ಭಾರತ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರಿಂದ ಶ್ರೀಲಂಕಾ ಕ್ರಿಕೆಟ್‍ಗೆ ಬಂದದ್ದು ಎಷ್ಟು ಕೋಟಿ ಆದಾಯ ಗೊತ್ತಾ?

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿದ್ದ ಕಾರಣ ಶಿಖರ್ ಧವನ್ ನೇತೃತ್ವದ ಪ್ರತ್ಯೇಕ ಭಾರತ ತಂಡವನ್ನು ರಚಿಸಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಮತ್ತು 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡಲು ಶ್ರೀಲಂಕಾಗೆ ಬಿಸಿಸಿಐ ಕಳುಹಿಸಿತು.

ಸಮಸ್ಯೆಯ ಸುಳಿಯಲ್ಲಿ ಭಾರತ!; ಈ ಆಟಗಾರರ ಮೇಲೆ ನಿಂತಿದೆ ಎರಡನೇ ಟೆಸ್ಟ್ ಫಲಿತಾಂಶಸಮಸ್ಯೆಯ ಸುಳಿಯಲ್ಲಿ ಭಾರತ!; ಈ ಆಟಗಾರರ ಮೇಲೆ ನಿಂತಿದೆ ಎರಡನೇ ಟೆಸ್ಟ್ ಫಲಿತಾಂಶ

ಹೀಗೆ ಶ್ರೀಲಂಕಾ ಪ್ರವಾಸವನ್ನು ಕೈಗೊಂಡ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಯಾವುದೇ ಅಡಚಣೆಗಳಿಲ್ಲದೆ ಮುಗಿಸಿತು. ಆದರೆ ಕೊನೆಯದಾಗಿ ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವೆ ಆರಂಭವಾದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ದೊಡ್ಡ ಮಟ್ಟದಲ್ಲಿಯೇ ಅಡಚಣೆಗಳನ್ನು ಎದುರಿಸಿದರು. ತಂಡದ ಆಲ್ ರೌಂಡರ್ ಆಟಗಾರ ಕೃನಾಲ್ ಪಾಂಡ್ಯ ಕೊರೊನಾ ಸೋಂಕಿಗೆ ಒಳಗಾದರು. ಹೀಗಾಗಿ ಕೊನೆಯ 2 ಟಿ ಟ್ವೆಂಟಿ ಪಂದ್ಯಗಳು ಮುಂದೂಡಲ್ಪಟ್ಟವು. ಕೃನಾಲ್ ಪಾಂಡ್ಯಗೆ ಕೊರೋನಾವೈರಸ್ ಪಾಸಿಟಿವ್ ವರದಿ ಬಂದ ಕಾರಣ ಪಾಂಡ್ಯ ಸಂಪರ್ಕದಲ್ಲಿದ್ದ ಟೀಮ್ ಇಂಡಿಯಾದ ಇತರ 7 ಆಟಗಾರರನ್ನು ತಂಡದಿಂದ ಹೊರಗಿಡಬೇಕಾದ ಪರಿಸ್ಥಿತಿ ಎದುರಾಯಿತು.

ಹೀಗೆ ತಮ್ಮ ತಂಡದ ಒಟ್ಟು 8 ಆಟಗಾರರನ್ನು ಎರಡನೇ ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯದಿಂದ ಹೊರಗಿಟ್ಟು ಉಳಿದ ಯುವ ಆಟಗಾರರನ್ನೇ ಬಳಸಿಕೊಂಡು ತಂಡದ ಕೋಚ್ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧದ ಕೊನೆಯ 2 ಟಿ ಟ್ವೆಂಟಿ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ತಂಡದ ಪ್ರಮುಖ ಆಟಗಾರರಿಲ್ಲದೇ ಯುವ ಆಟಗಾರರ ತಂಡ ಕೊನೆಯ 2 ಟಿ ಟ್ವೆಂಟಿ ಪಂದ್ಯಗಳನ್ನು ಸೋತಿತು. ಹೀಗೆ 3 ಪಂದ್ಯಗಳ ಟಿಟ್ವೆಂಟಿ ಸರಣಿಯನ್ನು ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 1-2 ಅಂತರದಲ್ಲಿ ಸೋತಿತು. ಹಾಗೂ ಇದಕ್ಕೂ ಮೊದಲೇ ನಡೆದಿದ್ದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 2-1 ಅಂತರದಲ್ಲಿ ಸರಣಿಯನ್ನು ಗೆದ್ದು ಬೀಗಿತ್ತು.

ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!

ಹೀಗೆ ಶ್ರೀಲಂಕಾ ಪ್ರವಾಸದಲ್ಲಿ ಹಲವಾರು ಅಡೆತಡೆಗಳು ಉಂಟಾದರೂ ಸಹ ಟೀಮ್ ಇಂಡಿಯಾ ಕೋಚ್ ಆಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ರಾಹುಲ್ ದ್ರಾವಿಡ್ ಯಾವುದೇ ಹಂತದಲ್ಲಿಯೂ ಸರಣಿಯನ್ನು ಸ್ಥಗಿತಗೊಳಿಸದೇ ಉಳಿದಿರುವ ಯುವ ಆಟಗಾರರನ್ನೇ ಬಳಸಿ ಶ್ರೀಲಂಕಾ ಪ್ರವಾಸ ಯಶಸ್ವಿಯಾಗುವಂತೆ ಮಾಡಿದರು. ಹೀಗಾಗಿಯೇ ಶ್ರೀಲಂಕಾ ಭಾರತ ವಿರುದ್ಧದ ಸರಣಿಯನ್ನು ಆಡುವುದರ ಮೂಲಕ ಕೋಟಿ ಕೋಟಿ ಆದಾಯವನ್ನು ಪಡೆದುಕೊಂಡಿದ್ದು ಅದರ ಮಾಹಿತಿ ಈ ಕೆಳಕಂಡಂತಿದೆ.

ಶ್ರೀಲಂಕಾ-ಭಾರತ ಸರಣಿಗಳಿಂದ ಬಂದ ಆದಾಯ ಕೋಟಿ ಕೋಟಿ!

ಶ್ರೀಲಂಕಾ-ಭಾರತ ಸರಣಿಗಳಿಂದ ಬಂದ ಆದಾಯ ಕೋಟಿ ಕೋಟಿ!

ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವೆ ನಡೆದ ನಿಯಮಿತ ಓವರ್‌ಗಳ ಸರಣಿಗಳಿಂದ ಶ್ರೀಲಂಕಾ ಕ್ರಿಕೆಟ್‍ಗೆ ಬಂದ ಒಟ್ಟು ಆದಾಯ 107 ಕೋಟಿ ಅಂದರೆ ಶ್ರೀಲಂಕಾ ರೂಪಾಯಿಯಲ್ಲಿ ಸುಮಾರು 280 ಕೋಟಿ ಆದಾಯ ಶ್ರೀಲಂಕಾ ಕ್ರಿಕೆಟ್‌ಗೆ ಸಿಕ್ಕಿದೆ.

ರಾಹುಲ್ ದ್ರಾವಿಡ್‌‌ಗೆ ಧನ್ಯವಾದ ಅರ್ಪಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ರಾಹುಲ್ ದ್ರಾವಿಡ್‌‌ಗೆ ಧನ್ಯವಾದ ಅರ್ಪಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಇನ್ನು ತಮ್ಮ ಕ್ರಿಕೆಟ್ ಮಂಡಳಿಗೆ ಇಷ್ಟು ದೊಡ್ಡ ಮಟ್ಟದ ಆದಾಯ ಬಂದಿರುವುದರ ಕುರಿತು ಸಂತಸ ವ್ಯಕ್ತಪಡಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾರತ ತಂಡದ ತರಬೇತುದಾರನಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ರಾಹುಲ್ ದ್ರಾವಿಡ್‌‌ಗೆ ಧನ್ಯವಾದವನ್ನು ಅರ್ಪಿಸಿದೆ. ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಾ ಸಂಕಷ್ಟದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಭಾರತ ಸರಣಿಯಿಂದ ಬಂದಿರುವ ಆದಾಯ ಬಹುದೊಡ್ಡದು ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಹೇಳಿದ್ದಾರೆ.

ಟೀಮ್ ಇಂಡಿಯಾ ವಿದೇಶಿ ಅಭಿಮಾನಿಯ ವಿಡಿಯೋ ಫುಲ್ ವೈರಲ್ | Oneindia Kannada
ಹಲವಾರು ಸಮಸ್ಯೆ ಎದುರಿಸಿದ್ದ ಟೀಮ್ ಇಂಡಿಯಾ

ಹಲವಾರು ಸಮಸ್ಯೆ ಎದುರಿಸಿದ್ದ ಟೀಮ್ ಇಂಡಿಯಾ

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು. ತಂಡದ ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ತಗುಲಿದ ನಂತರ ಆತನ ಸಂಪರ್ಕದಲ್ಲಿದ್ದ ಉಳಿದ ಆಟಗಾರರನ್ನೂ ಸಹ ಐಸೋಲೇಷನ್ ಮಾಡಲಾಯಿತು. ತಂಡದ ಪ್ರಮುಖ ಆಟಗಾರರೆಲ್ಲಾ ಐಸೋಲೇಶನ್ ಆದರೂ ಸಹ ಛಲಬಿಡದ ಟೀಮ್ ಇಂಡಿಯಾ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ಅನುಭವವೇ ಇಲ್ಲದ ಆಟಗಾರರನ್ನು ಇಟ್ಟುಕೊಂಡು ಶ್ರೀಲಂಕಾ ವಿರುದ್ಧದ ಸರಣಿಯನ್ನು ಸಂಪೂರ್ಣಗೊಳಿಸಿತು.

For Quick Alerts
ALLOW NOTIFICATIONS
For Daily Alerts
Story first published: Monday, August 16, 2021, 17:35 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X