ಭಾರತ vs ಶ್ರೀಲಂಕಾ: ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ 5 ಯುವ ಕ್ರಿಕೆಟಿಗರು

ಕೊಲಂಬೋ, ಜುಲೈ 23: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಮತ್ತೊಮ್ಮೆ ಭಾರೀ ಬದಲಾವಣೆ ಮಾಡಿಕೊಂಡಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಹೀಗಾಗಿ ಯುವ ಆಟಗಾರರಿಗೆ ಅವಕಾಶವನ್ನು ಮಾಡಿಕೊಡಲು ನಿರ್ಧರಿಸಿದೆ.

ಈ ಪಂದ್ಯದಲ್ಲಿ ಭಾರತ ಒಟ್ಟು ಆರು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದರಲ್ಲಿ ಐವರು ಆಟಗಾರರು ಭಾರತದ ಏಕದಿನ ತಂಡದಲ್ಲಿ ಚೊಚ್ಚಲ ಬಾರಿಗೆ ಅವಕಾಶವನ್ನು ಸಂಪಾದಿಸಿದ್ದಾರೆ. ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಾಹುಲ್ ಚಹರ್, ಚೇತನ್ ಸಕರಿಯಾ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಾಸ್ ಪ್ರಕ್ರಿಯೆಗೂ ಮುನ್ನ ಈ ಆಟಗಾರರು ಏಕದಿನ ಪಂದ್ಯದ ಕ್ಯಾಪ್ ಸ್ವೀಕರಿಸಿದರು. ಮತ್ತೋರ್ವ ಆಟಗಾರ ನವ್‌ದೀಪ್ ಸೈನಿ ಕೂಡ ಇಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

1980ರ ನಂತರ ಇದೇ ಮೊದಲು!

1980ರ ನಂತರ ಇದೇ ಮೊದಲು!

ಭಾರತದ ಮೊದಲ ಏಕದಿನ ಪಂದ್ಯವನ್ನು ಹೊರತುಪಡಿಸಿದರೆ ಇದು ಕೇವಲ ಎರಡನೇ ಬಾರಿಗೆ ಐದು ಆಟಗಾರರು ಭಾರತೀಯ ಕ್ರಿಕೆಟ್‌ನ ಏಕದಿನ ತಂಡದಲ್ಲಿ ಪದಾರ್ಪಣೆ ಮಾಡಿದ್ದಾರೆ. ಇದಕ್ಕೂ ಮುನ್ನ 1980ರಲ್ಲಿ ದಿಲಿಪ್ ದೋಷಿ, ಕೀರ್ತಿ ಆಜಾದ್, ರೋಜರ್ ಬಿನ್ನಿ, ಸಂದೀಪ್ ಪಾಟೀಲ್ ಮತ್ತು ತಿರುಮಲೈ ಶ್ರೀನಿವಾಸನ್ ಒಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.

ಪಡಿಕ್ಕಲ್‌ಗಿಲ್ಲ ಸ್ಥಾನ

ಪಡಿಕ್ಕಲ್‌ಗಿಲ್ಲ ಸ್ಥಾನ

ಇಷ್ಟು ಬದಲಾವಣೆ ಮಾಡಿದರೂ ಕರ್ನಾಟಕದ ಯುವ ಆಟಗಾರ ದೇವದತ್ ಪಡಿಕ್ಕಲ್ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫರಾಗಿದ್ದಾರೆ. ಆರಂಭಿಕನಾಗಿ ಪೃಥ್ವಿ ಶಾ ಅವರನ್ನು ಮುಂದುವರಿಸಲು ತಂಡ ನಿರ್ಧರಿಸಿದ ಹಿನ್ನೆಲೆಯಲ್ಲಿ ದೇವತ್ ಪಡಿಕ್ಕಲ್ ಈ ಅವಕಾಶವನ್ನು ತಪ್ಪಸಿಕೊಂಡಿದ್ದಾರೆ.

ಲಂಕಾ ತಂಡದಲ್ಲೂ ಮೂರು ಬದಲಾವಣೆ

ಲಂಕಾ ತಂಡದಲ್ಲೂ ಮೂರು ಬದಲಾವಣೆ

ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲ ಆಡಿದ್ದ ಆಡಿದ್ದ ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್ ಹಾಗೂ ಕುಲ್‌ದೀಪ್ ಯಾದವ್‌ಗೆ ವಿಶ್ರಾಂತಿಯನ್ನು ನೀಡಲಾಗಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಕೂಡ ಈ ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಿಕೊಂಡಿದೆ. ಪ್ರವೀಣ್ ಜಯವಿಕ್ರಮ, ಅಖಿಲ ಧನಂಜಯ ಮತ್ತು ರಮೇಶ್ ಮೆಂಡಿಸ್ ಆಡುವ ಬಳಗದಲ್ಲಿ ಅವಕಾಶವನ್ನು ಸಂಪಾದಿಸಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ಆಡುವ ಬಳಗ

ಭಾರತ ಹಾಗೂ ಶ್ರೀಲಂಕಾ ಆಡುವ ಬಳಗ

ಭಾರತ ಆಡುವ ಬಳಗ:

ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

ಶ್ರೀಲಂಕಾ ಆಡುವ ಬಳಗ:

ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ನಾಯಕ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ಅಕಿಲಾ ದಾನಂಜಯ, ದುಷ್ಮಂತ ಚಮೀರಾ, ಪ್ರವೀಣ್ ಜಯವಿಕ್ರಮಾ

For Quick Alerts
ALLOW NOTIFICATIONS
For Daily Alerts
Story first published: Friday, July 23, 2021, 16:08 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X