
ಟೀಮ್ ಪಿಂಕ್ vs ಟೀಮ್ ಬ್ಲ್ಯೂ ಪಂದ್ಯದಲ್ಲಿ ಸೋತ ಟೀಮ್ ಬ್ಲ್ಯೂ
ರಾಜಸ್ಥಾನ್ ರಾಯಲ್ಸ್ ತಂಡವನ್ನು ಎರಡು ತಂಡಗಳಾಗಿ ವಿಂಗಡಿಸಿ ಒಂದು ತಂಡಕ್ಕೆ ಟೀಮ್ ಪಿಂಕ್ ಹಾಗೂ ಮತ್ತೊಂದು ತಂಡಕ್ಕೆ ಟೀಮ್ ಬ್ಲ್ಯೂ ಎಂದು ಹೆಸರನ್ನು ಇಟ್ಟು ಅಭ್ಯಾಸವನ್ನು ನಡೆಸಲಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಬ್ಲ್ಯೂ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಟೀಮ್ ಬ್ಲ್ಯೂ ತಂಡಕ್ಕೆ ಗೆಲ್ಲಲು 185 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಬ್ಲ್ಯೂ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ದು, ಟೀಮ್ ಪಿಂಕ್ 15 ರನ್‌ಗಳ ಗೆಲುವನ್ನು ಸಾಧಿಸಿದೆ.

ಟೀಮ್ ಪಿಂಕ್ ಪರ ಅಬ್ಬರಿಸಿದ ಪಡಿಕ್ಕಲ್, ಪರಾಗ್
ಇನ್ನು ಕಳೆದೆರಡು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಪಿಂಕ್ ಪರ ಆಡಿ 51 ಎಸೆತಗಳಲ್ಲಿ 67 ರನ್ ಬಾರಿಸಿ ಟೀಮ್ ಪಿಂಕ್ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಟೀಮ್ ಪಿಂಕ್ ಪರ ರಿಯಾನ್ ಪರಾಗ್ 27 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದ್ದಾರೆ. ಹಾಗೂ ಟೀಮ್ ಪಿಂಕ್ ಪರ ಯುಜ್ವೇಂದ್ರ ಚಾಹಲ್ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೀಮ್ ಬ್ಲ್ಯೂ ಪರ ಹೆಟ್ಮೆಯರ್ ಅಬ್ಬರ
ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಬ್ಲ್ಯೂ ಸೋಲನ್ನು ಅನುಭವಿಸಿದ್ದರೂ ಸಹ ಶಿಮ್ರಾನ್ ಹೆಟ್ಮೆಯರ್ 37 ಎಸೆತಗಳಿಗೆ ಅಜೇಯ 70 ರನ್ ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಟೀಮ್ ಬ್ಲ್ಯೂ ಪರ ಕಣಕ್ಕಿಳಿದಿದ್ದ ಕರುಣ್ ನಾಯರ್ 19 ಎಸೆತಗಳಲ್ಲಿ 31 ರನ್ ಬಾರಿಸಿದರು ಹಾಗೂ ತಂಡದ ಪರ ಬೌಲಿಂಗ್ ಮಾಡಿದ ಕುಲ್‌ದೀಪ್ ಸೇನ್ 3 ಓವರ್ ಬೌಲಿಂಗ್ ಮಾಡಿ 15 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದಾರೆ.


Click it and Unblock the Notifications












