ಪ್ರಮುಖ ಕ್ರಿಕೆಟಿಗರು ಐಪಿಎಲ್ ತೊರೆಯುತ್ತಿರುವುದಕ್ಕೆ ಅಸಲಿ ಕಾರಣಗಳಿವು!

ನವದೆಹಲಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್)ಗೆ ತೊಡಕಾಗಿದೆ. ಭಾರತದಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ನಗದು ಶ್ರೀಮಂತ ಟೂರ್ನಿ ಮುಂದುವರೆಸಲು ಸವಾಲುಗಳು ಎದುರಾಗುತ್ತಿದೆ. ಹೆಚ್ಚಾಗುತ್ತಿರುವ ಕೊರೊನಾ ಆತಂಕದ ಕಾರಣ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ಒಂದಿಷ್ಟು ಪ್ರಮುಖ ಕ್ರಿಕೆಟಿಗರು ಟೂರ್ನಿಯಿಂದ ದೂರ ಉಳಿಯುವ ನಿರ್ಧಾರ ತಾಳಿದ್ದಾರೆ.

ಐಪಿಎಲ್‌ನಿಂದ ಹೊರ ಬೀಳುತ್ತಿದ್ದಾರೆ ಆಟಗಾರರು, ಟೂರ್ನಿ ನಿಲ್ಲುತ್ತಾ?!

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಭಾರತದಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಎದುರಾಗಿದೆ. ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕಾಡತೊಡಗಿದೆ. ಈ ಮಧ್ಯೆ ಐಪಿಎಲ್ ನಡೆಯುವ ಅಗತ್ಯವಿದೆಯಾ ಎಂದು ಕೆಲ ಕ್ರಿಕೆಟಿಗರು ಪ್ರಶ್ನಿಸುತ್ತಿದ್ದಾರೆ.

ಪಿಎಂ ಕೇರ್ಸ್‌ಗೆ 50,000 ಡಾಲರ್ ದೇಣಿಗೆ ನೀಡಿದ ಪ್ಯಾಟ್ ಕಮಿನ್ಸ್

ಭಾರತದಲ್ಲಿ ಕೋವಿಡ್-19 ಭೀತಿ ಏರುತ್ತಲೇ ಇರುವುದರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಅನೇಕ ಕ್ರಿಕೆಟಿಗರು ಇದರಿಂದ ಪರಿಣಾಮಕ್ಕೊಳಗಾಗುತ್ತಿದ್ದಾರೆ. ಕೋವಿಡ್-19 ಭೀತಿ ಕ್ರಿಕೆಟಿಗರ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿದೆ ಎಂಬ ವಿವರಣೆ ಇಲ್ಲಿದೆ.

ಬಯೋಬಬಲ್ ತೊಳಲಾಟ

ಬಯೋಬಬಲ್ ತೊಳಲಾಟ

ಕೊರೊನಾ ಸೋಂಕು ಜಗತ್ತನ್ನು ಆವರಿಸಿದಾಗಲೇ ಜನರಿಗೆ ಕ್ವಾರಂಟೈನ್, ಬಯೋಬಬಲ್ ಪರಿಕಲ್ಪನೆಗಳ ಅರಿವಾಗಿದ್ದು. ಪಿಡುಗಿನ ಈ ದಿನಗಳಲ್ಲಿ ಕ್ರೀಡೆ ಅಥವಾ ಕ್ರಿಕೆಟ್‌ ಟೂರ್ನಿಗಳು ನಡೆಸಬೇಕಾದರೆ ಕ್ರೀಡಾಪಟುಗಳನ್ನು ಜೈವಿಕ ಪರದೆಯ ಒಳಗೆ ಇರಿಸಲಾಗುತ್ತದೆ. ಈ ಪರದೆಯೊಳಗೆ ಅಂದರೆ ಪ್ರದೇಶದೊಳಗೆ ಸೋಂಕಿತರಿಗೆ ಪರವೇಶವಿಲ್ಲ. ಪರದೆಯ ಒಳಗಿರುವವರಿಗೂ ಹೊರಬರಲು ನಿರ್ಬಂಧವಿರುತ್ತದೆ. ಜೈವಿಕ ಪರದೆ ಪ್ರವೇಶಿಸುವ ಕ್ರೀಡಾಪಟು ಪರದೆ ಒಳಗಿರುವವರನ್ನು ಹೊರತುಪಡಿಸಿ ಹೊರ ಜಗತ್ತಿನ ಸಂಪರ್ಕವಿಲ್ಲದೆ ದಿನಗಳನ್ನು ಕಳೆಯಬೇಕಾಗುತ್ತದೆ. ಈ ಅನಿವಾರ್ಯತೆ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರಿಕೆಟಿಗರ ಮಾನಸಿಕ ತೊಳಲಾಟಕ್ಕೆ ಕಾರಣವಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳ ವೇಳೆ ಬಯೋಬಬಲ್ ಒಳಗಿದ್ದು ಬೇಸತ್ತು ಹೋಗಿರುವ ಕ್ರಿಕೆಟಿಗರು ಮತ್ತೆ ಐಪಿಎಲ್‌ನಲ್ಲಿ ಎರಡು ತಿಂಗಳ ಕಾಲ ಬಯೋಬಬಲ್ ಒಳಗಿರಲು ಒದ್ದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಒಂದಿಷ್ಟು ಪ್ರಮುಖ ಆಟಗಾರರು ಐಪಿಎಲ್ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಕೋವಿಡ್-19 ಭೀತಿ

ಕೋವಿಡ್-19 ಭೀತಿ

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಹಜವಾಗೇ ಇಲ್ಲಿರುವ ವಿದೇಶಿ ಕ್ರಿಕೆಟಿಗರಿಗೆ ಆತಂಕ ಶುರುವಾಗಿದೆ. ವಿದೇಶಿಗರಿಗಷ್ಟೇ ಅಲ್ಲ; ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಆಟಗಾರರೂ ತಮ್ಮ ಕುಟುಂಬಸ್ಥರ ರಕ್ಷಣೆ ವಿಚಾರದಲ್ಲಿ ಭೀತಿಗೊಳಲಾಗುತ್ತಿದ್ದಾರೆ. ಐಪಿಎಲ್‌ನಿಂದ ಆಟಗಾರರು ದೂರ ಉಳಿಯುವ ನಿರ್ಧಾರ ತಾಳುತ್ತಿರುವುದಕ್ಕೆ ಇದೂ ಒಂದು ಕಾರಣ. ಸೋಂಕಿತರ ಸಂಖ್ಯೆ ಹೆಚ್ಚಳ, ಕುಟುಂಬದ ಸುರಕ್ಷೆಯ ಭೀತಿ ಈ ಎಲ್ಲಾ ಕಾರಣಗಳಿಂದಾಗಿ ಕ್ರಿಕೆಟಿಗರು ಆಟದ ಕಡೆಗೆ ಗಮನಹರಿಸಲು ತೊಂದರೆ ಅನುಭವಿಸುತ್ತಿದ್ದಾರೆ.

ಯಾರೆಲ್ಲಾ ಐಪಿಎಲ್ ತೊರೆದಿದ್ದಾರೆ?

ಯಾರೆಲ್ಲಾ ಐಪಿಎಲ್ ತೊರೆದಿದ್ದಾರೆ?

ಕೊರೊನಾ ಭೀತಿ, ಬಯೋಬಬಲ್ ಆಯಾಸ ಮತ್ತು ಗಾಯದ ಕಾರಣಗಳಿಗಾಗಿ ಈಗಾಗಲೇ ಒಂದಿಷ್ಟು ಕ್ರಿಕೆಟಿಗರು ಐಪಿಎಲ್‌ನಿಂದ ಹೊರ ಹೋಗುವ ನಿರ್ಧಾರ ಪ್ರಕಟಿಸಿದ್ದಾರೆ/ಹೊರ ನಡೆದಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಆ್ಯಂಡ್ರ್ಯೂ ಟೈ, ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಆ್ಯಡಂ ಜಂಪಾ, ವೇಗದ ಬೌಲರ್-ಆಲ್ ರೌಂಡರ್ ಕೇನ್ ರಿಚರ್ಡ್ಸನ್ ಈ ಬಾರಿಯ ಐಪಿಎಲ್‌ನಿಂದ ಹೊರ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಬಯೋಬಬಲ್ ಆಯಾಸದ ಕಾರಣ ನೀಡಿ ಈ ಮೊದಲೇ ರಾಜಸ್ಥಾನ್ ರಾಯಲ್ಸ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಐಪಿಎಲ್‌ನಿಂದ ಹೊರ ನಡೆದಿದ್ದರು. ಇನ್ನು ಗಾಯದ ಕಾರಣದಿಂದಾಗಿ ಡೆಲ್ಲಿಯ ಶ್ರೇಯಸ್ ಐಯ್ಯರ್, ರಾಜಸ್ಥಾನ್‌ನ ಬೆನ್ ಸ್ಟೋಕ್ಸ್‌, ಜೋಫ್ರಾ ಆರ್ಚರ್ ಕೂಡ ಐಪಿಎಲ್ ತ್ಯಜಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, April 26, 2021, 18:23 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X