ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 6 ಐಪಿಎಲ್ ಆಟಗಾರರ ಹೇರ್‌ಸ್ಟೈಲ್ ಸಖತ್ ಟ್ರೆಂಡ್: ಇದೇ ರೀತಿಯಲ್ಲಿ ಹೇರ್‌ಸ್ಟೈಲ್‌ ಮಾಡಿಸಿಕೊಳ್ಳಲು ಮುಗಿಬಿದ್ದ ಫ್ಯಾನ್ಸ್‌

IPL 2022: These 6 playears hairstyle Became treand on Social media

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ರೋಚಕ ಮತ್ತು ಅತಿ ದೊಡ್ಡ ಟಿ20 ಕ್ರಿಕೆಟ್ ಟೂರ್ನಿಯಾಗಿದ್ದು, ಪ್ರತಿ ವರ್ಷವು ಆಟಗಾರರು ಈ ಲೀಗ್್ನಲ್ಲಿ ತಮ್ಮದೇ ಆದ ವಿಶಿಷ್ಟ ಹೇರ್‌ಸ್ಟೈಲ್್ನಲ್ಲಿ ಗುರುತಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಈ ಹೇರ್‌ಸ್ಟೈಲ್‌ ಶೈಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಸಹ ಇದೇ ರೀತಿಯ ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ.

ಕಾಲಕ್ಕೆ ತಕ್ಕಂತೆ, ಟೂರ್ನಿಗಳು ಇದ್ದಂತೆ ಆಟಗಾರರು ವಿಶಿಷ್ಟ, ವಿಭಿನ್ನ ಹೇರ್‌ಸ್ಟೈಲ್‌ಗಳಿಗೆ ಮೊರೆ ಹೋಗುವುದು ಸಾಮಾನ್ಯ. ಅದ್ರಲ್ಲೂ ಐಪಿಎಲ್ ಅಂದ್ಮೆಲೆ ಇಡೀ ಕ್ರಿಕೆಟ್ ಲೋಕದ ಆಕರ್ಷಣೆ ಇರುತ್ತದೆ. ಹೀಗಾಗಿಯೇ ಆಟಗಾರರು ತಮ್ಮನ್ನ ಗುರುತಿಸಿಕೊಳ್ಳಲು ಪ್ರದರ್ಶನ ಅಷ್ಟೇ ಅಲ್ಲದೆ ಕೇಶವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ. ಆ ರೀತಿಯಲ್ಲಿ ಐಪಿಎಲ್ 2022ರ ಸೀಸನ್‌ನಲ್ಲಿ ತಮ್ಮ ಹೇರ್‌ಸ್ಟೈಲ್ ಮೂಲಕ ಸದ್ದು ಮಾಡುತ್ತಿರುವ ಆಟಗಾರರ ಕುರಿತು ಮಾಹಿತಿ ಈ ಕೆಳಗಿದೆ.

ಶಿಮ್ರಾನ್ ಹೆಟ್ಮೆಯರ್

ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿರುವ ವೆಸ್ಟ್ಇಂಡೀಸ್ ತಂಡದ ಡೆಟ್ಮೆಯರ್ ಅವರು ಆಟಕ್ಕಿಂತ ಹೆಚ್ಚಾಗಿ ಅವರ ಕೇಶವಿನ್ಯಾಸದ ಶೈಲಿಯಿಂದ ಚಿರಪರಿಚಿತರು. ತಂಡದ ಜೆರ್ಸಿ ಬಣ್ಣವನ್ನೇ ತಮ್ಮ ಹೇರ್ ಕಲರ್ ಆಗಿಸಿ ಎಲ್ಲರ ಗಮನ ಸೆಳೆದಿದ್ದ ಅವರು, ಈ ಹಿಂದಿನ ಆವೃತ್ತಿಯಲ್ಲಿ ದೆಹಲಿ ತಂಡದಲ್ಲಿದ್ದಾಗ ಕೂದಲಿಗೆ ನೀಲಿ ಬಣ್ಣವನ್ನು ಹಚ್ಚುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದರು. ಪ್ರಸ್ತುತದ ಆವೃತ್ತಿಯಲ್ಲಿ 4 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿ 168 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 5 ಸ್ಥಾನದಲ್ಲಿದ್ದಾರೆ.

ನಿತೀಶ್ ರಾಣಾ:

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಹೇರ್‌ ಸ್ಟೈಲ್ ಬದಲಾಯಿಸಿಕೊಂಡಿದ್ದು, ಕೂದಲಿಗೆ ನೇರಳೆ ಮತ್ತು ಚಿನ್ನದ ಬಣ್ಣವನ್ನು ಹಚ್ಚಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ರಾಣಾ ಅವರನ್ನು ಕೆಕೆಆರ್ ಉಳಿಸಿಕೊಳ್ಳಲಿಲ್ಲ. ಆದಾಗ್ಯೂ, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಜೊತೆಗೆ ಬಿಡ್ಡಿಂಗ್ ಯುದ್ಧದ ನಂತರ ಅವರನ್ನು 8 ಕೋಟಿಗೆ ಕೋಲ್ಕತ್ತಾ ತಂಡ ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಎಡಗೈ ಬ್ಯಾಟರ್ ಹಿಂದಿನ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಹೊಂದಿದ್ದು, 16 ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧ ಶತಕಗಳೊಂದಿಗೆ 383 ರನ್‌ ಕಲೆಹಾಕಿದ್ದರು. ಆದರೆ ಪ್ರಸ್ತುತ ಆವೃತ್ತಿಯಲ್ಲಿ 5 ಪಂದ್ಯಗಳಲ್ಲಿ ಕೇವಲ 69 ರನ್ ಕಲೆಹಾಕಿದ್ದಾರೆ.

CSK vs RCB: ಇತ್ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಸೋತು ಹಿಂದುಳಿದಿರುವ ತಂಡ ಯಾವುದು?

ಆ್ಯಂಡ್ರೆ ರಸೆಲ್:

ಕೊಲ್ಕತ್ತಾ ತಂಡದ ಆಲ್‌ರೌಂಡರ್ ರಸೆಲ್ ತನ್ನ ಸಹ ಆಟಗಾರ ನಿತೀಶ್ ರಾಣಾ ಅವರನ್ನು ಅನುಸರಿಸಿದ್ದಾರೆ. ಫಂಕಿ ಹೇರ್ ಸ್ಟೈಲ್ ಮೂಲಕ ಗುರುತಿಸಿಕೊಂಡಿರುವ ರಸೆಲ್ ಅವರನ್ನ 12 ಕೋಟಿಗೆ ಕೆಕೆಆರ್ ತಂಡ ಉಳಿಸಿಕೊಂಡ ನಂತರ ಫ್ರಾಂಚೈಸಿಗೆ ಗೌರವಾರ್ಥವಾಗಿ ಕೂದಲಿಗೆ ಗೋಲ್ಡ್ ಮತ್ತು ಪರ್ಪಲ್ ಅಂದ್ರೆ ಕೆಕೆಆರ್ ಜೆರ್ಸಿ ಬಣ್ಣವನ್ನು ಹಚ್ಚಿದ್ದಾರೆ. ಈವರೆಗೂ 5 ಪಂದ್ಯಗಳನ್ನಾಡಿರುವ ರಸೆಲ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 130 ರನ್ ಗಳಿಸಿದ್ದು, 3 ವಿಕೆಟ್‌ ಗಳಿಸಿ ಕೂಡ ಪಡೆದಿದ್ದಾರೆ.

IPL 2022: ಈ ಐವರು ಕಣಕ್ಕಿಳಿದಿದ್ದರೆ ಮುಂಬೈ ಇಂಡಿಯನ್ಸ್‌‌ಗೆ ಸತತ ಸೋಲಿನ ಮುಖಭಂಗವಾಗುತ್ತಿರಲಿಲ್ಲ!

ಡ್ವೇನ್ ಬ್ರಾವೋ:

ಸಿಎಸ್‌ಕೆ ತಂಡದ ಆಲ್ ರೌಂಡರ್ ಡ್ವೇನ್ ಬ್ರಾವೋ ತಂಡದ ಜರ್ಸಿ ಬಣ್ಣ ಹೊಲುವ ಬಣ್ಣವನ್ನು ಕೂದಲಿಗೆ ಹಚ್ಚಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಬ್ಯಾಟ್‌ನೊಂದಿಗೆ ಚೆನ್ನೈನ ಇನ್ನಿಂಗ್ಸ್‌ಗೆ ಅಂತಿಮ ಸ್ಪರ್ಶವನ್ನು ನೀಡಲು ಬ್ರಾವೋಗೆ ಅವಕಾಶ ಸಿಗಲಿಲ್ಲ. ಆದರೆ, ಅವರು ಚೆಂಡಿನ ಮೂಲಕ ಅಪಾಯಕಾರಿ ವೆಂಕಟೇಶ್ ಅಯ್ಯರ್ ಅವರನ್ನು ಹೊರಹಾಕಿದರು. 4 ಪಂದ್ಯಗಳನ್ನಾಡಿರುವ ಬ್ರಾವೋ ಕೇವಲ ಗಳಿಸಿದ್ದು 9 ರನ್ ಮಾತ್ರ. ಬೌಲಿಂಗ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು 6 ವಿಕೆಟ್‌ಗಳನ್ನು ಪಡೆದುಕೊಂಡು 12 ಸ್ಥಾನದಲ್ಲಿದ್ದಾರೆ.

ಫ್ಯಾಬಿಯನ್ ಅಲೆನ್ :

ಆಲ್ ರೌಂಡರ್ ಆಗಿರುವ ಅಲೆನ್, 75 ಲಕ್ಷದ ಮೂಲ ಬೆಲೆಯಲ್ಲಿ ಐಪಿಎಲ್ 15ನೇ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್‌ ಅನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಎಡಗೈ ಸ್ಪಿನ್ ಬೌಲಿಂಗ್ ಮತ್ತು ಬಲಗೈ ಬ್ಯಾಟರ್ ಆಗಿದ್ದಾರೆ. ವೈಟ್ ಬಾಲ್‌ ಕ್ರಿಕೆಟ್ ವಿಚಾರಕ್ಕೆ ಬಂದ್ರೆ ಸಾಕಷ್ಟು ಅನುಭವಿಯಾಗಿದ್ದು, ವೆಸ್ಟ್ ಇಂಡೀಸ್‌ಗಾಗಿ 20 ಏಕದಿನ ಮತ್ತು 34 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಈವರೆಗೂ ಯಾವುದೇ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಮುಂಬೈ ತಂಡ ಅವಕಾಶ ನೀಡಿಲ್ಲ.

ಸುನಿಲ್ ನರೈನ್ :

ಕೊಲ್ಕತ್ತಾ ತಂಡದ ಸ್ಪಿನ್ನರ್‌ ಸುನಿಲ್‌ ನರೇನ್ ಸ್ಪೈಕ್ ಹೇರ್ ಸ್ಟೈಲ್ ನ್ನು ಜನಪ್ರಿಯತೆ ಗೊಳಿಸಿದರು. ನರೈನ್ ಬಳಿಕ ಅನೇಕ ಕ್ರಿಕೆಟಿಗರು ಸ್ಪೈಕ್ ಹೇರ್ ಸ್ಟೈಲ್ ನ್ನು ಅನುಕರಣೆ ಮಾಡಿದರು. ಉತ್ತಮ ಬೌಲರ್ ಆಗಿದ್ದ ನರೈನ್ ಅವರು ಕೆಕೆಆರ್‌ ನಿಂದ ಓಪನರ್ ಆಗಿ ಬಡ್ತಿ ಪಡೆದು ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿ ಅನೇಕ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿದ್ದರು. ಐಪಿಎಲ್‌ 15ನೇ ಲೀಗ್‌ನಲ್ಲಿ 5 ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ಎಡಗೈ ಬ್ಯಾಟರ್ ಕೇವಲ 16 ರನ್ ಗಳಿಸಿದ್ದು 4 ವಿಕೆಟ್ ಗೆ ತೃಪ್ತಿಪಟ್ಟಿದ್ದಾರೆ.

ಶಿಖರ್ ಧವನ್ :

ಪಂದ್ಯಾವಳಿಯ ಆರಂಭಕ್ಕೂ ಮುನ್ನ ಲವಿಂಗ್ ಮೈ ನ್ಯೂ ಹೇರ್ ಸ್ಟೈಲ್ ಎಂಬ ಅಡಿಬರಹದ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಗಬ್ಬರ್ ಖ್ಯಾತಿಯ ಧವನ್ ಹರಿಬಿಟ್ಟಿದ್ದರು. ಐಪಿಎಲ್ 2022ರ ಹರಾಜಿನ ಸಮಯದಲ್ಲಿ 8.25 ಕೋಟಿಗೆ ಪಂಜಾಬ್ ಫ್ರಾಂಚೈಸಿ ಖರೀದಿಸಿತು. ಈ ವರೆಗೂ ಸ್ಥಿರವಾಗಿ ಪ್ರದರ್ಶನ ನೀಡಿರುವ ಧವನ್ ಐಪಿಎಲ್‌ನಲ್ಲಿ 2 ಶತಕ 44 ಅರ್ಧ ಶತಕಗಳ ಸಹಾಯದಿಂದ 5784 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಧವನ್ ಅವರು ಕಳೆದ 4 ಪಂದ್ಯಗಳಲ್ಲಿ 127 ರನ್ ಗಳಿಸಿದ್ದು ಅರೆಂಜ್ ಕ್ಯಾಪ್‌ ರೇಸ್‌ನಲ್ಲಿ 12 ಸ್ಥಾನದಲ್ಲಿದ್ದಾರೆ.

Story first published: Monday, April 11, 2022, 19:15 [IST]
Other articles published on Apr 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X