ಬೂಮ್ರಾ, ಯುಜಿ ಅಲ್ಲ: ಈ ವಿದೇಶಿ ಆಟಗಾರನೇ ನನ್ನ ನೆಚ್ಚಿನ ಬೌಲಿಂಗ್ ಪಾರ್ಟ್ನರ್ ಎಂದ ರವಿ ಬಿಷ್ಣೋಯ್

ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅಂಡರ್ 19 ಮೂಲಕ ಮಿಂಚಿ ಬಳಿಕ ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಭಾರತೀಯ ತಂಡದಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ. ಆಧುನಿಕ ಕ್ರಿಕೆಟ್‌ಗೆ ಪೂರಕವಾಗಿ ಹಲವು ವಿಶೇಷ ಬೌಲಿಂಗ್ ಕೌಶಲ್ಯಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿರುವ ಬಿಷ್ಣೋಯ್ ಭಾರತದ ಭರವಸೆಯ ಆಟಗಾರ ಎನಿಸಿದ್ದಾರೆ. ಎಡಗೈ ದಾಂಡಿಗರ ವಿರುದ್ಧ ಯಶಸ್ಸು ಸಾಧಿಸುವ ಅಪರೂಪದ ಕೌಶಲ್ಯವನ್ನು ಕೂಡ ರವಿ ಬಿಷ್ಣೋಯ್ ಸಿದ್ಧಿಸಿಕೊಂಡಿದ್ದಾರೆ.

ಏಷ್ಯಾ ಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದರೂ ರವಿ ಬಿಷ್ಣೋಯ್ ಮುಂಬರುವ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆದರೆ ಮೀಸಲು ಆಟಗಾರನಾಗಿ ಭಾರತ ತಂಡದ ಜೊತೆಗೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುವ ಅವಕಾಶ ಹೊಂದಿದ್ದಾರೆ. ಈ ಸಂದರ್ಭದಲ್ಲಿ ರವಿ ಬಿಷ್ಣೋಯ್ ತಮ್ಮ ನೆಚ್ಚಿನ ಬೌಲಿಂಗ್ ಜೊತೆಗಾರನನ್ನು ಹೆಸರಿಸಿದ್ದಾರೆ.

Ind Vs Aus T20: ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ಗೆ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವೈರಲ್Ind Vs Aus T20: ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ಗೆ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವೈರಲ್

11-12ನೇ ವಯಸ್ಸಿನಿಂದ ಕ್ರಿಕೆಟ್ ಬಗ್ಗೆ ಗಂಭೀರನಾದೆ ಎಂದ ಬೊಷ್ಣೋಯ್

11-12ನೇ ವಯಸ್ಸಿನಿಂದ ಕ್ರಿಕೆಟ್ ಬಗ್ಗೆ ಗಂಭೀರನಾದೆ ಎಂದ ಬೊಷ್ಣೋಯ್

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರವಿ ಬಿಷ್ಣೋಯ್ ಬಾಲ್ಯದಲ್ಲಿ ಬೌಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ಬಗ್ಗೆ ಮಾತನಾಡಿದ್ದಾರೆ. "ನಾನು ಮೊದಲಿಗೆ ಮಧ್ಯಮ ವೇಗದ ಬೌಲರ್ ಆಗಿ ಕ್ರಿಕೆಟ್ ಆರಂಭ ಮಾಡಿದೆ. ನಂತರ ಲೆಗ್ ಸ್ಪಿನ್ನರ್ ಆಗಿ ಆಸಕ್ತಿ ಬೆಳೆಸಿಕೊಂಡು ನಂತರ ಲೆಗ್ ಸ್ಪಿನ್ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾ ಬಂದೆ. 11-12ನೇ ವಯಸ್ಸಿನಲ್ಲಿ ನಾನು ಕ್ರಿಕೆಟ್‌ಅನ್ನು ಗಂಭೀರವಾಗಿ ಪರಿಗಣಿಸಿಕೊಂಡಾಗ ಈ ಬೆಳವಣಿಗೆ ಆರಂಭಿಸಿದೆ" ಎಂದಿದ್ದಾರೆ ರವಿ ಬಿಷ್ಣೋಯ್.

ಐಪಿಎಲ್‌ನಲ್ಲಿ ಸಾಕಷ್ಟು ಕಲಿತೆ

ಐಪಿಎಲ್‌ನಲ್ಲಿ ಸಾಕಷ್ಟು ಕಲಿತೆ

ಇನ್ನು ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಆಡುವ ಅವಕಶ ದೊರೆತ ಕಾರಣ ಸಾಕಷ್ಟು ವಿಚಾರಗಳನ್ನು ಕಲಿಯಲು ಸಾಧ್ಯವಾಯಿತು ಎಂದಿದ್ದಾರೆ. ಭಿನ್ನ ಆಟಗಾರರ ಜೊತೆಗೆ ಸಾಕಷ್ಟು ಅಂತಾರಾಷ್ಟ್ರೀಯ ಅನುಭವವಗಳನ್ನು ಹೊಂದಿರುವ ಆಟಗಾರರೊಂದಿಗೆ ಆಡುವ ಅವಕಾಶ ದೊರೆತ ಕಾರಣ ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಕೂಡ ಬೊಷ್ಣೋಯ್ ವಿವರಿಸಿದರು. ಅಲ್ಲದೆ ತನ್ನ ವೃತ್ತಿ ಜೋವನದ ಆರಂಭದ ದಿನಗಳಿಂದಲೂ ಹೆತ್ತವರು ಹಾಗೂ ಕೋಚ್‌ಗಳು ನೀಡಿದ ಬೆಂಬಲವನ್ನು ರವಿ ಬಿಷ್ಣೋಯ್ ಸ್ಮರಿಸಿಕೊಂಡಿದ್ದಾರೆ.

ರಶೀದ್ ಖಾನ್ ಜೊತೆಗೆ ಬೌಲಿಂಗ್ ಮಾಡುವುದೆಂದರೆ ಇಷ್ಟ

ರಶೀದ್ ಖಾನ್ ಜೊತೆಗೆ ಬೌಲಿಂಗ್ ಮಾಡುವುದೆಂದರೆ ಇಷ್ಟ

ಈ ಸಂದರ್ಭದಲ್ಲಿ ರವಿ ಬಿಷ್ಣೋಯ್ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಜೊತೆಗೆ ಬೌಲಿಂಗ್ ಮಾಡುವುದೆಂದರೆ ಬಹಳ ಇಷ್ಟ ಎಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ರಶೀದ್ ಖಾನ್ ಅವರಿಂದ ಬೌಲಿಂಗ್‌ನಲ್ಲಿ ಜೊತೆಯಾಟ ನೀಡುವ ವಿಚಾರವನ್ನು ಕಲಿಯಬೇಕಿದೆ ಎಂದಿದ್ದಾರೆ. "ಯುಜುವೇಂದ್ರ ಚಾಹಲ್ ವಿಶವದ ಅಗ್ರ ಐವರು ಸ್ಪಿನ್ನರ್‌ಗಳಲ್ಲಿ ಒಬ್ಬರು. ಅವರೊಂದಿಗೆ ಬೌಲಿಂಗ್ ಮಾಡುವುದೆಂದರೆ ನಿಜಕ್ಕೂ ಮಜವಾದ ವಿಚಾರ. ಆದರೆ ನನಗೆ ಅದೃಷ್ಟ ದೊರೆತರೆ ರಶೀದ್ ಖಾನ್ ಜೊತೆಗೆ ಬೌಲಿಂಗ್ ನಡೆಸುವುದನ್ನು ಇಷ್ಟ ಪಡುತ್ತೇನೆ. ಈ ಮೂಲಕ ಬೌಲಿಂಗ್‌ನಲ್ಲಿ ಜೊತೆಯಾಟ ಮಾಡುವುದನ್ನು ಕಲಿಯಲು ಬಯಸುತ್ತೇನೆ" ಎಂದಿದ್ದಾರೆ ರಶೀದ್ ಖಾನ್.

ಮೀಸಲು ಆಟಗಾರನಾಗಿ ವಿಶ್ವಕಪ್‌ ತಂಡದೊಂದಿಗೆ ಪ್ರಯಾಣ

ಮೀಸಲು ಆಟಗಾರನಾಗಿ ವಿಶ್ವಕಪ್‌ ತಂಡದೊಂದಿಗೆ ಪ್ರಯಾಣ

ರವಿ ಬೊಷ್ಣೋಯ್ ಈ ಬಾರಿಯ ವಿಶ್ವಕಪ್‌ನ ಪ್ರಾಥಮಿಕ ತಂಡದಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದ್ದಾರೆ. ಆದರೆ ಯುವ ಲೆಗ್ ಸ್ಪಿನ್ನರ್ ಭಾರತ ತಂಡದ ಜೊತೆಗೆ ಮೀಸಲು ಆಟಗಾರನಾಗಿ ಪ್ರಯಾಣಿಸಲಿದ್ದಾರೆ. ಯುಜುವೇಂದ್ರ ಚಾಹಲ್, ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ವಿಶ್ವಕಪ್‌ನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಸ್ಪಿನ್ ಬೌಲರ್‌ಗಳಾಗಿದ್ದಾರೆ. ಇನ್ನು ಭಾರತ ನಾಲ್ವರು ವೇಗಿಗಳೊಂದಿಗೆ ಈ ಬಾರಿಯ ವಿಶ್ವಕಪ್‌ಗೆ ಕಣಕ್ಕಿಳಿಯುತ್ತಿದ್ದು ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ ಪಟೇಲ್ ಹಾಗೂ ಅರ್ಶದೀಪ್ ಸಿಂಗ್ ಅವಕಾಶ ಪಡೆದುಕೊಂಡಿದ್ದಾರೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡ ಮೀಸಲು ಆಟಗಾರನಾಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 21, 2022, 13:10 [IST]
Other articles published on Sep 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X