ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ವಿರಾಟ್ ಕೊಹ್ಲಿ ಫಾರ್ಮ್ ಸಮರ್ಥಿಸಿಕೊಂಡ ಮಾಜಿ ಕೋಚ್ ರವಿಶಾಸ್ತ್ರಿ

ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ವಿರಾಟ್ ಕೊಹ್ಲಿಯ ಸದ್ಯದ ಫಾರ್ಮ್ ಅನ್ನು ಬೆಂಬಲಿಸಿದ್ದಾರೆ. ಐಪಿಎಲ್ 2022ರ ಮಧ್ಯದಲ್ಲಿ ಪಂದ್ಯಾವಳಿ ಸಾಗುತ್ತಿದ್ದು, ಉಳಿದ ಋತುವಿನಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಖಂಡಿತವಾಗಿಯೂ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.

ಋತುವಿನ ಮೊದಲಾರ್ಧದಲ್ಲಿ ಭಯಾನಕ ಓಟದ ನಂತರ ಆರ್‌ಸಿಬಿ ತಾರೆ ಬ್ಯಾಟಿಂಗ್ ಝಲಕ್‌ಗಳನ್ನು ತೋರಿಸಿದಾಗಲೂ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಕಳೆದ ವಾರ ಗುಜರಾತ್ ಟೈಟನ್ಸ್ ವಿರುದ್ಧ 53 ಎಸೆತಗಳಲ್ಲಿ 58 ರನ್ ಗಳಿಸಿದ ನಂತರ ಕೊಹ್ಲಿ 0, 0 ಮತ್ತು 9 ಸ್ಕೋರ್‌ ಮಾಡಿದ್ದರು.

IPL 2022: Former India Cricket Coach Ravi Shastri Defend Of Virat Kohli Form

ಆದರೆ ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಅವರು 33 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಶ್ರಮದಾಯಕ ಪ್ರದರ್ಶನ ನೀಡಿ ಔಟಾದರು. ನಿರರ್ಗಳವಾದ ಸ್ಟ್ರೋಕ್-ಮೇಕಿಂಗ್‌ಗೆ ಸೂಕ್ತವಲ್ಲದ ಪಿಚ್‌ನಲ್ಲಿ ಕೊಹ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಆದರೆ ಈ ಸ್ಟಾರ್ ಬ್ಯಾಟ್ಸ್‌ಮನ್, ಮೊಯಿನ್ ಅಲಿ ಅವರ ಬೌಲಿಂಗ್‌ನಲ್ಲಿ ಡಿಫೆನ್ಸ್ ಮಾಡಲು ಹೋಗಿ ವಿಕೆಟ್ ನೀಡಿದರು.

ಇದು ಕಳವಳಕಾರಿ ಸಂಗತಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಇಯಾನ್ ಬಿಷಪ್ ಮಾತುಇದು ಕಳವಳಕಾರಿ ಸಂಗತಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಇಯಾನ್ ಬಿಷಪ್ ಮಾತು

"ನಾನು ಸ್ಟ್ರೈಕ್ ರೇಟ್ ಬಗ್ಗೆ ದೊಡ್ಡದಾಗಿ ಮಾತನಾಡಲು ಹೋಗುವುದಿಲ್ಲ, ನಾನು ಸದ್ಯದ ವಾಸ್ತವತೆಯನ್ನು ನೋಡುತ್ತೇನೆ. ಪಿಚ್‌ನ ಮೇಲ್ಮೈ ಸಮತಟ್ಟಾಗಿದ್ದರೆ ಹೋಗು ಎನ್ನುತ್ತೇನೆ. ನಿಮ್ಮ ಸ್ಟ್ರೈಕ್ ರೇಟ್ ನಿಜವಾಗಿಯೂ ಉತ್ತಮವಾಗಿರಬೇಕಾಗುತ್ತದೆ".

"ಈ ರೀತಿಯ ಟ್ರ್ಯಾಕ್‌ನಲ್ಲಿ ನೀವು ನಿಮ್ಮ ತಂಡಕ್ಕಾಗಿಯೂ ಕೆಲಸ ಮಾಡಬಹುದು. ಉತ್ತಮ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಹಿಡಿದಿಟ್ಟುಕೊಳ್ಳಿ ಮತ್ತು ಸ್ಕೋರ್ ಬೆಳವಣಿಯಲ್ಲಿ ಮುಖ್ಯ ಪಾತ್ರ ವಹಿಸಿ ಆಗ ಇನ್ನಿಂಗ್ಸ್‌ನ ಕೊನೆಯಲ್ಲಿ ಸ್ಟ್ರೈಕ್ ರೇಟ್ ಯಾವಾಗಲೂ ಉತ್ತಮವಾಗಿರುತ್ತದೆ," ಎಂದು ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

IPL 2022: Former India Cricket Coach Ravi Shastri Defend Of Virat Kohli Form

"ಟಿ20 ಐಪಿಎಲ್‌ನಲ್ಲಿ ರನ್‌ಗಳನ್ನು ಗಳಿಸುವುದು ಮುಖ್ಯ, ಅದೇ ರೀತಿ ಆರ್‌ಸಿಬಿ ಗೆಲ್ಲುವುದು ಮುಖ್ಯ. ಮುಂಬರುವ ಕಠಿಣ ಪಂದ್ಯಗಳಲ್ಲಿ RCBಯ ಆರಂಭಿಕ ಜೋಡಿ ಉತ್ತಮ ರನ್ ಗಳಿಸಿದರೆ, ಇನ್ನಿಂಗ್ಸ್ ಪೂರ್ತಿ ಚೆನ್ನಾಗಿ ಕಾಣುತ್ತದೆ. ಪ್ಲೇ-ಆಫ್‌ಗಳಿಗೆ ಹೋಗಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದರು.

"ವಿರಾಟ್ ಕೊಹ್ಲಿ ಚೆಂಡನ್ನು ಅಂತರದಲ್ಲಿ ಬಾರಿಸಲು ಬಯಸುತ್ತಾರೆ, ಈ ವೇಳೆ ಆರಂಭಿಕ ರನ್‌ಗಳನ್ನು ಪಡೆಯುತ್ತಾರೆ. ಕೊಹ್ಲಿ-ಫಾಫ್ ಡುಪ್ಲೆಸಿ ಸೆಟ್ ಆಗಿದ್ದರು. ಆದರೆ ಸಿಎಸ್‌ಕೆ ಸ್ಪಿನ್ನರ್‌ಗಳು ಬಂದ ನಂತರ, ಸ್ಟ್ರೈಕ್ ಅನ್ನು ಹೆಚ್ಚಿಸಲು ಕಷ್ಟಕರವಾಗಿತ್ತು ಎಂದು ರವಿಶಾಸ್ತ್ರಿ ಹೇಳಿದರು.

IPL 2022: Former India Cricket Coach Ravi Shastri Defend Of Virat Kohli Form

ಉತ್ತಮವಾಗಿ ಆಡುತ್ತಿರುವಾಗಲೇ ಮೊಯಿನ್ ಅಲಿಯ ಉತ್ತಮ ಎಸೆತಕ್ಕೆ ವಿಕೆಟ್ ಕೈಚೆಲ್ಲಿದರು. ಕ್ಲಾಸಿಕಲ್ ಆಫ್-ಸ್ಪಿನ್ನರ್‌ನ ಎಸೆತವು ಬ್ಯಾಟ್‌ನ್ನು ವಂಚಿಸಿ ವಿಕೆಟ್ ಬೆಲ್ಸ್ ಹಾರಿಸಿತು.

"ಆದರೂ 30 ಎಂದರೆ 30, 50 ಎಂದರೆ 50. ಎರಡು ಇನ್ನಿಂಗ್ಸ್‌ಗಳಲ್ಲಿ ಇದು 80-ಪ್ಲಸ್ ಆಗಿದೆ. ಆದ್ದರಿಂದ ಇದು ಕೊಹ್ಲಿಯ ಉತ್ತಮ ಪ್ರದರ್ಶನವಾಗಿದೆ," ಎಂದು ಮಾಜಿ ಕೋಚ್ ರವಿಶಾಸ್ತ್ರಿ ತಿಳಿಸಿದರು.

ಅದು ಕೊಹ್ಲಿಯನ್ನು ಅಸಮಾಧಾನಗೊಳಿಸುತ್ತದೆ
ಇದಲ್ಲದೆ ಸ್ಪಿನ್ನರ್‌ಗಳಿಗೆ, ವಿಶೇಷವಾಗಿ ಮೊಯಿನ್ ಅಲಿಯಂತ ಬೌಲರ್‌ಗೆ ಔಟಾಗಲು ಕೊಹ್ಲಿಗೆ ನಿರಾಶೆಯಾಗುತ್ತದೆ ಎಂದು ಹೇಳಿ ರವಿಶಾಸ್ತ್ರಿ ಗಮನಸೆಳೆದರು. ಈ ಇಂಗ್ಲೆಂಡ್ ಸ್ಪಿನ್ನರ್ 2021ರ ಚೆನ್ನೈ ಟೆಸ್ಟ್‌ನಲ್ಲಿ ಇದೇ ಮಾದರಿಯಲ್ಲಿ ಕೊಹ್ಲಿಯನ್ನು ಔಟ್ ಮಾಡಿದರು.

ಇದು ಕೊಹ್ಲಿಯನ್ನು ಖಂಡಿತವಾಗಿಯೂ ನಿರಾಶೆಗೊಳಿಸಿರುತ್ತದೆ. ಈ ರೀತಿ ಔಟ್ ಆಗಿರುವುದು ಇದು ಮೊದಲ ಬಾರಿಗೆ ಅಲ್ಲ, ಮೊಯೀನ್ ಅಲಿಗೆ ಅದು ಫ್ಯಾಷನ್ ಆಗಿಬಿಟ್ಟಿದೆ ಎಂದರು.

ಐಪಿಎಲ್ 2022ರಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ತೋರುವ ಮೂಲಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಹೆಣಗಾಡುತ್ತಿದ್ದಾರೆ. ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವ ಆರ್‌ಸಿಬಿಯ ಈ ಸ್ಟಾರ್ ಬ್ಯಾಟರ್, ಈ ಋತುವಿನ 11 ಪಂದ್ಯಗಳಲ್ಲಿ 20ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 216 ರನ್ ಗಳಿಸಿದ್ದಾರೆ.

Story first published: Thursday, May 5, 2022, 21:03 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X