ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB ಪರ 4,000 ರನ್‌ ಗಡಿ ತಲುಪಿದ ಎಬಿ ಡಿ ವಿಲಿಯರ್ಸ್

ABD 4000 runs

ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಕ್ಷರಶಃ ಅಬ್ಬರಿಸಿದ ಆರ್‌ಸಿಬಿ ಸೂಪರ್‌ಸ್ಟಾರ್ ಎಬಿ ಡಿ ವಿಲಿಯರ್ಸ್ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 4,000 ಐಪಿಎಲ್ ರನ್ ತಲುಪಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2020 ರಲ್ಲಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 48 ರನ್ ಗಳಿಸಿದ ನಂತರ ಅವರು ಈ ಮೈಲಿಗಲ್ಲು ತಲುಪಿದರು.

ಮಿಸ್ಟರ್ 360 ಎಂದೂ ಕರೆಯಲ್ಪಡುವ ಎಬಿ ಡಿವಿಲಿಯರ್ಸ್, ಜಯದೇವ್ ಉನಾದ್ಕತ್ ಅವರ ಬೌಲಿಂಗ್‌ನಲ್ಲಿ ಮೂರು ದೈತ್ಯ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಆರ್‌ಸಿಬಿಗೆ 4,000 ಐಪಿಎಲ್ ರನ್ ಗಳಿಸಿದರು.

ಒಟ್ಟಾರೆಯಾಗಿ, ಡೇವಿಡ್ ವಾರ್ನರ್ ನಂತರ ಅತಿ ಹೆಚ್ಚು ರನ್ ಗಳಿಸುವವರ ವಿದೇಶಿ ಆಟಗಾರರ ಪಟ್ಟಿಯಲ್ಲಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್‌ಗಳಿಸಿದ್ದು 201 ಪಂದ್ಯಗಳಲ್ಲಿ 6,183 ರನ್ ಕಲೆಹಾಕಿದ್ದಾರೆ. ನಂತರದ ಸ್ಥಾನವನ್ನ ಎಬಿಡಿ ಅಲಂಕರಿಸಿದ್ದು, 136 ಪಂದ್ಯಗಳಲ್ಲಿ 4,040 ರನ್ ಕಲೆಹಾಕಿದ್ದಾರೆ.

ಎಬಿ ಡಿವಿಲಿಯರ್ಸ್ ಐಪಿಎಲ್ ವೃತ್ತಿಜೀವನ

ಎಬಿ ಡಿವಿಲಿಯರ್ಸ್ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿಜೀವನವನ್ನು 2008 ರಲ್ಲಿ ದೆಹಲಿ ಡೇರ್ ಡೆವಿಲ್ಸ್ ಫ್ರ್ಯಾಂಚೈಸ್ (ಈಗ ದೆಹಲಿ ಕ್ಯಾಪಿಟಲ್ಸ್) ನೊಂದಿಗೆ ಪ್ರಾರಂಭಿಸಿದರು. ಅವರು ಮೊದಲ ಮೂರು ಐಪಿಎಲ್ ಋತುಗಳಲ್ಲಿ ದೆಹಲಿ ಡೇರ್ ಡೆವಿಲ್ಸ್ ಅನ್ನು ಪ್ರತಿನಿಧಿಸಿದರು ಮತ್ತು ಮೂರು ಋತುಗಳಲ್ಲಿ 671 ರನ್ ಗಳಿಸಿದರು, ಇದರಲ್ಲಿ ಎರಡನೇ ಶತಕ ಸೇರಿದೆ. 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅವರನ್ನು 5 ಕೋಟಿ ರೂ.ಗೆ ಖರೀದಿಸಿತು ಮತ್ತು ನಂತರ ಫ್ರ್ಯಾಂಚೈಸ್ ಅವರನ್ನು ಬಿಡುಗಡೆ ಮಾಡಿಲ್ಲ.

Story first published: Saturday, October 17, 2020, 20:09 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X