ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅಂಪೈರ್ ಜೊತೆಗೆ ಕಿರಿಕ್ ಮಾಡಿಕೊಂಡ ಪಾಂಟಿಂಗ್‌

Ricky ponting

ಭಾನುವಾರ (ಏ. 11) ನಡೆದ ಐಪಿಎಲ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಅಂಪೈರ್ ಗಳ ಜೊತೆ ವಾಗ್ವಾದ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ನಿನ್ನೆ ನಡೆದ 19ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ತಂಡಗಳು ಮುಖಾಮುಖಿಯಾಗಿದ್ದವು. ಕೋಲ್ಕತ್ತಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಇದರ ಬೆನ್ನಲ್ಲೇ ಡೆಲ್ಲಿ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು

ಅಂಪೈರ್ ಮೇಲೆ ಮುಗಿಬಿದ್ದ ರಿಕಿ ಪಾಂಟಿಂಗ್

ಅಂಪೈರ್ ಮೇಲೆ ಮುಗಿಬಿದ್ದ ರಿಕಿ ಪಾಂಟಿಂಗ್

ಇದಕ್ಕಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅಂಪೈರ್ ಮೇಲೆ ಮುಗಿಬಿದ್ದ ಘಟನೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಿತು. ತೀರಾ ಮೌನಿಯಾಗಿದ್ದ ಕೋಚ್ ರಿಕಿ ಪಾಂಟಿಂಗ್ ಇದ್ದಕ್ಕಿದ್ದಂತೆ ಕೋಪಗೊಂಡರು. ಪಂದ್ಯದ 19ನೇ ಓವರ್ ಬೌಲ್ ಮಾಡಿದ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಕೊನೆಯ ರನ್ ಗಾಗಿ ಬ್ಯಾಟ್ ಬೀಸಿದರು. ಯಾರ್ಕರ್ ನಂತರ ಚೆಂಡನ್ನು ಬಿಳಿ ರೇಖೆಯ ಮೇಲೆ ಆಫ್-ಸೈಡ್ ದಿಕ್ಕಿನಲ್ಲಿ ಹಾಕಿದರು. ಇದು ಕ್ರೀಸ್‌ನ ಆಚೆಗೂ ಹೋಗಿದೆ ಎಂದು ತೋರಿಸಿತು.

IPL 2022: ಧೋನಿ, ಜಡೇಜಾ ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಸೋಲುತ್ತಿರುವುದು ಈತನಿಂದ!

ಡಾಟ್ ಬಾಲ್ ನೀಡಿದ ಅಂಪೈರ್

ಚೆಂಡು ಕ್ರೀಸ್‌ ಆಚೆಗೆ ತೆರಳುತ್ತಿದೆಯಾದ್ರೂ, ಡಾಟ್‌ ಬಾಲ್ ಎಂದು ಹೇಳುವ ಮೂಲಕ ನೋಡುಗರ ಅಚ್ಚರಿಗೆ ಕಾರಣವಾಯ್ತು. ಇದನ್ನು ನೋಡಿದ ರಿಕಿ ಪಾಂಟಿಂಗ್ ಅವರು ಡಕ್ ಔಟ್ ಬಳಿ ನಿಂತಿದ್ದ 4ನೇ ಅಂಪೈರ್ ಮೇಲೆ ಸಿಟ್ಟಿನಿಂದ ಕೂಗಿದರು. ನೀವು ಅದನ್ನು ನೋಡುವುದಿಲ್ಲವೇ? ಎಂದು ಅರಿಚಿದ್ರು. ಈ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಂತ ರೀತಿಯಲ್ಲಿ ಕಾಣಿಸಿಕೊಳ್ಳುವ ಪಾಂಟಿಂಗ್ ಈ ರೀತಿ ವರ್ತಿಸಿದ್ದು, ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತು.

ಈ 6 ಐಪಿಎಲ್ ಆಟಗಾರರ ಹೇರ್‌ಸ್ಟೈಲ್ ಸಖತ್ ಟ್ರೆಂಡ್: ಇದೇ ರೀತಿಯಲ್ಲಿ ಹೇರ್‌ಸ್ಟೈಲ್‌ ಮಾಡಿಸಿಕೊಳ್ಳಲು ಮುಗಿಬಿದ್ದ ಫ್ಯಾನ್ಸ್‌

Umran Malik ಈ ಸರಣಿಯ ಅತ್ಯಂತ ವೇಗದ ಬೌಲರ್ | Oneindia Kannda
ಭರ್ಜರಿ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್

ಭರ್ಜರಿ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್

ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಹಿನ್ನಡೆಯಾಗಿದ್ದರೂ ಭರ್ಜರಿ ಜಯ ದಾಖಲಿಸಿದೆ. ಆರಂಭಿಕ ಜೋಡಿ ಪೃಥ್ವಿ ಶಾ 51 ಮತ್ತು ಡೇವಿಡ್ ವಾರ್ನರ್ 61 ರನ್ ಗಳಿಸಿದರು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ 11 ಎಸೆತಗಳಲ್ಲಿ 29 ರನ್ ಸೇರಿಸಿದರು. ಅದರಲ್ಲೂ ಆ ವಿವಾದಾತ್ಮಕ 19ನೇ ಓವರ್‌ನಲ್ಲಿಯೇ ಅವರು 2 ಸಿಕ್ಸರ್‌ಗಳನ್ನು ಬಾರಿಸಿದರು. ಹೀಗಾಗಿ ತಂಡ 20 ಓವರ್‌ಗಳಲ್ಲಿ 215-5 ರನ್‌ ಸೇರಿಸಿತು.

ಈ ಗುರಿ ಬೆನ್ನತ್ತಿದ ಕೆಕೆಆರ್ 19.4 ಓವರ್‌ಗಳಲ್ಲಿ 171ರನ್‌ಗಳಿಗೆ ಆಲೌಟ್ ಆಯಿತು. ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 54ರನ್‌ಗಳಿಸಿದ್ದೇ ಗರಿಷ್ಠವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ 44ರನ್‌ಗಳಿಂದ ಗೆಲುವು ಸಾಧಿಸಿದೆ.

Story first published: Tuesday, April 12, 2022, 9:49 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X