ಧೋನಿ ಸಲಹೆಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ತಂಡದಿಂದ ಹೊರಬಿದ್ದ ಬಳಿಕ ಕುಲ್‌ದೀಪ್ ಮಾತು

Dhoni ಹೋದ ಮೇಲೆ Kuldeep Yadavಗೆ ಮೋಸವಾಗಿದೆಯೇ | Oneindia Kannada

ಸ್ಪಿನ್ನರ್ ಕುಲ್‌ದೀಪ್ ಯಾದವ್ ಈಗ ಟೀಮ್ ಇಂಡಿಯಾ ತಂಡದಿಂದ ಹೊರಗುಳಿದಿದ್ದಾರೆ. ವೃತ್ತಿ ಜೀವನದ ಅತ್ಯಂತ ಕಠಿಣ ದಿನಗಳನ್ನು ಕುಲ್‌ದೀಪ್ ಈಗ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎಂಎಸ್ ಧೋನಿ ನೀಡುತ್ತಿದ್ದ ಸಲಹೆ ಮಾರ್ಗದರ್ಶನಗಳನ್ನು ತಾನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕುಲ್‌ದೀಪ್ ಯಾದವ್ ತನ್ನಂತಾ ರಿಸ್ಟ್ ಸ್ಪಿನ್ನರ್‌ಗಳು ಯುಜುವೇಂದ್ರ ಚಾಹಲ್ ಅವರಂತಾ ಜೊತೆಗಾರನೊಂದಿಗೆ ಬೌಲಿಂಗ್ ನಡೆಸಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಈ ಇಬ್ಬರು ಕ್ರಿಕೆಟಿಗರಿಗೆ ಧೋನಿ ನಿವೃತ್ತಿಯ ನಂತರ ಹೆಚ್ಚಿನ ಪಂದ್ಯಗಳಲ್ಲಿ ಜೊತೆಯಾಗಿ ಆಡುವ ಅವಕಾಶ ಪಡೆದುಕೊಂಡಿಲ್ಲ. ಇನ್ನು ಗಮನಾರ್ಹ ಸಂಗತಿಯೆಂದರೆ ಈ ಇಬ್ಬರು ಸ್ಪಿನ್ನರ್‌ಗಳು ಕೂಡ ಎಂಎಸ್ ಧೋನಿ ತಮ್ಮ ಬೌಲಿಂಗ್ ಮೇಲೆ ಬೀರಿರುವ ಪ್ರಭಾವವನ್ನು ಹೇಳಿಕೊಂಡಿದ್ದರು.

ಟೆಸ್ಟ್‌ ತಂಡದಿಂದ ಕುಲದೀಪ್ ಕೈಬಿಟ್ಟಿದ್ದಕ್ಕೆ ಪ್ರತಿಕ್ರಿಯಿಸಿದ ದೀಪ್‌ದಾಸ್

ಕುಲ್‌ದೀಪ್ ಯಾದವ್ ಹೇಳಿರುವಂತೆ 44 ಪಂದ್ಯಗಳಲ್ಲಿ ಕುಲ್‌ದೀಪ್-ಚಾಹಲ್ ಜೋಡಿ 44 ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. ಆದರೆ ಎಂಎಸ್ ಧೋನಿ 2019ರ ವಿಶ್ವಕಪ್‌ನ ಬಳಿಕ ನಿವೃತ್ತಿ ಪಡೆದ ನಂತರ ಒಂದೇ ಒಂದು ಪಂದ್ಯದಲ್ಲಿ ಜೊತೆಯಾಗಿ ಆಡಿಲ್ಲ. ಅದರಲಗಲೂ ಕುಲ್‌ದೀಪ್ ಯಾದವ್ ಇಂಗ್ಲೆಂಡ್‌ನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಆಯ್ಕೆಯಾಗದೆ ನಿರಾಶರಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಕೆಕೆಆರ್ ಪರವಾಗಿ ಆಡುತ್ತಿರುವ ಕುಲ್‌ದೀಪ್‌ಗೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ.

"ಕೆಲ ಬಾರಿ ನಾನು ಮಾಹಿ ಅವರ ಸಲಹೆಗಳನ್ನು ಕಳೆದುಕೊಳ್ಳುತ್ತಿದ್ದೇನೆ. ಯಾಕೆಂದರೆ ಅವರಲ್ಲಿ ಸಾಕಷ್ಟು ಅದ್ಭುತವಾದ ಅನುಭವಗಳಿವೆ. ವಿಕೆಟ್‌ನ ಹಿಂದೆ ನಿಂತು ಅವರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರು. ಈಗ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿದ್ದಾರೆ. ಹೆಚ್ಚು ಪಂದ್ಯಗಳನ್ನು ಆಡಿದಂತೆಯೇ ಅವರಿಂದಲೂ ನಾವು ಸಲಹೆಗಳನ್ನು ಪಡೆದುಕೊಳ್ಳಬಹುದು" ಎಂದು ಕುಲ್‌ದೀಪ್ ಯಾದವ್ ಹೇಳಿದ್ದಾರೆ.

ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡ ದಿನೇಶ್ ಕಾರ್ತಿಕ್ ಕಾಲೆಳೆದ ಲಿನ್

"ಮಾಹಿ ಭಾಯ್ ಇದ್ದಾಗ ನಾನು ಹಾಗೂ ಚಾಹಲ್ ಆಡುತ್ತಿದ್ದೆವು. ಮಾಹಿ ಅವರು ನಿವೃತ್ತಿಯಾದ ನಂತರ ನಾನು ಹಾಗೂ ಚಾಹಲ್ ಜೊತೆಯಾಗಿ ಆಡಿಲ್ಲ. ಅವರ ನಿವೃತ್ತಿಯ ನಂತರ ನಾನು ಒಂದು ಸಂಪೂರ್ಣ ಪಂದ್ಯವನ್ನಷ್ಟೇ ಆಡಿದ್ದೇನೆ. ನಾನು ಹತ್ತಕ್ಕೂ ಹೆಚ್ಚು ಪಂದ್ಯಗಳನ್ನು ಆಡಬೇಕಾಗಿತ್ತು. ನಾನು ಹ್ಯಾಟ್ರಿಕ್ ವಿಕೆಟ್ ಕೂಡ ಸಂಪಾದಿಸಿದ್ದೇನೆ. ನನ್ನ ಸಂಪೂರ್ಣ ಆಟವನ್ನು ನೀವು ಗಮನಿಸಿದರೆ ಉತ್ತಮವಾಗಿದೆ" ಎಂದು ಕುಲ್‌ದೀಪ್ ಯಾದವ್ ಹೇಳಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, May 12, 2021, 10:55 [IST]
Other articles published on May 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X