ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್ ಆಟ ನಿಲ್ಲಿಸಿದ ಆಲ್ ರೌಂಡರ್ ಇರ್ಫಾನ್ ಪಠಾಣ್!

Irfan Pathan announces retirement from all forms of cricket

ನವದೆಹಲಿ, ಜನವರಿ 4: ಆಲ್ ರೌಂಡರ್ ಇರ್ಫಾನ್ ಪಠಾಣ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35ರ ಹರೆಯದ ಪಠಾಣ್ 2019ರ ಫೆಬ್ರವರಿಯಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡಿದ್ದರು. ಅದೇ ಪಠಾಣ್ ಆಡಿದ ಕಡೇಯ ಪಂದ್ಯ.

ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!

ಡಿಸೆಂಬರ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಹರಾಜಿ ಪೂಲ್‌ನಲ್ಲಿ ಪಠಾಣ್ ಹೆಸರು ಕೂಡ ನೋಂದಾಯಿಸಿಕೊಳ್ಳದಿದ್ದರಿಂದ ಅದಾಗಲೇ ಪಠಾಣ್ ನಿವೃತ್ತಿ ನೀಡುವ ಮುನ್ಸೂಚನೆ ಸಿಕ್ಕಿತ್ತು. ಅದರಂತೆ ಶನಿವಾರ (ಜನವರಿ 4) ಭಾರತೀಯ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಠಾಣ್ ಆಟ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್

'ಈ ದಿನ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಶ್ರೇಷ್ಠ ಕ್ರಿಕೆಟಿಗರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಂತರೊಂದಿಗೆ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಒಂದಿಷ್ಟು ಕ್ಷಣ ಕಳೆಯುವ ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಇದು ನಾನು ವೃತ್ತಿ ಬದುಕು ನಿಲ್ಲಿಸುವ ಸಮಯವೆಂದು ಭಾವಿಸಿದ್ದೇನೆ,' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಪಠಾಣ್ ಹೇಳಿಕೊಂಡಿದ್ದಾರೆ.

ಆಲ್ ರೌಂಡರ್ ಯೂಸುಫ್ ಪಠಾಣ್ ಸಹೋದರರಾಗಿರುವ ಇರ್ಫಾನ್, 40 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 31.57ರ ಸರಾಸರಿಯಂತೆ 1105 ರನ್, 87 ಏಕದಿನ ಇನ್ನಿಂಗ್ಸ್‌ಗಳಲ್ಲಿ 1544 ರನ್, 14 ಟಿ20ಐ ಇನ್ನಿಂಗ್ಸ್‌ಗಳಲ್ಲಿ 172 ರನ್ ಗಳಿಸಿದ್ದಾರೆ. 54 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 100 ವಿಕೆಟ್, 118 ಏಕದಿನ ಇನ್ನಿಂಗ್ಸ್‌ಗಳಲ್ಲಿ 173 ವಿಕೆಟ್‌, 23 ಟಿ20ಐ ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್‌ ದಾಖಲೆ ಹೊಂದಿದ್ದಾರೆ.

Story first published: Saturday, January 4, 2020, 18:41 [IST]
Other articles published on Jan 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X