ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನೂ ಗೆಲ್ಲಿಸಲಾಗದೇ ಸೋತ ಮೂವರು ನಾಯಕರಿವರು!

IPL 2022: 3 Captains who never won a match in IPL history

ವಿಶ್ವದ ಶ್ರೀಮಂತ ಹಾಗೂ ಜನಪ್ರಿಯ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದು ಖ್ಯಾತಿಯನ್ನು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮರಳಿ ಬಂದಿದ್ದು, ಹದಿನೈದನೇ ಆವೃತ್ತಿ ಮಾರ್ಚ್ 26ರಿಂದ ಆರಂಭಗೊಂಡಿದೆ. ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‌ಗಳ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಲವು ತಂಡಗಳು ನೂತನ ನಾಯಕರ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿದ ಕೋಲ್ಕತ್ತಾ ನೈಟ್ ರೈಡರ್ಸ್ ಶುಭಾರಂಭ ಮಾಡಿದ್ದರೆ, ಇದೇ ಪಂದ್ಯದಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಸೋತಿದೆ. ಈ ಮೂಲಕ ರವೀಂದ್ರ ಜಡೇಜಾ ನಾಯಕನಾಗಿ ಮುನ್ನಡೆಸಿದ ಮೊದಲ ಪಂದ್ಯದಲ್ಲಿಯೇ ಮುಗ್ಗರಿಸಿದ್ದಾರೆ.

RCB vs PBKS: ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ಹೊರಗಿಡಿ, ನಾಯಕತ್ವಕ್ಕೆ ಈತ ಬೆಸ್ಟ್RCB vs PBKS: ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ಹೊರಗಿಡಿ, ನಾಯಕತ್ವಕ್ಕೆ ಈತ ಬೆಸ್ಟ್

ಇದೇ ಸಮಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಇತಿಹಾಸದಲ್ಲಿ ನಾಯಕರಾಗಿ ತಂಡಗಳನ್ನು ಮುನ್ನಡೆಸಿ ಒಂದೇ ಒಂದು ಪಂದ್ಯದಲ್ಲಿಯೂ ಸಹ ಜಯ ಗಳಿಸುವಲ್ಲಿ ಸಫಲರಾಗದೇ ಸೋತಿರುವ ನಾಯಕರ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಕೆಳಕಂಡ ಮೂವರು ಆಟಗಾರರು ಐಪಿಎಲ್ ಇತಿಹಾಸದಲ್ಲಿ ನಾಯಕರಾಗಿ ತಂಡಗಳನ್ನು ಮುನ್ನಡೆಸಿ ಗೆಲುವು ಸಾಧಿಸಲಾಗದೇ ವಿಫಲರಾಗಿದ್ದಾರೆ.

ಪಾರ್ಥಿವ್ ಪಟೇಲ್

ಪಾರ್ಥಿವ್ ಪಟೇಲ್

ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಈ ಹಿಂದೆ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಪಂದ್ಯವೊಂದರಲ್ಲಿ ನಾಯಕನಾಗಿ ಮುನ್ನಡೆಸಿದ್ದರು. ತಂಡದ ಪೂರ್ಣಾವಧಿ ನಾಯಕ ಮಹೇಲಾ ಜಯವರ್ಧನೆ ಪಂದ್ಯಕ್ಕೆ ಅಲಭ್ಯರಾಗಿದ್ದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಟೇಲ್ ತಂಡವನ್ನು ನಾಯಕನಾಗಿ ಮುನ್ಸಡೆಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 153 ರನ್ ಗಳಸಿತ್ತು. ಆದರೆ ಈ 154 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ವಿಫಲವಾದ ಪಾರ್ಥಿವ್ ಪಟೇಲ್ ನಾಯಕತ್ವದ ಕೊಚ್ಚಿ ಟಸ್ಕರ್ಸ್ ಕೇರಳ ಬ್ರಾಡ್ ಹಾಡ್ಜ್ ಅರ್ಧಶತಕವಿದ್ದರೂ 11 ರನ್‌ಗಳ ಸೋಲನ್ನು ಅನುಭವಿಸಿತ್ತು. ಈ ಮೂಲಕ ಪಾರ್ಥಿವ್ ಪಟೇಲ್ ಐಪಿಎಲ್ ಇತಿಹಾಸದಲ್ಲಿ ಗೆಲುವನ್ನೇ ಕಾಣದ ನಾಯಕನಾಗಿದ್ದಾರೆ.

ಜೇಮ್ಸ್ ಹೋಪ್ಸ್

ಜೇಮ್ಸ್ ಹೋಪ್ಸ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜೇಮ್ಸ್ ಹೋಪ್ಸ್ ನಾಯಕನಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮೂರು ಪಂದ್ಯಗಳಲ್ಲಿ ಮುನ್ಸಡೆಸಿದ್ದರು. ಮೊದಲಿಗೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲುಂಡಿತ್ತು. ಹಾಗೂ ನಂತರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಜೇಮ್ಸ್ ಹೋಪ್ಸ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ 29 ರನ್‌ಗಳ ಸೋಲನ್ನು ಅನುಭವಿಸಿತ್ತು. ಇನ್ನು ನಂತರ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿಯೂ ತಂಡವನ್ನು ಮುನ್ನಡೆಸಿದ್ದ ಜೇಮ್ಸ್ ಹೋಪ್ಸ್ ಮಳೆಯ ಕಾರಣದಿಂದಾಗಿ ಈ ಪಂದ್ಯದಲ್ಲಿ ಯಾವುದೇ ಫಲಿತಾಂಶವಿಲ್ಲದೇ ನಾಯಕನಾಗಿ ಒಂದೇ ಒಂದು ಗೆಲುವನ್ನೂ ಕಾಣದೇ ಉಳಿದಿದ್ದಾರೆ.

Siraj ಅವರ ಈ ಓವರ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು | Oneindia Kannada
ಡ್ವೇಯ್ನ್ ಬ್ರಾವೋ

ಡ್ವೇಯ್ನ್ ಬ್ರಾವೋ

2010ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದ ಡ್ವೇಯ್ನ್ ಬ್ರಾವೋ ಆ ಆವೃತ್ತಿಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್ ಅಲಭ್ಯರಾಗಿದ್ದ ಕಾರಣ ಡ್ವೇಯ್ನ್ ಬ್ರಾವೋ ತಂಡವನ್ನು ಮುನ್ನಡೆಸಿದ್ದರು. ಈ ಮೂಲಕ ಬ್ರಾವೋ ಐಪಿಎಲ್ ತಂಡವನ್ನು ಮುನ್ನಡೆಸಿದ ಮೊದಲ ಕೆರಿಬಿಯನ್ ಆಟಗಾರ ಎಂಬ ದಾಖಲೆಯನ್ನೂ ಸಹ ಬರೆದರು. ಆದರೆ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಬ್ರಾವೋ ಐಪಿಎಲ್‌ನಲ್ಲಿ ನಾಯಕನಾಗಿ ಮುನ್ನಡೆಸಿರುವ ಪಂದ್ಯದಲ್ಲಿ ಗೆಲ್ಲಿಸಲಾಗದೇ ಸೋತಿದ್ದಾರೆ.

Story first published: Monday, March 28, 2022, 9:53 [IST]
Other articles published on Mar 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X