ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದ್ಯಾರ ಕಣ್ ಬಿತ್ತೋ ಏನೋ? ವಿರಾಟ್ ಕೊಹ್ಲಿಗೆ ಏನಾಗಿದೆ, ಅವರ ಬ್ಯಾಟಿಗೆ ಏನಾಗಿದೆ?

Indian Team Captain Virat Kohli Back To Back Failure, Serious Concern For Team India

ಟಿ20 ಸರಣಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ, ಟೀಂ ಇಂಡಿಯಾ ಸತತವಾಗಿ ವೈಫಲ್ಯವನ್ನು ಕಾಣುತ್ತಿದೆ. ಈ ಸೋಲಿಗೆ ಕಾರಣ ಪ್ರಮುಖ ಕಾರಣ ಬ್ಯಾಟ್ಸ್ ಮ್ಯಾನ್ ಗಳು ಹೆಚ್ಚಿನ ರನ್ ಪೇರಿಸಲು ಸಾಧ್ಯವಾಗದೇ ಇರುತ್ತಿರುವುದು.

ತನ್ನ ಕ್ರಿಕೆಟ್ ವೃತ್ತಿ ಬದುಕು ಆರಂಭವಾದಾಗಿನಿಂದ, ಹಿಂದೆ ತಿರುಗಿ ನೋಡದಂತಹ ಪ್ರಚಂಡ ಫಾರಂ ನಲ್ಲಿದ್ದ ಟೀಂ ಇಂಡಿಯಾದ ನಾಯಕ ಕೊಹ್ಲಿ, ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಸತತವಾಗಿ ಬ್ಯಾಟಿಂಗ್ ನಲ್ಲಿ, ನಾಯಕತ್ವದ ಹೊಣೆ ನಿಭಾಯಿಸುವಲ್ಲಿ ಸೋಲುತ್ತಿದ್ದಾರೆ.

9, 2, 19, 3, 14 : ಏನಾಯ್ತು 'ರನ್ ಮಷಿನ್' ವಿರಾಟ್ ಕೊಹ್ಲಿ!9, 2, 19, 3, 14 : ಏನಾಯ್ತು 'ರನ್ ಮಷಿನ್' ವಿರಾಟ್ ಕೊಹ್ಲಿ!

ಐವತ್ತು, ನೂರು ತನಗೆ ಲೆಕ್ಕವೇ ಇಲ್ಲದ ಹಾಗೇ, ಬೌಲರ್ ಗಳಿಗೆ ಸಿಂಹಸ್ವಪ್ನವಾಗಿದ್ದ ವಿರಾಟ್ ಕೊಹ್ಲಿ, ಹಾಲೀ ಟೆಸ್ಟ್ ಸರಣಿಯ ನಾಲ್ಕೂ ಇನ್ನಿಂಗ್ಸ್ ನಲ್ಲಿ ರನ್ ಪೇರಿಸಲು ವಿಫಲರಾಗಿದ್ದಾರೆ.

ಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿ

ಬ್ಯಾಟಿಂಗ್ ನಲ್ಲಿ ವಿಫಲರಾಗುತ್ತಿರುವುದು ಒಂದೆಡೆಯಾದರೆ, ನಾಯಕತ್ವ ಹೊಣೆ ನಿಭಾಯಿಸುವಲ್ಲೂ ಕೊಹ್ಲಿ ಎಡವುತ್ತಿರುವುದಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ

ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ

" ಐ ಆಮ್ ಆಲ್ರೈಟ್, ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಹೊರಗಿನ ಜನರಂತೆ ಯೋಚಿಸಲು ನಾನು ಬಯಸುವುದಿಲ್ಲ. ಒಂದು ಇನ್ನಿಂಗ್‌ ನಲ್ಲಿ ವಿಫಲವಾಗಿದ್ದಕ್ಕೆ, ಹೊರಗಡೆ ನನ್ನ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡುತ್ತಿರುವುದು ನನಗೆ ತಿಳಿದಿದೆ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ" ಇದು ವಿರಾಟ್ ಕೊಹ್ಲಿ, ನ್ಯೂಜಿಲೆಂಡ್‌ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮುನ್ನ ಹೇಳಿದ ಮಾತು.

ವಿ.ವಿ.ಎಸ್ ಲಕ್ಷ್ಮಣ್ ಬೇಸರ

ವಿ.ವಿ.ಎಸ್ ಲಕ್ಷ್ಮಣ್ ಬೇಸರ

ಇನ್ನು ಮೊದಲ ಟೆಸ್ಟ್ ನಲ್ಲಿ ಕೊಹ್ಲಿ ತಂತ್ರಗಾರಿಕೆಗೂ ಹಿರಿಯ ಆಟಗಾರರು ಬೇಸರ ವ್ಯಕ್ತ ಪಡಿಸಿದ್ದರು. ಹೆಚ್ಚಾಗಿ ತಮ್ಮ ಆಕ್ರಮಣಕಾರಿ ಆಟ ಮತ್ತು ಧೋರಣೆಗೆ ಹೆಸರಾಗಿರುವ ಕೊಹ್ಲಿ, ಮೈದಾನದಲ್ಲಿ ಅಷ್ಟಾಗಿ ಅಗ್ರೆಸ್ಸೀವ್ ಆಗಿ ಕಾಣಿಸಿಕೊಳ್ಳಲಿಲ್ಲ. ಜೊತೆಗೆ, ಹೊಸ ಚೆಂಡನ್ನು ವೇಗಿಗಳಿಗೆ ನೀಡದೇ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ನೀಡಿದ್ದು ವರ್ಕೌಟ್ ಆಗಿರಲಿಲ್ಲ. ಮಾಜಿ ಆಟಗಾರರ ವಿ.ವಿ.ಎಸ್ ಲಕ್ಷ್ಮಣ್ ಇದನ್ನು ಪ್ರಶ್ನಿಸಿದ್ದರು.

ಕೊಹ್ಲಿಯನ್ನು ಔಟ್ ಮಾಡುವುದೇ ದೊಡ್ಡ ಸವಾಲು

ಕೊಹ್ಲಿಯನ್ನು ಔಟ್ ಮಾಡುವುದೇ ದೊಡ್ಡ ಸವಾಲು

"ರನ್ ಮೆಷಿನ್ ಎಂದೇ ಕರೆಯಲ್ಪಡುವ ಕೊಹ್ಲಿಯನ್ನು ಔಟ್ ಮಾಡುವುದೇ ದೊಡ್ಡ ಸವಾಲು. ಅವರಿಗೆ ಬೌಲಿಂಗ್ ಮಾಡಲು ಕಾಯುತ್ತಿದ್ದೇನೆ" ಎಂದು ಕಿವೀಸ್ ವೇಗಿ ಬೌಲ್ಟ್ ಹೇಳಿದ್ದರು. ವಿಶ್ವ ಕ್ರಿಕೆಟಿನ ಹಲವು ಮಾಜಿ, ಹಾಲೀ ಆಟಗಾರರು ಕೊಹ್ಲಿಯ ಅದ್ಭುತ ಬ್ಯಾಟಿಂಗ್ ಬಗ್ಗೆ ಪ್ರಶಂಶೆ ವ್ಯಕ್ತ ಪಡಿಸಿದ್ದರು.

ಕಳೆದ ಹನ್ನೆರಡು ಇನ್ನಿಂಗ್ಸ್ ನಲ್ಲಿ ಕೊಹ್ಲಿ ಹೊಡೆದದ್ದು ಬರೀ 232 ರನ್

ಕಳೆದ ಹನ್ನೆರಡು ಇನ್ನಿಂಗ್ಸ್ ನಲ್ಲಿ ಕೊಹ್ಲಿ ಹೊಡೆದದ್ದು ಬರೀ 232 ರನ್

ಕಳೆದ ಹನ್ನೆರಡು ಇನ್ನಿಂಗ್ಸ್ ನಲ್ಲಿ (ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟಿನ ನಾಲ್ಕು ಇನ್ನಿಂಗ್ಸ್) 232 ರನ್ ಅನ್ನು. ಅಂದರೆ, ಸರಾಸರಿ ಕೇವಲ 19.3. ನ್ಯೂಜಿಲ್ಯಾಂಡ್ ಸರಣಿಯ ನಂತರ ಮತ್ತೆ ಸ್ವದೇಶದಲ್ಲಿ ಸರಣಿಗಳು ನಡೆಯಲಿವೆ. ಇದಾದ ನಂತರ ಐಪಿಎಲ್. ಹೀಗಿರುವಾಗ, ಕೊಹ್ಲಿಯ ಬ್ಯಾಟಿಂಗ್ ವೈಫಲ್ಯ ಟೀಂ ಇಂಡಿಯಾಗೆ ಭಾರೀ ಪರಿಣಾಮ ಬೀರಲಿದೆ.

Story first published: Sunday, March 1, 2020, 17:53 [IST]
Other articles published on Mar 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X