ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ನಿದ್ದೆಗೆಡಿಸಿರುವ ಕನ್ನಡಿಗರನ್ನು ಹಣಿಯಲು ಶೇನ್ ಬಾಂಡ್ ತಂತ್ರ ಇದು

ತಲಾ ಎರಡು ಪಂದ್ಯಗಳನ್ನು ಸೋತು, ಒಂದರಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು 2020ರ ಐಪಿಎಲ್ ಆವೃತ್ತಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಸದ್ಯಕ್ಕೆ ಈ ಎರಡೂ ತಂಡಗಳು ಗಾಯಗೊಂಡಿರುವ ಹುಲಿಗಳು. ಅಬುದಾಬಿಯಲ್ಲಿ ಎರಡು ಪಂದ್ಯಗಳನ್ನಾಡಿರುವ ಮುಂಬೈ ತಂಡ ಆ ಅನುಭವವನ್ನು ಬಳಸಿಕೊಳ್ಳಲು ಬಯಸಿದೆ. ಏಕೆಂದರೆ ಯುಎಇದ ಇತರೆ ಕ್ರೀಡಾಂಗಣಗಳಿಗಿಂತ ಇಲ್ಲಿನ ಪಿಚ್ ನಿಧಾನಗತಿಯದ್ದು. ಆದರೆ ಮುಂಬೈ ತಂಡ ನಿರಾಳವಾಗಿರಲು ಸಾಧ್ಯವಿಲ್ಲ. ಏಕೆಂದರೆ ಕನ್ನಡಿಗರಿಬ್ಬರು ಈ ತಂಡದ ನಿದ್ದೆಗೆಡಿಸಿದ್ದಾರೆ.

ಕಿಂಗ್ಸ್ ಇಲೆವೆನ್ ತಂಡದ ಆರಂಭಿಕರಾದ ಮಯಾಂಕ್ ಅಗರವಾಲ್ ಮತ್ತು ಕೆಎಲ್ ರಾಹುಲ್ ಜೋಡಿ ಈಗಾಗಲೇ ಮೈದಾನದಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ದಾಖಲಾದ ಎರಡು ಶತಕಗಳು ಇವರ ಹೆಸರಿನಲ್ಲಿವೆ. ಇಬ್ಬರೂ ತಲಾ ಒಂದು ಅರ್ಧ ಶತಕ ಕೂಡ ಸಿಡಿಸಿದ್ದಾರೆ. ಮುಖ್ಯವಾಗಿ ಎಂತಹ ಪಿಚ್‌ನಲ್ಲಿಯೂ ದೂರದ ಬೌಂಡರಿ ಗೆರೆಯನ್ನು ಆರಾಮಾಗಿ ದಾಟಿಸುವ ಸಾಮರ್ಥ್ಯ ಇಬ್ಬರಿಗೂ ಇದೆ. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಇರುವ ಪ್ರಮುಖ ಸವಾಲು. ಮುಂದೆ ಓದಿ...

ರಾಹುಲ್ ನಿಯಂತ್ರಣ ಸವಾಲು

ರಾಹುಲ್ ನಿಯಂತ್ರಣ ಸವಾಲು

ಪಂಜಾಬ್ ತಂಡದ ಈ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಬಗ್ಗೆ, ಮುಖ್ಯವಾಗಿ ಕೆಎಲ್ ರಾಹುಲ್ ಕುರಿತು ಮುಂಬೈ ತಲೆಕೆಡಿಸಿಕೊಳ್ಳಲು ಮತ್ತೊಂದು ಕಾರಣವಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಗಳಿಸಿದ ಸ್ಕೋರ್ 94, 71* ಮತ್ತು 100*. ಈ ಸಾಲಿನ ಕಳೆದ ಎರಡು ಪಂದ್ಯಗಳಲ್ಲಿ 132* ಮತ್ತು 69 ರನ್ ಬಾರಿಸಿದ್ದಾರೆ.

ದ್ರಾವಿಡ್ ಜತೆ ಬ್ಯಾಟಿಂಗ್ ಮಾಡುತ್ತೀನೆಂದು ಕನಸಲ್ಲೂ ಯೋಚಿಸಿರಲಿಲ್ಲ: ಸಂಜು ಸ್ಯಾಮ್ಸನ್

ರಾಹುಲ್ ದೌರ್ಬಲ್ಯಗಳ ಪಟ್ಟಿ

ರಾಹುಲ್ ದೌರ್ಬಲ್ಯಗಳ ಪಟ್ಟಿ

'ಕಳೆದ ಕೆಲವು ಪಂದ್ಯಗಳಲ್ಲಿ ಕೆಎಲ್ ರಾಹುಲ್ ನಮ್ಮ ವಿರುದ್ಧ ಚೆನ್ನಾಗಿ ಆಡಿದ್ದಾರೆ. ಅವರೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಎನ್ನುವುದು ಗೊತ್ತು. ಮೈದಾನದ ಎಲ್ಲಾ ಕಡೆಯೂ ಸ್ಕೋರ್ ಮಾಡಬಲ್ಲರು. ಆರಂಭದಿಂದ ಮಧ್ಯಮದ ಓವರ್‌ಗಳವರೆಗೆ ಅವರು ಸಾಮಾನ್ಯವಾಗಿ ಸಮಯ ತೆಗೆದುಕೊಳ್ಳುತ್ತಾರೆ. ನಮಗೆ ಅದು ಒಳ್ಳೆಯ ಅವಕಾಶ. ಅಲ್ಲಿಯವರೆಗೂ ಅವರು ಹಾಗೂ ಅವರ ಜತೆಗಿರು ಬ್ಯಾಟ್ಸ್‌ಮನ್ ಮೇಲೆ ಒತ್ತಡ ಹೇರಬಹುದು' ಎಂದು ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಹೇಳಿದ್ದಾರೆ.

ರಾಹುಲ್ ವಿಕೆಟ್ ತೆಗೆಯಲು ಪ್ಲ್ಯಾನ್ ಸಿದ್ಧ

ರಾಹುಲ್ ವಿಕೆಟ್ ತೆಗೆಯಲು ಪ್ಲ್ಯಾನ್ ಸಿದ್ಧ

'ಅವರನ್ನು ಹೇಗೆ ಔಟ್ ಮಾಡಬೇಕು ಎಂಬ ಬಗ್ಗೆ ನಾವು ಕೆಲವು ನಿರ್ದಿಷ್ಟ ಉಪಾಯಗಳನ್ನು ಮಾಡಿದ್ದೇವೆ. ಅಂತಿಮವಾಗಿ ಅವರು ಹೆಚ್ಚು ಪ್ರಬಲವಾಗಿರುವ ಜಾಗದಲ್ಲಿ ರನ್ ಗಳಿಸಲು ನಾವು ಅವರಿಗೆ ಅವಕಾಶ ನೀಡಬಾರದು. ಅವರು ಎಕ್ಸ್‌ಟ್ರಾ ಕವರ್ ಮೇಲ್ಭಾಗ ಹಾಗೂ ಫೈನ್ ಲೆಗ್ ಮೇಲೆ ಹೆಚ್ಚು ರನ್ ಗಳಿಸುತ್ತಾರೆ' ಎಂದು ಬಾಂಡ್ ವಿವರಿಸಿದ್ದಾರೆ.

ಟೂರ್ನಿಯ ಮೊದಲ ಸೋಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಪ್ರತಿಕ್ರಿಯೆ

ಇಬ್ಬರನ್ನು ಔಟ್ ಮಾಡಿದರೆ ಸಾಕು

ಇಬ್ಬರನ್ನು ಔಟ್ ಮಾಡಿದರೆ ಸಾಕು

'ನಮ್ಮಲ್ಲಿ ಗುಣಮಟ್ಟದ ಬೌಲಿಂಗ್ ಘಟಕವಿದೆ. ರಾಹುಲ್ ಹಾಗೂ ಮಯಾಂಕ್ ಮೇಲೆ ಒತ್ತಡ ಹೇರುವುದು ನಮ್ಮ ಗುರಿ. ಏಕೆಂದರೆ ಅವರಿಬ್ಬರು ಕಿಂಗ್ಸ್ ಇಲೆವೆನ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಹೀಗಾಗಿ ಅವರಿಬ್ಬರ ಮೇಲೆ ಆರಂಭದಲ್ಲಿ ಒತ್ತಡ ಹಾಕಿ ವಿಕೆಟ್ ತೆಗೆದರೆ, ಮಧ್ಯಮ ಕ್ರಮಾಂಕದ ಮೇಲೆ ಸ್ವಲ್ಪ ಕಡಿವಾಣ ಹಾಕಿದರೂ ಸಾಕು. ಅವರು ದೊಡ್ಡ ಮೊತ್ತ ಗಳಿಸದಂತೆ ತಡೆಯಬಹುದು' ಎಂದು ಗುಟ್ಟು ಬಿಚ್ಚಿಟ್ಟಿದ್ದಾರೆ.

Story first published: Thursday, October 1, 2020, 9:59 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X