ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಪೃಥ್ವಿ ಶಾ ಟೂರ್ನಿಯಿಂದ ಔಟ್?: ಸುಳಿವು ನೀಡಿದ ಶೇನ್ ವಾಟ್ಸನ್

IPL 2022: DC young cricketer Prithvi Shaw ruled out of tournament, hints assistant coach Shane Watson

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಲೀಗ್ ಹಂತದ ಅಂತಿಮ ಎರಡು ಪಂದ್ಯಗಳಿಗೆ ಪೃಥ್ವಿ ಶಾ ಲಭ್ಯವಾಗುವ ಸಾಧ್ಯತೆಯಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಗುರುವಾರ ಹೇಳಿದ್ದಾರೆ.

ಪೃಥ್ವಿ ಶಾ ಕಳೆದ ಮೂರು ಪಂದ್ಯಗಳಲ್ಲಿ ಅನಾರೋಗ್ಯದ ಕಾರಣದಿಂದಾಗಿ ಆಡಿರಲಿಲ್ಲ. ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿದ ಬಳಿಕ ಫೃಥ್ವಿ ಶಾ ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಹೇಳಿದ್ದಾರೆ. ಪೃಥ್ವಿ ಶಾ ಕೊನೆಯದಾಗಿ ಮೇ 1ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶೇನ್ ವಾಟ್ಸನ್ "ಹಿಂದಿನ ಎರಡು ವಾರಗಳಿಂದ ಪೃಥ್ವಿ ಶಾ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ನಿಖರವಾಗಿ ಏನೆಂದು ನಾವು ಇನ್ನಷ್ಟೇ ಮಾಹಿತಿಯನ್ನು ಪಡೆದುಕೊಳ್ಳಬೇಕಿದೆ" ಎಂದಿದ್ದಾರೆ ಶೇನ್ ವಾಟ್ಸನ್.

"ಕಳೆದ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿರುವುದಕ್ಕೆ ಪೃಥ್ವಿ ಶಾ ಬೇಸರಗೊಂಡಿದ್ದಾರೆ. ಆತನೋರ್ವ ಕೌಶಲ್ಯಯುತ ಆಟಗಾರನಾಗಿರುವ ಕಾರಣ ನಮಗೂ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿಶ್ವ ಶ್ರೇಷ್ಠ ಬ್ಯಾಟರ್‌ಗಳ ವಿರುದ್ಧವೂ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದಿದ್ದಾರೆ ಶೇನ್ ವಾಟ್ಸನ್.

"ಪೃಥ್ವಿ ಶಾ ಅವರು ತಂಡದಲ್ಲಿ ಇಲ್ಲದಿರುವುದು ನಮಗೆ ದೊಡ್ಡ ನಷ್ಟವಾಗಿದೆ. ಕಳೆದ ಎರಡು ವಾರಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ. ಆದರೆ ದುರದೃಷ್ಟವಶಾತ್ ಅವರು ಅಂತಿಮ ಎರಡು ಪಂದ್ಯಗಳಿಗೆ ಲಭ್ತವಾಗುವ ಸಾಧ್ಯತೆಯಿಲ್ಲ. ತಮ್ಮ ಆಸ್ಪತ್ರೆಯ ಹಾಸಿಗೆಯಿಂದ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹಿಂತಿರುಗುವ ಭರವಸೆಯನ್ನು ಹೊಂದಿದ್ದಾರೆ" ಎಂದು ಶೇನ್ ವಾಟ್ಸನ್ ಪೃಥ್ವಿ ಶಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಆಡಿರುವ 12 ಪಂದ್ಯಗಳಲ್ಲಿ ಆರು ಗೆಲುವು ಹಾಗೂ ಆರು ಸೋಲು ಅನುಭವಿಸಿದೆ. ಹೀಗಾಗಿ ಪ್ಲೇಆಫ್ ಹಂತಕ್ಕೇರಲು ಹಾದಿ ಕಠಿಣವಾಗಿದೆ. ಉಳಿದ ಎರಡು ಪಂದ್ಯಗಳಲ್ಲಿಯೂ ಉತ್ತಮ ಅಂತರದಿಂದ ಗೆಲುವು ಸಾಧಿಸಿದರೆ ಪ್ಲೇಆಫ್ ಹಂತಕ್ಏರುವ ಅವಕಾಶ ಡೆಲ್ಲಿ ತಂಡಕ್ಕೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ತಂಡ: ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್, ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಅಶ್ವಿನ್ ಹೆಬ್ಬಾರ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶ್ರೀಕರ್, ಭರತ್ ಸರ್ಫರಾಜ್ ಖಾನ್, ಲುಂಗಿ ಎನ್‌ಗಿಡಿ, ಪ್ರವೀಣ್ ದುಬೆ, ಅನ್ರಿಚ್ ನಾರ್ಕಿಯಾ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್

Story first published: Friday, May 13, 2022, 16:00 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X