ದೂರದರ್ಶನದಲ್ಲೂ ಪ್ರಸಾರವಾಗಲಿವೆ ಐಪಿಎಲ್‌ ಪಂದ್ಯಗಳು

Posted By:
ipl-11-matches-will-broadcast-in-doordarshan-also

ಸ್ಟಾರ್ ಸಮೂಹದ ಟಿವಿ ಚಾನೆಲ್‌ ಮಾತ್ರವಲ್ಲ ದೂರದರ್ಶನದಲ್ಲೂ ಕ್ರಿಕೆಟ್ ಪ್ರೇಮಿಗಳು ಐಪಿಎಲ್‌ ಪಂದ್ಯವನ್ನು ನೋಡಿ ಆನಂದಿಸಬಹುದು.

ಹೌದು, ಐಪಿಎಲ್‌ 11 ಸೀಸನ್‌ನ ಉದ್ಘಾಟನಾ ಸಮಾರಂಭ ಸೇರಿದಂತೆ ಆಯ್ದ ಪ್ರಮುಖ ಪಂದ್ಯಗಳು ದೂರದರ್ಶನ (ಡಿಡಿ1) ನಲ್ಲಿಯೂ ಪ್ರಸಾರ ಆಗಲಿವೆ.

ಐಪಿಎಲ್‌ ಪಂದ್ಯಗಳು ಹೆಚ್ಚಿನ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಸ್ಟಾರ್ ಸಮೂಹವು ತನ್ನ ಪ್ರಸಾರದ ಹಕ್ಕನ್ನು ಪ್ರಸಾರ ಭಾರತಿಯೊಂದಿಗೆ ಹಂಚಿಕೊಂಡಿದ್ದು, ನೇರ ಪ್ರಸಾರಕ್ಕಿಂತಲೂ ಒಂದು ಗಂಟೆ ತಡವಾಗಿ ಆಯ್ದ ಪ್ರಮುಖ ಐಪಿಎಲ್‌ ಪಂದ್ಯಗಳು ದೂರದರ್ಶನದಲ್ಲಿ ಪ್ರಸಾರವಾಗಲಿವೆ.

ಸ್ಟಾರ್ ಸಮೂಹವು 50-50 ಲಾಭದ ಲೆಕ್ಕಾಚಾರದಲ್ಲಿ ಐಪಿಎಲ್ ಪ್ರಸಾರದ ಹಕ್ಕನ್ನು ಹಂಚಿಕೊಂಡಿದ್ದು, ಐಪಿಎಲ್ ಪಂದ್ಯಗಳ ಪ್ರಸಾರದಿಂದ ದೂರದರ್ಶನ ಗಳಿಸುವ ಲಾಭದಲ್ಲಿ ಶೇ50ರಷ್ಟನ್ನು ಸ್ಟಾರ್ ಸಮೂಹಕ್ಕೆ ನೀಡಬೇಕಿದೆ.

ದೂರದರ್ಶನವು ನೇರ ಪ್ರಸಾರಕ್ಕಿಂತಲೂ 15 ನಿಮಿಷ ವಿಳಂಬದ ಪ್ರಸಾರಕ್ಕೆ ಅನುಮತಿ ಕೇಳಿತ್ತು, ಆದರೆ ಸ್ಟಾರ್ ಸಮೂಹವು ಒಂದು ಗಂಟೆ ತಡವಾದ ಪ್ರಸಾರಕ್ಕೆ ಅನುಮತಿ ನೀಡಿದೆ. ಜೊತೆಗೆ ಪ್ರತಿದಿನ ಪಂದ್ಯದ ಹೈಲೈಟ್ಸ್‌ಗಳ ಪ್ರಸಾರಕ್ಕೆ ಅನುಮತಿ ನೀಡಿದೆ.

ಅಂದಹಾಗೆ, ಸ್ಟಾರ್ ಸಮೂಹವು ಐಪಿಎಲ್‌ನ 2018 ರಿಂದ 2023ರವರೆಗಿನ ಟೆಲಿವಿಷನ್ ಪ್ರಸಾರ ಹಕ್ಕನ್ನು 16,347.5 ಕೋಟಿ ರೂಪಾಯಿಗೆ ಖರೀದಿಸಿದೆ. ಇದೇ ಸ್ಟಾರ್ ಸಮೂಹವು ನಿನ್ನೆ (ಏಪ್ರಿಲ್ 05) ತಾನೆ ಬಿಸಿಸಿಐ ಹರಾಜು ಮಾಡಿದ ಭಾರತ ಕ್ರಿಕೆಟ್ ತಂಡದ ಐದು ವರ್ಷದ (2018-2023)ರವರೆಗಿನ ಪ್ರಸಾರ ಹಕ್ಕನ್ನು ರೂ.6138 ಕೋಟಿ ಖರೀದಿಸಿದೆ.

ಐಪಿಎಲ್ 11 ಸೀಸನ್‌ನ ಉದ್ಘಾಟನೆ ಏಪ್ರಿಲ್ 7ರಂದು ಮುಂಬೈನಲ್ಲಿ ನಡೆಯಲಿದ್ದು, ಮೊದಲ ಪಂದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ನಡೆಯಲಿದೆ.

ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, April 6, 2018, 14:29 [IST]
Other articles published on Apr 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ