ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ತಂದೆ ಸಾವಿನ ಸೂತಕದ ನಡುವೆ ತಂಡ ಸೇರಿದ ಪಂತ್

ತನ್ನ ತಂದೆಯ ಸಾವಿನ ಸೂತಕ ಕಳೆಯುವುದರೊಳಗೆ ತಂಡವನ್ನು ಸೇರಿಸಿಕೊಂಡು ಭಾರತೀಯ ಕ್ರಿಕೆಟರ್ ರೊಬ್ಬರು ಅಚ್ಚರಿ ಮೂಡಿಸಿದ್ದಾರೆ.

By Mahesh

ನವದೆಹಲಿ, ಏಪ್ರಿಲ್ 07: ತನ್ನ ತಂದೆಯ ಸಾವಿನ ಸೂತಕ ಕಳೆಯುವುದರೊಳಗೆ ತಂಡವನ್ನು ಸೇರಿಸಿಕೊಂಡು ಭಾರತೀಯ ಕ್ರಿಕೆಟರ್ ರೊಬ್ಬರು ಅಚ್ಚರಿ ಮೂಡಿಸಿದ್ದಾರೆ. ತಂದೆಯ ಅಂತ್ಯಕ್ರಿಯೆ ಮುಗಿಸಿದ ಕೆಲ ಗಂಟೆಗಳ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಶಿಬಿರದಲ್ಲಿ ರಿಷಬ್ ಪಂತ್ ಕಾಣಿಸಿಕೊಂಡಿದ್ದಾರೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಐಪಿಎಲ್ 10ರ ಡೆಲ್ಲಿ ಡೇರ್ ಡೆವಿಲ್ಸ್ ಉದ್ಘಾಟನಾ ಪಂದ್ಯಕ್ಕೆ ಯುವ ಆಟಗಾರ ರಿಷಬ್ ಪಂತ್ ಲಭ್ಯರಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

IPL 2017: Rishabh Pant overpowers grief of father's death, joins Delhi Daredevils

ಈ ಹಿಂದೆ ಈ ಇಬ್ಬರು ದಿಗ್ಗಜರು ತಮ್ಮ ತಂದೆಯ ಸಾವಿನ ನೋವಿನ ನಡುವೆಯೂ ಕರ್ತವ್ಯದಿಂದ ವಿಮುಖರಾಗದೆ ಮೈದಾನಕ್ಕೆ ಇಳಿದು ಆಟವಾಡಿದ್ದರು.

ರಿಷಬ್ ಪಂತ್ ಅವರ ವೃತ್ತಿಪರ ನಡವಳಿಕೆಗೆ ಇಡೀ ತಂಡವೇ ಬೆಂಬಲಕ್ಕೆ ನಿಂತಿದೆ ಎಂದು ಡೆಲ್ಲಿ ಡೇರ್ ಡೆವಿಲ್ಸ್ ಕೋಚ್ ಅಪ್ಟನ್ ಹೇಳಿದ್ದಾರೆ.

ಕೆಲ ಮಾಧ್ಯಮಗಳ ವರದಿ ಪ್ರಕಾರ, ರಿಷಬ್ ಅವರು ತಮ್ಮ ತಂದೆಯ ಅಂತಿಮ ಸಂಸ್ಕಾರ ನೆರವೇರಿಸುವಾಗ ತಮ್ಮ ಕಾಲಿಗೆ ಬೆಂಕಿ ತಗುಲಿಸಿಕೊಂಡು ಗಾಯ ಮಾಡಿಕೊಂಡಿದ್ದಾರೆ. ತಂಡವನ್ನು ಸೇರಿಕೊಂದರೂ ಏಪ್ರಿಲ್ 08ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವುದು ಕಷ್ಟ ಎನ್ನಲಾಗಿದೆ.

ಡೆಲ್ಲಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಅವರ ತಂದೆ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಏಪ್ರಿಲ್ 04ರಂದು ರೂರ್ಕಿಯಲ್ಲಿ ನಿಧನರಾದರು. ತರಬೇತಿ ಶಿಬಿರದಲ್ಲಿದ್ದ ರಿಷಬ್ ತಕ್ಷಣವೇ ರೂರ್ಕಿಗೆ ತೆರಳಿ ಅಂತಿಮ ಸಂಸ್ಕಾರ ನೆರವೇರಿಸಿ ಬಂದಿದ್ದಾರೆ.

ಈ ಹಿಂದೆ ಕೊಹ್ಲಿ ಅವರು ತಮ್ಮ ತಂದೆಯ ಸಾವಿನ ಸೂತಕದ ನಡುವೆ ದೆಹಲಿ ಪರ ರಣಜಿ ಪಂದ್ಯವಾಡಿದ್ದರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಪಂದ್ಯವಾಡಿ ತನ್ನ ತಂದೆಗೆ ಅರ್ಪಣೆ ಮಾಡಿದ್ದರು.(ಪಿಟಿಐ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X