ವಿಜಯದೊಂದಿಗೆ ಸರಣಿಗೆ ವಿದಾಯ ಹೇಳಿದ ಭಾರತ ವನಿತೆಯರು

Posted By:
Indian women won against England by 8 wickets

ಮುಂಬೈ, ಮಾರ್ಚ್ 29: ಟಿ20 ತ್ರಿಕೋನ ಸರಣಿಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತದ ವನಿತೆಯರು 8 ವಿಕೆಟ್ ಗೆಲುವು ಸಾಧಿಸಿದರು.

ಸರಣಿಯ ಫೈನಲ್‌ಗೇರಲು ವಿಫಲವಾಗಿರುವ ಭಾರತ ವನಿತೆಯರ ತಂಡ ಈ ಕೊನೆಯ ಔಪಚಾರಿಕ ಪಂದ್ಯದಲ್ಲಿ ಗೆಲವು ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ನಾಡಿದ್ದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಆಡಲಿವೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಭಾರತದ ವನಿತೆಯರ ಅತ್ಯುತ್ತಮ ಬೌಲಿಂಗ್ ದಾಳಿಯಿಂದಾಗಿ 107 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆದರು.

ಅಲ್ಪ ಮೊತ್ತದ ಬೆನ್ನು ಹತ್ತಿದ ಭಾರತದ ವನಿತೆಯರು ತಂಡದ ಭರವಸೆಯ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನಾ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗಳ ಗೆಲವು ಸಾಧಿಸಿದರು.

ಸ್ಮೃತಿ ಮಂದಾನಾ ಅವರು ಕೇವಲ 41 ಬಾಲ್‌ಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ 62 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಅವರಿಗೆ ಸಾಥ್ ನಿಡಿದ ಹರ್ಮನ್ ಪ್ರೀತ್ ಕೌರ್ 20 ರನ್ ಗಳಿಸಿದರು.

ಭಾರತದ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ. ಅಂಜುಲ್ ಪಾಟಿಲ್ 3 ವಿಕೆಟ್ ಗಳಿಸಿದರು. ರಾಧಾ ಯಾದವ್, ದೀಪ್ತಿ ಶರ್ಮಾ, ಪೂನಂ ಯಾದವ್ ತಲಾ 2 ವಿಕೆಟ್ ಪಡೆದರು. ಅಂಜುಮ್ ಬಾಟಿಲ್‌ಗೆ ಪಂದ್ಯ ಪುರುಷೊತ್ತಮ ಗೌರವಕ್ಕೆ ಪಾತ್ರರಾದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 29, 2018, 17:04 [IST]
Other articles published on Mar 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ