ಐಪಿಎಲ್ ಸ್ಥಳಗಳ ಗೊಂದಲದ ಬಗ್ಗೆ ಫ್ರಾಂಚೈಸಿಗಳಿಗೆ ಅಭಯ ನೀಡಿದ ಬ್ರಿಜೇಶ್ ಪಟೇಲ್

ಐಪಿಎಲ್ 2021ರ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಟೂರ್ನಿಯ ಆರಂಭ ಯಾವಾಗ ಎಂಬುದು ಈಗ ಪ್ರಶ್ನೆಯಾಗಿದೆ. ಅದಕ್ಕೂ ಮುನ್ನ ಐಪಿಎಲ್ ನಡೆಯುವ ಸ್ಥಳಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಐಪಿಎಲ್ ಫ್ರಾಂಚೈಸಿಗಳು ಪಂದ್ಯಗಳು ನಡೆಯುವ ಸ್ಥಳಗಳ ಬಗ್ಗೆ ಗೊಂದಲದಲ್ಲಿದ್ದು ಎಲ್ಲದಕ್ಕೂ ಪರಿಹಾರವನ್ನು ನೀಡಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ.

ಈ ಬಗ್ಗೆ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಗುರುವಾರ ಈ ಬಗ್ಗೆ ಇನ್‌ಸೈಡ್ ಸ್ಪೋರ್ಟ್‌ಗೆ ಅವರು ಮಾಹಿತಿಯನ್ನು ನೀಡುತ್ತಾ, ಫ್ರಾಂಚೈಸಿಗಳಲ್ಲಿರುವ ಗೊಂದಲಗಳಿಗೆ ಪರಿಹಾರವನ್ನು ನೀಡುವ ಸಲುವಾಗಿ ಐಪಿಎಲ್ 2021ರ ಆಯೋಜನಾ ಸ್ಥಳಗಳ ಬಗ್ಗೆ ಶೀಘ್ರದಲ್ಲೇ ಸಭೆಯನ್ನು ನಡೆಸಿ ವಿವರಣೆಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

"ಐಪಿಎಲ್ ಆಡಳಿತ ಮಂಡಳಿಯ ಸಭೆಯ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ. ಇದು ವಿಡಿಯೋ ಅಥವಾ ಮುಖಾಮುಖಿ ಸಭೆಯಾಗಿರಬಹುದು, ಯಾವುದು ಅಂತಿಮವಾಗಿಲ್ಲ. ಈ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಆದರೆ ಅದನ್ನು ಶೀಘ್ರದಲ್ಲಿಯೇ ನಡೆಸಲಿದ್ದೇವೆ. ಪಂದ್ಯ ಆಯೋಜನಾ ಸ್ಥಳಗಳ ಬಗ್ಗೆ ಫ್ರಾಂಚೈಸಿಗಳಲ್ಲಿ ಇರುವ ಗೊಂದಲಗಳ ಬಗ್ಗೆ ವಿವರಣೆಗಳನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ" ಎಂದಿದ್ದಾರೆ.

ಇನ್ನು ಪಂದ್ಯದ ಆಯೋಜನಾ ಸ್ಥಳಗಳ ಅಂತಿಮಪಟ್ಟಿಯನ್ನು ಸಭೆಯ ಸಂದರ್ಭದಲ್ಲಿ ನಿರ್ಣಯಿಸಲಾಗುತ್ತದೆ ಎಂದಿದ್ದಾರೆ ಬ್ರಿಜೇಶ್ ಪಟೇಲ್. "ಪಂದ್ಯದ ಆಯೋಜನಾ ಸ್ಥಳಗಳ ಬಗ್ಗೆ ಯಾವುದೇ ಊಹಾಪೋಹಗಳಿಗೆ ಅವಕಾಶವಿಲ್ಲ. ಎಲ್ಲಾ ನಿರ್ಧಾಗಳನ್ನು ಕೂಡ ಈ ಸಭೆಯ ಸಂದರ್ಭದಲ್ಲಿಯೇ ನಿರ್ಧರಿಸಲಾಗುತ್ತದೆ" ಎಂದಿದ್ದಾರೆ.

ಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವು

"ನಾನು ಇಷ್ಟು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ, ಆಯೋಜನಾ ಸ್ಥಳಗಳ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಫ್ರಾಂಚೈಸಿಗಳಿಂದ ಅಭಿಪ್ರಾಯಗಳನ್ನು ಪಡೆದುಕೊಂಡ ಬಳಿಕವೇ ನಿರ್ಧರಿಸಲಾಗುತ್ತದೆ. ಈಗ ನಾವು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದೇವೆ" ಎಂದು ಬ್ರಿಜೇಷ್ ಪಟೇಲ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 4, 2021, 13:42 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X