ಐಪಿಎಲ್: ಟೂರ್ನಿಗೂ ಮುನ್ನ 10 ಸಿಕ್ಸರ್, ಭರ್ಜರಿ ಶತಕ ಚಚ್ಚಿದ ಎಬಿಡಿ, ಪಂದ್ಯದ ಹೈಲೈಟ್ಸ್ ಇಲ್ಲಿದೆ

ಇದೇ ವರ್ಷದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29 ಪಂದ್ಯಗಳು ಮುಗಿದ ನಂತರ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದೂಡಲಾಗಿತ್ತು. ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳನ್ನು ಇದೇ ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಪುನರಾರಂಭಿಸಲಾಗುತ್ತಿದೆ.

ಚೆನ್ನೈ ಸೇರಿದ ಮೇಲೆ ಹಿಂದೆ ಸಿಗುತ್ತಿದ್ದಷ್ಟು ಅವಕಾಶ ಸಿಗಲಿಲ್ಲ; ಮನಬಿಚ್ಚಿ ಮಾತನಾಡಿದ ದೀಪಕ್ ಚಹರ್ಚೆನ್ನೈ ಸೇರಿದ ಮೇಲೆ ಹಿಂದೆ ಸಿಗುತ್ತಿದ್ದಷ್ಟು ಅವಕಾಶ ಸಿಗಲಿಲ್ಲ; ಮನಬಿಚ್ಚಿ ಮಾತನಾಡಿದ ದೀಪಕ್ ಚಹರ್

ಹೌದು, ಯುಎಇಯಲ್ಲಿ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳ ಪುನರಾರಂಭಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲ ತಂಡಗಳ ಬಹುತೇಕ ಎಲ್ಲಾ ಆಟಗಾರರು ಯುಎಇ ತಲುಪಿದ್ದು ತರಬೇತಿಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಯುಎಇ ತಲುಪಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಯುಎಇ ತಲುಪಿ ಬೆಂಗಳೂರು ತಂಡವನ್ನು ಸೇರಿಕೊಂಡ ಖುಷಿಯನ್ನು ಹಂಚಿಕೊಂಡಿದ್ದರು.

ಐಪಿಎಲ್: ಹೊಸದಾಗಿ ಆರ್‌ಸಿಬಿ ಸೇರಿರುವ ಲಂಕಾದ ವನಿಂದು ಹಸರಂಗಗೆ ಕೊಹ್ಲಿ ವಾಟ್ಸಾಪ್ ಸಂದೇಶಐಪಿಎಲ್: ಹೊಸದಾಗಿ ಆರ್‌ಸಿಬಿ ಸೇರಿರುವ ಲಂಕಾದ ವನಿಂದು ಹಸರಂಗಗೆ ಕೊಹ್ಲಿ ವಾಟ್ಸಾಪ್ ಸಂದೇಶ

ಹೀಗೆ ಯುಎಇ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಟೂರ್ನಿ ಆರಂಭವಾಗುವ ಮುನ್ನ ಅಭ್ಯಾಸ ಪಂದ್ಯ ಆಡುವುದರ ಮೂಲಕ ತಯಾರಿಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಅಭ್ಯಾಸ ಪಂದ್ಯವೊಂದರಲ್ಲಿ ತೊಡಗಿಕೊಂಡಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ಕುರಿತಾಗಿ ಕೆಲ ಮಾಹಿತಿಗಳು ಲಭ್ಯವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಡೆಸಿದ ಅಭ್ಯಾಸ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್ ಅಬ್ಬರದ ಶತಕವನ್ನು ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಅಭ್ಯಾಸ ಪಂದ್ಯದಲ್ಲಿ ಆಟಗಾರರು ಗಳಿಸಿದ ರನ್ ಮತ್ತು ಫಲಿತಾಂಶದ ಕೆಲ ಮಾಹಿತಿಗಳು ಮುಂದೆ ಇದೆ ಓದಿ..

ಹರ್ಷಲ್ ಪಟೇಲ್ 11 ಮತ್ತು ದೇವದತ್ ಪಡಿಕ್ಕಲ್ 11 ನಡುವೆ ನಡೆದ ಪಂದ್ಯ

ಹರ್ಷಲ್ ಪಟೇಲ್ 11 ಮತ್ತು ದೇವದತ್ ಪಡಿಕ್ಕಲ್ 11 ನಡುವೆ ನಡೆದ ಪಂದ್ಯ

ಯುಎಇ ಈ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು 2 ತಂಡಗಳಾಗಿ ವಿಂಗಡಿಸಿಕೊಂಡು ಅಭ್ಯಾಸ ಪಂದ್ಯವನ್ನು ನಡೆಸಲಾಗಿದೆ. ಹರ್ಷಲ್ ಪಟೇಲ್ ಇಲೆವೆನ್ ಮತ್ತು ದೇವದತ್ ಪಡಿಕ್ಕಲ್ ಇಲೆವೆನ್ ಎಂಬ 2 ತಂಡಗಳನ್ನು ಮಾಡಿಕೊಂಡು ಅಭ್ಯಾಸ ಪಂದ್ಯವನ್ನು ನಡೆಸಲಾಗಿದ್ದು ದೇವದತ್ ಪಡಿಕ್ಕಲ್ ಇಲೆವೆನ್ ತಂಡ 7 ವಿಕೆಟ್‍ಗಳ ಜಯವನ್ನು ಸಾಧಿಸಿದೆ.

 46 ಎಸೆತಗಳಲ್ಲಿ ಶತಕ ಚಚ್ಚಿದ ಎಬಿ ಡಿವಿಲಿಯರ್ಸ್

46 ಎಸೆತಗಳಲ್ಲಿ ಶತಕ ಚಚ್ಚಿದ ಎಬಿ ಡಿವಿಲಿಯರ್ಸ್

ಹೀಗೆ ಹರ್ಷಲ್ ಪಟೇಲ್ ಇಲೆವೆನ್ ಮತ್ತು ದೇವದತ್ ಪಡಿಕ್ಕಲ್ ಇಲೆವೆನ್ ತಂಡಗಳ ನಡುವೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭ್ಯಾಸ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 46 ಎಸೆತಗಳಲ್ಲಿ ಶತಕವನ್ನು ಪೂರೈಸುವುದರ ಮೂಲಕ ಗಮನ ಸೆಳೆದಿದ್ದಾರೆ. ಕೇವಲ 46 ಎಸೆತಗಳಲ್ಲಿ ಶತಕವನ್ನು ಬಾರಿಸುವ ಎಬಿ ಡಿವಿಲಿಯರ್ಸ್ 10 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಿಡಿಸಿದರು. ಮೊದಲ 19 ಎಸೆತಗಳಲ್ಲಿ 19 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್ 46 ಎಸೆತಗಳನ್ನು ಎದುರಿಸುವಷ್ಟೊತ್ತಿಗೆ 104 ರನ್ ಬಾರಿಸಿದ್ದಾರೆ. ಹೀಗೆ ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿರುವ ಎಬಿ ಡಿವಿಲಿಯರ್ಸ್ ಮುಂದಿನ ಪಂದ್ಯಗಳಲ್ಲಿ ಆಡುವ ಎದುರಾಳಿಗಳಿಗೆ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದ್ದಾರೆ. ಇನ್ನು ಎಬಿಡಿ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮತ್ತೊಬ್ಬ ಆಟಗಾರ ಕೆಎಸ್ ಭರತ್ 47 ಎಸೆತಗಳಲ್ಲಿ 95 ರನ್ ಬಾರಿಸುವ ಮೂಲಕ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ ಹಾಗೂ ಮೊಹಮ್ಮದ್ ಅಜರುದ್ದೀನ್ 43 ಎಸೆತಗಳಲ್ಲಿ 66 ರನ್ ಬಾರಿಸಿ ಗಮನ ಸೆಳೆದರು.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada
ಅಭ್ಯಾಸ ಪಂದ್ಯದಲ್ಲಿ ಯಾರು ಎಷ್ಟು ರನ್ ಬಾರಿಸಿದರು?

ಅಭ್ಯಾಸ ಪಂದ್ಯದಲ್ಲಿ ಯಾರು ಎಷ್ಟು ರನ್ ಬಾರಿಸಿದರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಡೆಸಿದ ಹರ್ಷಲ್ ಪಟೇಲ್ ಇಲೆವೆನ್ ಮತ್ತು ದೇವದತ್ ಪಡಿಕ್ಕಲ್ ಇಲೆವೆನ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..

ಎಬಿ ಡಿವಿಲಿಯರ್ಸ್: 104 (46)

ಕೆ ಎಸ್ ಭರತ್ : 95 (47)

ಮೊಹಮ್ಮದ್ ಅಜರುದ್ದೀನ್: 66 (43)

ದೇವದತ್ ಪಡಿಕ್ಕಲ್: 36 (21)

For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 10:50 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X