ಐಪಿಎಲ್ ಹರಾಜು: ಆಟಗಾರರನ್ನು ಉಳಿಸಿಕೊಳ್ಳುವ ಗೊಂದಲಕ್ಕೆ ತೆರೆ; ಹೊಸ ಫ್ರಾಂಚೈಸಿಗಳಿಗೆ ದೊಡ್ಡ ಅನುಕೂಲ!

ಇತ್ತೀಚಿಗಷ್ಟೆ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದ್ದು, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸುವುದರ ಮೂಲಕ ತನ್ನ ನಾಲ್ಕನೇ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿಯುತ್ತಾ ಇದ್ದಂತೆ ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ವಿಚಾರವಾಗಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದು ಅನೇಕ ಗೊಂದಲಗಳು ಉಂಟಾಗಿದ್ದವು.

ಹೀಗೆ ಗೊಂದಲ ಉಂಟಾಗಲು ಕಾರಣ ಮುಂದಿನ ಆವೃತ್ತಿಗೂ ಮುನ್ನ ನಡೆಸಲಾಗುವ ಐಪಿಎಲ್ ಮೆಗಾ ಹರಾಜು. ಹೌದು, 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ಆರಂಭವಾಗುವ ಮುನ್ನ ಮೆಗಾ ಹರಾಜನ್ನು ನಡೆಸಲು ತೀರ್ಮಾನ ಮಾಡಿ ಈ ಹಿಂದೆಯೇ ಸುದ್ದಿಯನ್ನು ಹೊರಡಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಹರಾಜಿಗೂ ಮುನ್ನ 2 ನೂತನ ಫ್ರಾಂಚೈಸಿಗಳ ಘೋಷಣೆ ಕೂಡ ಆಗಲಿದೆ ಎಂದು ಬಿಸಿಸಿಐ ತಿಳಿಸಿತ್ತು. ಹೀಗೆ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಒಟ್ಟು 10 ಫ್ರಾಂಚೈಸಿಗಳು ಭಾಗವಹಿಸುವುದನ್ನು ಬಿಸಿಸಿಐ ಖಚಿತಪಡಿಸಿತ್ತು.

ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!

ಹೀಗಾಗಿ ಮುಂದಿನ ವರ್ಷದ ಇಂಡಿಯನ್ ಪ್ರಿಮಿಯರ್ ಲೀಗ್ ಹರಾಜಿನಲ್ಲಿ 10 ಫ್ರಾಂಚೈಸಿಗಳು ಭಾಗವಹಿಸಲಿದ್ದು ಪ್ರಸ್ತುತ ಇರುವ 8 ತಂಡಗಳ ಬಹುತೇಕ ಆಟಗಾರರನ್ನು ಹರಾಜು ಮಾಡಲಾಗುವುದು ಎಂಬ ಸುದ್ದಿ ಖಚಿತವಾಗಿತ್ತು. ಹೀಗೆ ಮುಂದಿನ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು ಪ್ರಸ್ತುತ ಇರುವ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು, ಅದರಲ್ಲಿ ಎಷ್ಟು ಸ್ವದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿರುತ್ತದೆ ಮತ್ತು ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿತ್ತು. ಇದೀಗ ಬಿಸಿಸಿಐ ಪಾಳಯದಿಂದ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತಿದ್ದು ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ. ಅಷ್ಟೇ ಅಲ್ಲದೆ ಈ ಬಾರಿಯ ಮೆಗಾ ಹರಾಜಿನಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಿದ್ದು ಇನ್ನೂ ಮುಂತಾದ ಕೆಲ ಬದಲಾವಣೆಗಳು ಆಗಿವೆ. ಹೀಗೆ ಮುಂದಿನ ಹರಾಜಿನಲ್ಲಿ ಇರಲಿರುವ ನಿಯಮಗಳ ಕುರಿತ ಮಾಹಿತಿ ಈ ಕೆಳಕಂಡಂತಿದೆ.

ಮುಂದಿನ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು?

ಮುಂದಿನ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು?

ಇದೀಗ ಬಂದಿರುವ ಸುದ್ದಿಯ ಪ್ರಕಾರ ಮುಂದಿನ ಐಪಿಎಲ್ ಹರಾಜಿಗೂ ಮುನ್ನ ತಂಡವೊಂದು 4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಯನ್ನು ನೀಡಲಾಗುತ್ತದೆ ಎನ್ನಲಾಗುತ್ತಿದೆ. ಹೌದು, ಐಪಿಎಲ್ ತಂಡವೊಂದು ತನ್ನ ಒಟ್ಟು 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅನುಮತಿಯನ್ನು ನೀಡಲಾಗುತ್ತದೆ. ಆದರೆ ಇದಕ್ಕೂ ಕೂಡ ಷರತ್ತುಗಳನ್ನು ವಿಧಿಸಲಾಗುತ್ತದೆ. ಒಂದು ತಂಡ 3 ಸ್ವದೇಶಿ ಆಟಗಾರರು ಮತ್ತು ಓರ್ವ ವಿದೇಶಿ ಆಟಗಾರ ಸೇರಿದಂತೆ ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಬಹುದು. ಅಥವಾ, ಇಬ್ಬರು ಸ್ವದೇಶಿ ಆಟಗಾರರು ಮತ್ತು ಇಬ್ಬರು ವಿದೇಶಿ ಆಟಗಾರರನ್ನೊಳಗೊಂಡಂತೆ ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಬಹುದು. ಹೀಗೆ ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅನುಮತಿಯನ್ನು ನೀಡಲಾಗುತ್ತಿದ್ದು ಯಾವುದೇ ಕಾರಣಕ್ಕೂ ಉಳಿಸಿಕೊಳ್ಳಬಹುದಾದ ವಿದೇಶಿ ಆಟಗಾರರ ಸಂಖ್ಯೆ ಇಬ್ಬರನ್ನು ದಾಟುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗುತ್ತಿದೆ.

ರೈಟ್ ಟು ಮ್ಯಾಚ್ ಅನುಮಾನ ಮತ್ತು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೂ ಇದೆ ಷರತ್ತು!

ರೈಟ್ ಟು ಮ್ಯಾಚ್ ಅನುಮಾನ ಮತ್ತು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೂ ಇದೆ ಷರತ್ತು!

ತಂಡವೊಂದು ಇಬ್ಬರು ವಿದೇಶಿ ಆಟಗಾರರು ಮೀರದಂತೆ ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ನಿಯಮವನ್ನು ಹಾಕಲಿರುವ ಬಿಸಿಸಿಐ ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೂ ಕೂಡ ಷರತ್ತು ವಿಧಿಸಲಿದೆ. ತಂಡವೊಂದು ತಮ್ಮ ತಂಡದಲ್ಲಿನ ಅನ್‌ಕ್ಯಾಪ್ಡ್ ಆಟಗಾರರ ಪೈಕಿ ಇಬ್ಬರಿಗಿಂತ ಅಧಿಕ ಆಟಗಾರರನ್ನು ಉಳಿಸಿಕೊಳ್ಳುವಂತಿಲ್ಲ ಎಂಬ ಷರತ್ತನ್ನು ವಿಧಿಸಲಿದೆ. ಈ ಮೂಲಕ ತಂಡವೊಂದು ಕೇವಲ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಲಿದೆ. ಇನ್ನು ಹಿಂದಿನ ಹರಾಜಿನಲ್ಲಿ ಫ್ರಾಂಚೈಸಿಗಳಿಗೆ ರೈಟ್ ಟು ಮ್ಯಾಚ್ ಅವಕಾಶವನ್ನು ನೀಡಲಾಗಿತ್ತು. ಈ ರೈಟ್ ಟು ಮ್ಯಾಚ್ ಅಡಿಯಲ್ಲಿ ತಂಡವೊಂದು ತಮ್ಮ ತಂಡದಲ್ಲಿನ ಆಟಗಾರರನ್ನು ಹರಾಜಿಗೆ ಬಿಟ್ಟು ಬೇರೆ ತಂಡ ಬಿಡ್ ಮಾಡುವಷ್ಟೇ ಹಣವನ್ನು ಬಿಡ್ ಮಾಡಿ ಆ ಆಟಗಾರನನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿತ್ತು. ಆದರೆ ಈ ಬಾರಿ ಈ ರೈಟ್ ಟು ಮ್ಯಾಚ್‌ಗೆ ಅವಕಾಶವಿರುವುದಿಲ್ಲ. ಹೀಗಾಗಿ ಒಮ್ಮೆ ಆಟಗಾರನನ್ನು ತಂಡದಿಂದ ಹರಾಜಿಗೆ ಬಿಟ್ಟ ನಂತರ ರೈಟ್ ಟು ಮ್ಯಾಚ್ ಬಳಸಿ ಆತನನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವುದು ಅಸಾಧ್ಯವಾಗಲಿದೆ.

ಫ್ರಾಂಚೈಸಿಗಳು ಖರ್ಚು ಮಾಡಬಹುದಾದ ಹಣದಲ್ಲಿ ಏರಿಕೆ

ಫ್ರಾಂಚೈಸಿಗಳು ಖರ್ಚು ಮಾಡಬಹುದಾದ ಹಣದಲ್ಲಿ ಏರಿಕೆ

ಈ ಹಿಂದಿನ ಮೆಗಾ ಹರಾಜಿನಲ್ಲಿ ತಂಡವೊಂದು ಆಟಗಾರರನ್ನು ಖರೀದಿಸಲು ಖರ್ಚು ಮಾಡಬಹುದಾಗಿದ್ದ ಗರಿಷ್ಠ ಮೊತ್ತವನ್ನು 85 ಕೋಟಿ ಎಂದು ನಿಗದಿಪಡಿಸಲಾಗಿತ್ತು. ಆದರೆ ಈ ಬಾರಿಯ ಹರಾಜಿನಲ್ಲಿ ತಂಡವೊಂದು 90 ಕೋಟಿ ಹಣವನ್ನು ಖರ್ಚು ಮಾಡಬಹುದು ಎಂಬ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

Virat Kohliಗೆ‌ ಒಂದು ಕಿವಿಮಾತು ಹೇಳಿದ Sunil Gavaskar | Oneindia Kannada
ಹೊಸದಾಗಿ ಸೇರ್ಪಡೆಯಾಗಲಿರುವ 2 ಫ್ರಾಂಚೈಸಿಗಳಿಗೆ ಅನುಕೂಲ ಹೆಚ್ಚು

ಹೊಸದಾಗಿ ಸೇರ್ಪಡೆಯಾಗಲಿರುವ 2 ಫ್ರಾಂಚೈಸಿಗಳಿಗೆ ಅನುಕೂಲ ಹೆಚ್ಚು

ಇನ್ನು ಹೊಸದಾಗಿ ಸೇರ್ಪಡೆಯಾಗಲಿರುವ 2 ನೂತನ ಫ್ರಾಂಚೈಸಿಗಳಿಗೆ ವಿಶೇಷವಾದ ಅನುಮತಿಯನ್ನು ನೀಡಲಾಗುತ್ತಿದ್ದು ನಡೆಯಲಿರುವ ಹರಾಜನ್ನು ಹೊರತುಪಡಿಸಿ ಆ ತಂಡಗಳು ಪ್ರತ್ಯೇಕವಾಗಿ 3 ವಿದೇಶಿ ಅಥವಾ ಸ್ವದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅನುಮತಿಯಿದೆ. ಈ ರೀತಿಯ ಅನುಕೂಲ ಈಗಾಗಲೇ ಇರುವ 8 ತಂಡಗಳಿಗೆ ಇಲ್ಲದಿರುವ ಕಾರಣ ನೂತನ ಫ್ರಾಂಚೈಸಿಗಳಿಗೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Friday, October 22, 2021, 18:31 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X