ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಡೆಲ್ಲಿ ತಂಡದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ಗೆ ಕೋವಿಡ್, ಆಸ್ಪತ್ರೆಗೆ ದಾಖಲು

mitchell marsh

ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರಿಗೆ ಸೋಮವಾರ ಬೆಳಗ್ಗೆ ನಡೆಸಿದ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ತಗುಲಿರುವುದು ಧೃಡಪಟ್ಟಿರುವ ಬಳಿಕ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರ್ಷ್‌, ತಲೆನೋವು ಮತ್ತು ಸ್ವಲ್ಪ ಜ್ವರದ ಬಗ್ಗೆ ದೂರು ನೀಡಿದರು, ಹೀಗಾಗಿ RTPCR ನಡೆಸಲಾಗಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಸದಸ್ಯರ RT-PCR ಪರೀಕ್ಷೆಯನ್ನು ಮಾಡಿಸುವಂತೆ ಹೇಳಲಾಗಿತ್ತು. ಅದರಲ್ಲಿ ಮಾರ್ಷ್‌ಗೆ ಮಾತ್ರ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಅವರ ಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಫ್ರಾಂಚೈಸಿ ಹೇಳಿದೆ.

"ಡೆಲ್ಲಿ ಕ್ಯಾಪಿಟಲ್ಸ್ ಬಯೋ-ಬಬಲ್‌ನ ಇನ್ನೂ ಕೆಲವು ಸದಸ್ಯರು, ಸಹಾಯಕ ಸಿಬ್ಬಂದಿ ಸದಸ್ಯರುಗಳ ಪರೀಕ್ಷೆಗಳನ್ನು ಸಹ ಮಾಡಿಸಲಾಗಿದ್ದು, ಅವರಲ್ಲಿ ಕೆಲವರಿಗೆ ಸೋಂಕು ದೃಡ ಪಟ್ಟಿದೆ. ಆದ್ರೆ ಯಾವುದೇ ರೋಗದ ಲಕ್ಷಣಗಳಿಲ್ಲದ ಕಾರಣ ಪ್ರತ್ಯೇಕವಾಗಿ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ "ಎಂದು ಫ್ರಾಂಚೈಸಿ ತಿಳಿಸಿದೆ.

ಬುಧವಾರದಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ. ಹೊಸ ಸುತ್ತಿನ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಪ್ರತಿಯೋರ್ವ ಸದಸ್ಯರು ಮಾಡಿಸಿಕೊಳ್ಳುವವರೆಗೆ ಪುಣೆಗೆ ಪ್ರಯಾಣ ಮಾಡದಂತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.

ತಂಡಗಳಲ್ಲಿ ವೈರಸ್ ಹರಡುವುದನ್ನು ತಡೆಯುವುದು ಭಾರತೀಯ ಕ್ರಿಕೆಟ್ ಮಂಡಳಿಗೆ ದೊಡ್ಡ ತೆಲೆನೋವಾಗಿ ಪರಿಣಮಿಸಿದೆ. ಸೋಂಕು ಹರಡುವುದನ್ನು ತಡೆಯಲು ಹೊಸ ಯೋಜನೆಗಳನ್ನು ರೂಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಶನಿವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಸೋಂಕು ಹರಡುವುದನ್ನು ತಡೆಯಲು ಎರಡೂ ತಂಡಗಳ ಆಟಗಾರರ ನಡುವೆ ಯಾವುದೇ ಹ್ಯಾಂಡ್‌ಶೇಕ್ ಅಥವಾ ಅಪ್ಪುಗೆಯಿರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಸೂಚನೆ ನೀಡಿದೆ.

ಭಾರತೀಯರೇ ಎಚ್ಚರ!!!ಚೀನಾದಲ್ಲಿ ಕೊರೊನಾ ಸಾವು-ನೋವು ಮತ್ತೆ ಸ್ಟಾರ್ಟ್ | Oneindia Kannada

ವಿವಿಧ ತಂಡಗಳ ಆಟಗಾರರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮತ್ತು ಮಾಸ್ಕ್‌ಗಳ ಬಳಕೆಯನ್ನು ಸಹ ಶಿಫಾರಸ್ಸು ಮಾಡಲಾಗಿದೆ. ಸ್ಟ್ಯಾಂಡ್‌ನಿಂದ ಪಂದ್ಯವನ್ನು ವೀಕ್ಷಿಸುತ್ತಿರುವ ತಂಡದ ಸದಸ್ಯರು ಊಟ ಅಥವಾ ಪಾನೀಯ ಕುಡಿಯುವಾಗ ಹೊರತುಪಡಿಸಿ, ಉಳಿದ ಸಮಯದಲ್ಲಿ ಫೇಸ್ ಮಾಸ್ಕ್ ಧರಿಸಲು ತಿಳಿಸಿದೆ

Story first published: Tuesday, April 19, 2022, 12:21 [IST]
Other articles published on Apr 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X