ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021 ಫೈನಲ್: ಇದೇ ಧೋನಿ ಕೊನೆಯ ಪಂದ್ಯವಾಗುತ್ತಾ?; ಹೌದು ಎನ್ನುತ್ತಿವೆ ಈ 3 ಅಂಶಗಳು

IPL 2021: Will MS Dhoni announce retirement after the final match of tournament?

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅಂತಿಮ ಘಟ್ಟಕ್ಕೆ ತಲುಪಿದ್ದು, ಟೂರ್ನಿಯ ಫೈನಲ್ ಪಂದ್ಯ ಇಂದು ( ಅಕ್ಟೋಬರ್ 15 ) ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗುತ್ತಿದೆ.

'ನೀನು ಧೋನಿ ರೀತಿಯ ವಿಕೆಟ್ ಕೀಪರ್‌ ಅಲ್ಲ'; ರಿಷಭ್ ಪಂತ್‌ಗೆ ಕುಟುಕಿದ ವಿರಾಟ್ ಕೊಹ್ಲಿ!'ನೀನು ಧೋನಿ ರೀತಿಯ ವಿಕೆಟ್ ಕೀಪರ್‌ ಅಲ್ಲ'; ರಿಷಭ್ ಪಂತ್‌ಗೆ ಕುಟುಕಿದ ವಿರಾಟ್ ಕೊಹ್ಲಿ!

ಟೂರ್ನಿಯ ಆರಂಭದಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಸೋತು ಕಳಪೆಯಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣ ಆರಂಭವಾದ ಬಳಿಕ ಸಾಲು ಸಾಲು ಪಂದ್ಯಗಳಲ್ಲಿ ಗೆದ್ದು ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳುವುದರ ಜೊತೆಗೆ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿತು. ನಂತರ ಪ್ಲೇ ಆಫ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಮಣ್ಣು ಮುಕ್ಕಿಸಿ ಇದೀಗ ಫೈನಲ್ ಹಂತಕ್ಕೆ ತಲುಪಿದೆ.

ಇನ್ನು ಮತ್ತೊಂದೆಡೆ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಅಂತಹ ಸಂದರ್ಭದಲ್ಲಿ ಮಾತನಾಡಿದ್ದ ಎಂ ಎಸ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಮ್ಮ ತಂಡ ಪುಟಿದೇಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಟೂರ್ನಿ ಮುಗಿದ ನಂತರ ವಿದಾಯ ನೀಡುತ್ತೀರಾ ಎಂಬ ಪ್ರಶ್ನೆ ಎದುರಾದಾಗ ಎಂಎಸ್ ಧೋನಿ 'ಖಂಡಿತವಾಗಿಯೂ ಇಲ್ಲ' ಎಂಬ ಉತ್ತರವನ್ನು ನೀಡಿದ್ದರು.

ರನ್ ಬಾರಿಸಲಾಗದ ಆತನ ಅವಶ್ಯಕತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಇಲ್ಲ: ಬ್ರಿಯಾನ್ ಲಾರಾರನ್ ಬಾರಿಸಲಾಗದ ಆತನ ಅವಶ್ಯಕತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಇಲ್ಲ: ಬ್ರಿಯಾನ್ ಲಾರಾ

ಹೀಗೆ ಕಳೆದ ಬಾರಿಯ ಐಪಿಎಲ್ ಟೂರ್ನಿ ಮುಗಿದ ನಂತರ ಎಂಎಸ್ ಧೋನಿ ನೀಡಿದ್ದ ಈ ಎರಡೂ ಹೇಳಿಕೆಗಳನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿಜ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂ ಎಸ್ ಧೋನಿ ಅವರ ಭರವಸೆಯಂತೆಯೇ ಪುಟಿದೆದ್ದಿದ್ದು ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ ಹಾಗೂ ಎಂಎಸ್ ಧೋನಿ ವಿದಾಯ ಘೋಷಿಸದೇ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಎಂಎಸ್ ಧೋನಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಗಿದ ನಂತರ ವಿದಾಯ ಘೋಷಿಸಲಿದ್ದಾರೆ ಎಂಬ ಸುದ್ದಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಹರಿದಾಡುತ್ತಿವೆ. ಹೀಗೆ ಹರಿದಾಡುತ್ತಿರುವ ಸುದ್ದಿ ಸತ್ಯ ಎಂಬುದಕ್ಕೆ ಕೆಲ ಅಂಶಗಳೂ ಸಹ ಪುಷ್ಟಿ ನೀಡುತ್ತಿವೆ. ಎಂಎಸ್ ಧೋನಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಫೈನಲ್ ಪಂದ್ಯದ ಬಳಿಕ ಐಪಿಎಲ್‌ಗೆ ಆಟಗಾರನಾಗಿ ವಿದಾಯ ಘೋಷಿಸುವುದು ನಿಜ ಎನ್ನುತ್ತಿರುವ ಆ 3 ಅಂಶಗಳ ವಿವರ ಈ ಕೆಳಕಂಡಂತಿದೆ ಓದಿ..

ಮುಂದಿನ ಹರಾಜಿನ ಕುರಿತು ಅನುಮಾನ ವ್ಯಕ್ತಪಡಿಸಿದ ಧೋನಿ

ಮುಂದಿನ ಹರಾಜಿನ ಕುರಿತು ಅನುಮಾನ ವ್ಯಕ್ತಪಡಿಸಿದ ಧೋನಿ

ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಮಾತನಾಡಿದ್ದ ಎಂಎಸ್ ಧೋನಿ ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರನಾಗಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆ ಎದುರಾದಾಗ 'ಮುಂಬರುವ ಐಪಿಎಲ್ ಹರಾಜಿನ ನಿಯಮಗಳೇನೆಂಬುದು ಇನ್ನೂ ಸರಿಯಾಗಿ ಗೊತ್ತಿಲ್ಲ. ಎಷ್ಟು ದೇಶಿ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದರ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಹೀಗೆ ಮುಂಬರುವ ಐಪಿಎಲ್ ಹರಾಜಿನ ಕುರಿತು ಸಾಕಷ್ಟು ಗೊಂದಲಗಳಿದ್ದು ಯಾವ ರೀತಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ' ಎಂಬ ಹೇಳಿಕೆಯನ್ನು ಎಂಎಸ್ ಧೋನಿ ನೀಡಿದರು. ಎಂಎಸ್ ಧೋನಿ ಮುಂಬರಲಿರುವ ಐಪಿಎಲ್ ಹರಾಜಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದು ಅವರ ವಿದಾಯದ ಸುದ್ದಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ

ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ

ನಿಮಗೆಲ್ಲ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಟೀಮ್ ಇಂಡಿಯಾಗೆ ಎಂಎಸ್ ಧೋನಿ ಮಾರ್ಗದರ್ಶಕನಾಗಿ ಆಯ್ಕೆಯಾಗಿದ್ದಾರೆ. ಈ ಅಂಶವೂ ಸಹ ಎಂಎಸ್ ಧೋನಿ ನಿವೃತ್ತಿ ಮೇಲಿನ ಅನುಮಾನವನ್ನು ಹೆಚ್ಚಾಗುವಂತೆ ಮಾಡಿತು ಎಂದರೆ ತಪ್ಪಾಗಲಾರದು. ಐಸಿಸಿ ನಿಯಮದ ಪ್ರಕಾರ ಆಟಗಾರನೋರ್ವ ಒಂದು ತಂಡಕ್ಕೆ ನಾಯಕ ಮತ್ತು ಮತ್ತೊಂದು ತಂಡಕ್ಕೆ ಮೆಂಟರ್ ಆಗಿ ಇರುವುದು ಅಪರಾಧ ಎನ್ನುವುದು ಅನುಮಾನಗಳನ್ನು ಹೆಚ್ಚಾಗುವಂತೆ ಮಾಡಿದೆ.

KKR ತಂಡ ಕಡೆಗೆ 6 ಹೊಡೆದು ಗೆದ್ದು ಬೀಗಿದರು | Oneindia Kannada
ಕಳೆದ ಬಾರಿ ಧೋನಿ ನೀಡಿದ್ದ ಉತ್ತರಕ್ಕೂ ಈ ಬಾರಿ ಧೋನಿ ನೀಡಿದ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ!

ಕಳೆದ ಬಾರಿ ಧೋನಿ ನೀಡಿದ್ದ ಉತ್ತರಕ್ಕೂ ಈ ಬಾರಿ ಧೋನಿ ನೀಡಿದ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ!


ಕಳೆದ ಬಾರಿಯ ಐಪಿಎಲ್ ಟೂರ್ನಿಯ ವೇಳೆ ನಿವೃತ್ತಿಯ ಪ್ರಶ್ನೆ ಎದುರಾದಾಗ ಖಂಡಿತವಾಗಿಯೂ ಇಲ್ಲ ಎಂದು ತಕ್ಷಣವೇ ಉತ್ತರಿಸಿದ್ದ ಎಂ ಎಸ್ ಧೋನಿ ಈ ಬಾರಿ ಅದೇ ರೀತಿಯ ಪ್ರಶ್ನೆ ಎದುರಾದಾಗ ಕಳೆದ ಬಾರಿ ನೀಡಿದ್ದ ರೀತಿ ವಿಶ್ವಾಸದಿಂದ ಉತ್ತರವನ್ನು ನೀಡಲಿಲ್ಲ. ಬದಲಾಗಿ ಮುಂಬರುವ ದಿನಗಳಲ್ಲಿ ಯಾವ ರೀತಿ ಆಗುತ್ತದೆಯೋ ನೋಡೋಣ ಎಂಬ ಅನುಮಾಸ್ಪದ ಉತ್ತರವನ್ನು ನೀಡಿದರು. ಹೀಗೆ ಕಳೆದ ಬಾರಿ ಎಂಎಸ್ ಧೋನಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲಿದ್ದೇನೆ ಎಂದು ವಿಶ್ವಾಸದಿಂದ ನೀಡಿದ್ದ ಉತ್ತರವನ್ನು ಈ ಬಾರಿ ನೀಡದೇ ಇರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Story first published: Saturday, October 16, 2021, 11:25 [IST]
Other articles published on Oct 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X