ಐಪಿಎಲ್ 2021: ಆರ್‌ಸಿಬಿಯ ಪ್ರಮುಖ ಆಲ್‌ರೌಂಡರ್ ಟೂರ್ನಿಯಿಂದ ಔಟ್!

ಬೆಂಗಳೂರು, ಆಗಸ್ಟ್ 30: ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡ ಮತ್ತೊಂದು ಭಾರೀ ಆಘಾತವನ್ನು ಅನುಭವಿಸಿದೆ. ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಕಳೆದ ಕೆಲ ಆವೃತ್ತಿಗಳಿಂದ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿರುವ ವಾಶಿಂಗ್ಟನ್ ಸುಂದರ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿ ಪ್ರವಾಸ ಕೈಗೊಂಡಿದ್ದರು. ಆದರೆ ಇಂಗ್ಲೆಂಡ್ ಸರಣಿಯ ಆರಂಭಕ್ಕೂ ಮುನ್ನ ಕೈಬೆರಳಿಗೆ ಗಾಯ ಮಾಡಿಕೊಂಡಿರುವ ಅವರು ಭಾರತಕ್ಕೆ ವಾಪಾಸಾಗಿದ್ದರು. ಈಗ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದಲೂ ಅವರು ಹೊರಗುಳಿಯಬೇಕಾಗಿದೆ.

ಆರ್‌ಸಿಬಿ ತಂಡ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದು ಮಾಹಿತಿಯನ್ನು ಖಚಿತಪಡಿಸಿದೆ. ವಾಶಿಂಗ್ಟನ್ ಸುಂದರ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಕೂಡ ಆರ್‌ಸಿಬಿ ಸೇರ್ಪಡೆಗೊಳಿಸಿದೆ. ಬಂಗಾಳದ ಕ್ರಿಕೆಟರ್ ಆಕಾಶ್ ದೀಪ್ ವಾಶಿಂಗ್ಟನ್ ಸುಂದರ್ ಅವರಿಗೆ ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!

ಆರ್‌ಸಿಬಿ ಪ್ರಕಟಣೆ

ಆರ್‌ಸಿಬಿ ಪ್ರಕಟಣೆ

"ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ವಾಶೀಂಗ್ಟನ್ ಸುಂದರ್ ಐಪಿಎಲ್ 2021 ಆವೃತ್ತಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಬೆರಳಿಗೆ ಗಾಯವಾಗಿರುವ ಕಾರಣ ಅವರು ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನಕ್ಕೆ ಬಂಗಾಳ ಕ್ರಿಕೆಟ್ ತಮದ ಆಟಗಾರ ಹಾಗೂ ಆರ್‌ಸಿಬಿ ತಂಡದ ನೆಟ್ ಬೌಲರ್ ಆಗಿರುವ ಆಕಾಶ್ ದೀಪ್ ಬದಲಿ ಆಟಗಾರನಾಗಿ ತಂಡದಲ್ಲಿ ಅವಕಾಶವನ್ನು ಸೇರಿಕೊಳ್ಳಲಿದ್ದಾರೆ. ಈ ನಿರ್ಧಾರ ಆರ್‌ಸಿಬಿ ಯುವ ಆಟಗಾರರಿಗೆ ಅವಕಾಶ ನೀಡುವ ಮತ್ತು ಪೋಷಿಸುವತ್ತ ಗಮನಹರಿಸುವುದನ್ನು ಪುನರುಚ್ಚರಿಸುತ್ತದೆ. ಏಕೆಂದರೆ ತಂಡವು ಅಸಾಧಾರಣ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದೆ ಮತ್ತು ಯುವ ಪ್ರತಿಭೆಗಳಿಗೆ ಐಪಿಎಲ್ ಮತ್ತು ಭಾರತೀಯ ಕ್ರಿಕೆಟ್‌ಗೆ ಹಾದಿ ಕಂಡುಕೊಳ್ಳಲು ಅವಕಾಶವನ್ನು ಸೃಷ್ಟಿಸುತ್ತದೆ" ಎಂದು ಆರ್‌ಸಿಬಿ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದ ಸುಂದರ್

ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದ ಸುಂದರ್

ಈ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತೀಯ ತಂಡದದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ ವಾಶಿಂಗ್ಟನ್ ಸುಂದರ್ ಇಂಗ್ಲೆಂಡ್ ತಂಡದ ವಿರುದ್ಧದ ಐದು ಪಂದ್ಯಗಳ ಸರಣಿಗೆ ಸಿದ್ಧತೆಯನ್ನು ನಡೆಸುತ್ತಿದ್ದರು. ಆದರೆ ಸರಣಿಯ ಆರಂಭಕ್ಕೂ ಮುನ್ನ ಏರ್ಪಡಿಸಲಾಗಿದ್ದ ಅಭ್ಯಾಸ ಪಂದ್ಯದಲ್ಲಿ ಸುಂದರ್ ಗಾಯಗೊಂಡಿದ್ದರು. ಬೆರಳಿಗೆ ಗಾಯಮಾಡಿಕೊಂಡಿದ್ದ ಕಾರಣ ಸರಣಿಯಿಂದ ಹೊರಗುಳಿಯುವ ಅನಿವಾರ್ಯತೆಗೆ ಒಳಗಾಗಿದ್ದರು. ತವರಿಗೆ ಮರಳಿ ಚಿಕಿತ್ಸೆಯನ್ನು ಕೂಡ ಪಡೆದುಕೊಂಡಿದ್ದಾರೆ. ಆದರೆ ಸುಂದರ್‌ಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯವಿರುವ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ಅನಿವಾರ್ಯವಾಗಿ ಸುಂದರ್ ಹೊರಗುಳಿಯಬೇಕಾಗಿದೆ.

ಆರ್‌ಸಿಬಿಯಲ್ಲಿ ಪ್ರಮುಖ ಬದಲಾವಣೆ

ಆರ್‌ಸಿಬಿಯಲ್ಲಿ ಪ್ರಮುಖ ಬದಲಾವಣೆ

ಈಗಾಗಲೇ ಆರ್‌ಸಿಬಿ ತಂಡದಲ್ಲಿ ಕೆಲ ಪ್ರಮುಖ ಬದಲಾವನೆಗಳನ್ನು ಮಾಡಿಕೊಳ್ಳಲಾಗಿದೆ. ಆಡಂ ಜಂಪಾ ಸಹಿತ ಕೆಲ ಆಟಗಾರರು ಐಪಿಎಲ್‌ನ ಉಳಿದ ಪಮದ್ಯಗಳಿಗೆ ಅಲಭ್ಯವಾಗಿದ್ದಾರೆ. ಈ ಸ್ಥಾನಗಳಿಗೆ ಈಗಾಗಲೇ ಆರ್‌ಸಿಬಿ ಬದಲಿ ಆಟಗಾರರನ್ನು ಕೂಡ ಘೋಷಿಸಿದೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಬದಲು ಶ್ರೀಲಂಕಾದ ಸ್ಪಿನ್ನರ್, ಆಲ್ ರೌಂಡರ್ ವನಿಂದು ಹಸರಂಗ ಆರ್‌ಸಿಬಿ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಆಸೀಸ್ ಮತ್ತೊಬ್ಬ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬದಲು ಶ್ರೀಲಂಕಾದ ದುಶ್ಮಂತ ಚಮೀರ ಕಣಕ್ಕಿಳಿಯಲಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಫಿನ್ ಅಲೆನ್ ಬದಲಿಗೆ ಸಿಂಗಾಪುರದ ಆಟಗಾರ ಟಿಮ್ ಡೇವಿಡ್ ತಂಡವನ್ನು ಕೂಡಿಕೊಂಡಿದ್ದಾರೆ.

ಧೋನಿ ವರ್ಷದ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ! | Oneindia Kannada
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯಜುರ್ವೇದ ಚಾಹಲ್, ಕೈಲ್ ಜೆಮಿಸನ್, ಕ್ರಿಶ್ಚಿಯನ್, ವನಿಂದು ಹಸರಂಗ, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜಾರ್ಜ್ ಗಾರ್ಟನ್, ದುಷ್ಮಂತ ಚಮೀರಾ, ಕೆಎಸ್ ಭರತ್, ಸುಯಾಶ್, ಅಜರುದ್ದೀನ್, ರಜತ್ ಪಾಟಿದಾರ್, ನವದೀಪ್ ಸೈನಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಎಸ್ ಅಹ್ಮದ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Monday, August 30, 2021, 11:28 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X