ತಮ ಆರಂಭ ಪಡೆದುಕೊಂಡಿರುವುದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವತ್ತ ಚಿತ್ತ ನೆಡುತ್ತೇನೆ" ಎಂದು ಪಂದ್ಯದ ಮುಕ್ತಾಯದ ಬಳಿಕ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್: ಈ ಸಾಧನೆ ಮಾಡಿದ 2ನೇ ಬೌಲರ್ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್: ಈ ಸಾಧನೆ ಮಾಡಿದ 2ನೇ ಬೌಲರ್

ಶುಬ್ಮನ್ ಗಿಲ್ ಈವರೆಗೆ 21 ಏಕದಿನ ಪಂದ್ಯಗಳನ್ನು ಆಡಿದ್ದು 73.76ರ ಸರಾಸರಿಯಲ್ಲಿ 1254 ರನ್‌ಗಳನ್ನು ಗಳಿಸಿದ್ದಾರೆ. 2019ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಆಡಿರುವ 19 ಪಂದ್ಯಗಳಲ್ಲಿ ಗಿಲ್ 82.53ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭದಿಂದಲೇ ಸ್ಪೋಟಕವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ ಶುಬ್ಮನ್ ಗಿಲ್. ತಮ್ಮ ಮೊದಲ 50 ರನ್‌ಗಳನ್ನು 33 ಎಸೆತಗಳಲ್ಲಿ ಪೂರೈಸಿದ ಗಿಲ್ ತಮ್ಮ ಅದ್ಭುತ ಬ್ಯಾಟಿಂಗನ್ನು ಬಳಿಕವೂ ಮುಂದುವರಿಸಿದರು. 13 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿ ಕೇವಲ 89 ಎಸೆತಗಳಲ್ಲಿ ಶುಬ್ಮನ್ ಗಿಲ್ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಶುಬ್ಮನ್ ಗಿಲ್ ಸತತವಾಗಿ ಅಮೋಘ ಪ್ರದರ್ಶನ ನೀಡುತ್ತಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಸಿಡಿಸಿರುವ ಮೂರನೇ ಶತಕ ಇದಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ 116 ರನ್ ಸಿಡಿಸಿದ್ದ ಶುಬ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 208 ರನ್‌ಗಳಿಸಿ ಅಮೋಘ ದ್ವಿಶತಕ ಸಿಡಿಸಿದ್ದರು. ಇದೀಗ ಮತ್ತೊಂದು ಭರ್ಜರಿ ಶತಕ ಸಿಡಿಸಿದ್ದಾರೆ.

ಇನ್ನು ಭರ್ಜರಿ ಪ್ರದರ್ಶನದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಳೆ ಈವರೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಮೂರು ಪಂದ್ಯಗಳ ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಕೊಹ್ಲಿ 283 ರನ್‌ಗಳಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಆದರೆ ಇದೀಗ ಆ ದಾಖಲೆಯನ್ನು ಗಿಲ್ ಮುರಿದಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 300ಕ್ಕೂ ಅಧಿಕ ರನ್ ದಾಖಲಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

Story first published: Wednesday, January 25, 2023, 2:30 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X