ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ಬಯೋಬಬಲ್‌ನಲ್ಲಿ ನಾವು ಅತ್ಯಂತ ಸುರಕ್ಷಿತವಾಗಿದ್ದೇವೆ: ಕ್ವಿಂಟನ್ ಡಿಕಾಕ್

IPL 2021: I feel pretty safe in our bubble says Quinton de Kock

ಕೊರೊನಾ ವೈರಸ್‌ನ ಆತಂಕದ ಮಧ್ಯೆ ಸಾಕಷ್ಟು ಮುಂಜಾಗ್ರತಾಕ್ರಮಗಳೊಂದಿಗೆ ಈ ಬಾರಿಯ ಐಪಿಎಲ್‌ಅನ್ನು ಆಯೋಜನೆ ಮಾಡಲಾಗುತ್ತಿದೆ. ಟೂರ್ನಿಯ ಆರಂಭದ ನಂತರ ಐವರು ಆಟಗಾರರು ಟೂರ್ನಿಯಿಂದ ಹೊರನಡೆದಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ತಂಡದ ಕ್ವಿಂಟನ್ ಡಿಕಾಕ್ ಐಪಿಎಲ್‌ಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಕೇನ್ ರಿಚರ್ಡ್ಸನ್ ಆಡಂ ಜಂಪಾ, ಡೆಲ್ಲಿ ಕ್ಯಾಪಿಟಲ್ಸ್‌ನ ಅನುಭವಿ ಆಟಗಾರ ಆರ್ ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡದ ಲಿಯಾಮ್ ಲಿವಿಂಗ್ಸ್ಟನ್ ಹಾಗೂ ಆಂಡ್ರೋ ಟೈ ಟೂರ್ನಿಯಿಂದ ಅರ್ಧಕ್ಕೆ ಹೊರ ನಡೆದ ಆಟಗಾರರಾಗಿದ್ದಾರೆ.

RCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿRCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

ಆದರೆ ಮುಂಬೈ ತಂಡದ ಆಟಗಾರ ಕ್ವಿಂಟನ್ ಡಿಕಾಕ್ ಟೂರ್ನಿಗಾಗಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾಕಷ್ಟು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನ ಬಯೋಬಬಲ್ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಶ್ರಮದ ಬಗ್ಗೆ ಡಿಕಾಕ್ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

"ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ನಮ್ಮ ವೈದ್ಯರ ಮೇಲೆ ನಮಗೆ ನಂಬಿಕೆಯಿದೆ. ನಮ್ಮ ಬಯೋಬಬಲ್‌ನಲ್ಲಿ ನಾವು ತುಂಬಾ ಸುರಕ್ಷಿತವಾಗಿರುವ ಭಾವನೆಯೂ ಮೂಡುತ್ತಿದೆ ಹಾಗೂ ಇದು ಸುಲಭವಾಗಿಯೂ ಇದೆ" ಎಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಗೆದ್ದ ಬಳಿಕ ಡಿಕಾಕ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂ

"ನಾವು ಇನ್ನು ಕೂಡ ಮುಂಜಾಗ್ರತೆಗಳನ್ನು ವಹಿಸುತ್ತಿದ್ದೇವೆ ಹಾಗೂ ನನಗೆ ಸುರಕ್ಷಿತ ಭಾವನೆ ಮೂಡುತ್ತಿದೆ. ನನಗೆ ಬೇರೆಯವರ ಬಗ್ಗೆ ಗೊತ್ತಿಲ್ಲ. ನನ್ನ ವಿಚಾರವಾಗಿ ನಾನು ಮಾತನಾಡುತ್ತಿದ್ದೇನೆ. ನನಗೆ ಇಲ್ಲಿ ಪಂದ್ಯದಿಂದ ಹಿಡಿದು ಅಭ್ಯಾಸ ಎಲ್ಲವೂ ಸುಲಭವಾಗಿ ನಡೆಯುತ್ತಿದೆ" ಎಂದು ಕ್ವಿಂಟನ್ ಡಿಕಾಕ್ ಅಭಿಪ್ರಾಯಪಟ್ಟಿದ್ದಾರೆ.

Story first published: Friday, April 30, 2021, 12:59 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X