ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸಹ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಾಟ್‌ಸ್ಟಾರ್

IPL 2020: Hotstar withdraws as associate sponsor

ನವದೆಹಲಿ, ಆಗಸ್ಟ್ 16: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಸಹ ಪ್ರಾಯೋಜಕತ್ವದಿಂದ ಹಾಟ್‌ಸ್ಟಾರ್ ಹಿಂದೆ ಸರಿದಿದೆ. ವರದಿಯೊಂದರ ಪ್ರಕಾರ ಜನಪ್ರಿಯ ಲೀಗ್‌ ಒಪ್ಪಂದದಲ್ಲಿ ಹಾಟ್‌ ಸ್ಟಾರ್‌ ನಿರ್ಗಮನ ಶರತ್ತನ್ನು ಒಳಗೊಂಡಿತ್ತು. ಹಾಟ್‌ಸ್ಟಾರ್ ನಿರ್ಗಮನವನ್ನು ಆರಿಸಿದೆ ಎಂದು ತಿಳಿದು ಬಂದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್‌ಗೀಗ ಆನೆ ಬಲ: ಮೆಕಲಮ್ ಹೆಡ್‌ ಕೋಚ್ಕೋಲ್ಕತ್ತಾ ನೈಟ್ ರೈಡರ್ಸ್‌ಗೀಗ ಆನೆ ಬಲ: ಮೆಕಲಮ್ ಹೆಡ್‌ ಕೋಚ್

'ಒಪ್ಪಂದದಲ್ಲಿ ನಿರ್ಗಮನ ಶರತ್ತು ಇತ್ತು. ಹಾಟ್‌ಸ್ಟಾರ್ ನಿರ್ಗಮನ ಶರತ್ತನ್ನು ಚಲಾಯಿಸಿದೆ,' ಎಂದು ಬಿಸಿಸಿಐ ಮೂಲವೊಂದು ಇಂಡಿಯಾ ಟುಡೇಗೆ ತಿಳಿಸಿದೆ. ಐಪಿಎಲ್ ಸಹ ಪ್ರಾಯೋಜಕತ್ವದ ಮೌಲ್ಯದ ಶ್ರೇಣಿ ವಾರ್ಷಿಕ ಸುಮಾರು 40-80 ಕೋ.ರೂ. ಐಪಿಎಲ್‌ನೊಂದಿಗಿನ ಹಾಟ್ ಸ್ಟಾರ್ ಒಪ್ಪಂದ ವಾರ್ಷಿಕ ಸುಮಾರು 42 ಕೋ. ರೂ. ಒಳಗಿತ್ತು.

ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಹಿಡಿದಿಟ್ಟುಕೊಂಡಿದೆ. 2017ರಲ್ಲಿ ನಡೆದಿದ್ದ ಬಿಡ್‌ನಲ್ಲಿ 16,347.5 ಕೋ. ರೂ.ಗಾಗಿ ಸ್ಟಾರ್ ಇಂಡಿಯಾವು ಐಪಿಎಲ್‌ನ ಟೆಲಿವಿಷನ್ ಮತ್ತು ಡಿಜಿಟಲ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿತ್ತು.

ಭಾರತದೆದುರು ಗೇಲ್ ಅರ್ಧಶತಕ ಬಾರಿಸಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!ಭಾರತದೆದುರು ಗೇಲ್ ಅರ್ಧಶತಕ ಬಾರಿಸಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!

ಕಳೆದ ಐಪಿಎಲ್‌ಗೆ ಹೋಲಿಸಿದರೆ ಈ ಬಾರಿಯ ಐಪಿಎಲ್‌ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ರೋಚಕ ಕದನದ ವೇಳೆ 300 ಮಿಲಿಯನ್ ಹೆಚ್ಚು ವೀಕ್ಷಕರು ಮತ್ತು ವೀಕ್ಷಣೆ ಸಮಯದಲ್ಲಿ 74 ಶೇ. ಏರಿಕೆಯಾಗಿದ್ದನ್ನು ಹಾಟ್‌ಸ್ಟಾರ್ ಹೇಳಿಕೊಂಡಿತ್ತು. 2020ರ 13ನೇ ಐಪಿಎಲ್ ಆವೃತ್ತಿಯ ಆರಂಭದ ದಿನಾಂಕ ಅಂತಿಮಗೊಂಡಿಲ್ಲ. ಆದರೆ ಮಾರ್ಚ್-ಏಪ್ರಿಲ್‌ನಲ್ಲಿ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ.

Story first published: Friday, August 16, 2019, 11:33 [IST]
Other articles published on Aug 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X