ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ ಟಿ20: ಮಳೆಗೆ ಅಹುತಿಯಾದ ಮೊದಲ ಪಂದ್ಯ

India Vs Sri Lanka; Match Cancelled Due To Wet Pitch

ಈ ದಶಕದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ. ಮಳೆಯಿಂದಾಗಿ ಪಿಚ್ ಒದ್ದೆಯಾದ ಕಾರಣ ಮೊದಲ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಪಂದ್ಯ ವೀಕ್ಷಿಸಲು ಗುವಾಹಟಿ ಮೈದಾನಕ್ಕೆ ಆಗಮಿಸಿದ್ದ 50ಸಾವಿರ ಜನ ಹಾಗೂ ಟಿವಿಯಲ್ಲಿ ನೋಡಲು ಕಾಯುತ್ತಿದ್ದ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಟಾಸ್‌ ಆಗಿ ಇನ್ನೇನು ಪಂದ್ಯ ಆರಂಭವಾಗಬೇಕು ಎಂಬ ಹಂತದಲ್ಲಿ ಜೋರಾಗಿ ಮಳೆ ಆರಂಭವಾಯಿತು. ಮೊದಲೇ ಮಳೆ ಪಂದ್ಯಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿಯಾಗಬಹುದು ಎಂಬ ನಿರೀಕ್ಷೆಯಿದ್ದ ಕಾರಣ ಓವರ್‌ ಕಡಿತಗೊಳಿಸಿಯಾದರು ಪಂದ್ಯ ನಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಪಿಚ್ ಕ್ಯೂರೇಟರ್‌ಗಳ ದಡ್ಡತನದಿಂದ ಇಡೀ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಬೇಕಾಯಿತು.

ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!

ಆರಂಭದಲ್ಲಿ ಜೋರಾಗಿ ಮಳೆ ಬಂದು ಪಂದ್ಯ ವಿಳಂಬಕ್ಕೆ ಕಾರಣವಾಯಿತು. ಆದರೆ ಬಳಿಕ ಮಳೆ ಕಡಿಮೆಯಾಗಿ ಪಂದ್ಯ ಆರಂಭವಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಆದರೆ ಈ ಸಂದರ್ಭದಲ್ಲಿ ಪಿಚ್‌ ಕ್ಯುರೇಟರ್, ಮೈದಾನದ ಸಿಬ್ಬಂದಿಗಳು ದೊಡ್ಡ ಯಡವಟ್ಟನ್ನು ಮಾಡಿದ್ದು ಪಂದ್ಯ ನಡೆಯದೇ ಇರಲು ಕಾರಣವಾಯಿತು.

ಮಳೆಯ ಸಂದರ್ಭದಲ್ಲಿ ಪಿಚ್‌ಗೆ ನೀರು ಬೀಳದಂತೆ ಪರದೆಯನ್ನು ಹಾಕಲಾಗಿತ್ತು. ಪಿಚ್‌ನ ಹೊರಭಾಗ ಪಂದ್ಯಕ್ಕೆ ಸಂಪೂರ್ಣ ಸಿದ್ಧವಾಗಿತ್ತು. ಆದರೆ ಪರದೆ ಸರಿಸುವ ಸಂದರ್ಭದಲ್ಲಿ ಪರದೆಯ ಮೇಲಿದ್ದ ನೀರು ಪಿಚ್‌ನ ಮೇಲೆ ಬಿದ್ದ ಕಾರಣ ಪಿಚ್ ಸಂಪೂರ್ಣ ಒದ್ದೆಯಾಯಿತು. ಇದು ಈ ದಶಕದ ಮೊದಲ ಪಂದ್ಯವನ್ನು ಕಣ್ತುಂಬಿಕೊಳ್ಳು ಕಾಯುತ್ತಿದ್ದ ಎಲ್ಲಾ ಕ್ರಿಕೆಟ್‌ ಅಭಿಮಾನಿಗಳಿಗೂ ನಿರಾಸೆ ಉಂಟು ಮಾಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಆಟ ನಿಲ್ಲಿಸಿದ ಆಲ್ ರೌಂಡರ್ ಇರ್ಫಾನ್ ಪಠಾಣ್!

ಪಿಚ್‌ ಸಿದ್ದ ಪಡಿಸಲು ನಾನಾ ಪ್ರಯತ್ನಗಳನ್ನು ನಡೆಸಲಾಯಿತು. ಹೇರ್‌ ಡ್ರೈಯರ್‌, ಐರನ್‌ ಬಾಕ್ಸ್‌ನಂತಾ ಸಾಧನಗಳ ಮೂಲಕ ಪಿಚ್ ಒಣಗಿಸುವ ಪ್ರಯತ್ನ ನಡೆಸಲಾಯಿತಾದರೂ ಕೂಡ ಈ ಎಲ್ಲಾ ಪ್ರಯತ್ಮಗಳು ವಿಫಲವಾಗವು. ಬಳಿಕ ಕೊನೆಯ ಬಾರಿಗೆ ರಾತ್ರಿ 9:45 ಗಂಟೆಗೆ ಕೊನೆಯ ಬಾರಿಗೆ ಪಿಚ್‌ ಪರೀಕ್ಷೆಗೆ ಬಂದ ಅಂಪೈರ್‌ಗಳು ಪಂದ್ಯವನ್ನು ಅಧೀಕೃತವಾಗಿ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಎರಡನೇ ಪಂದ್ಯ ಮಂಗಳವಾರ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

Story first published: Sunday, January 5, 2020, 22:25 [IST]
Other articles published on Jan 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X