ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಮ್ಯಾಕ್ಸ್‌ವೆಲ್‌ರನ್ನ RCB ರೀಟೈನ್ ಮಾಡಿದ್ದು ನಿಜಕ್ಕೂ ಆಶ್ಚರ್ಯ ಮೂಡಿಸಿತ್ತು ಎಂದ ಮಾಜಿ ಪ್ಲೇಯರ್

Parthiv patel and maxwell

ಐಪಿಎಲ್ 15ನೇ ಸೀಸನ್‌ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಮುಖ ಹಂತದಲ್ಲಿ ಎಡವಿ ಪ್ರಶಸ್ತಿ ಗೆಲ್ಲುವ ಕನಸನ್ನ ನನಸಾಗದೆ ಉಳಿಸಿದೆ. ಪ್ರಶಸ್ತಿಯಿಂದ ಎರಡು ಪಂದ್ಯಗಳ ದೂರದಲ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ನಿರ್ಣಾಯಕ ಕದನದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ವೈಫಲ್ಯವು ಆರ್‌ಸಿಬಿ ಗೆಲುವಿನ ಅವಕಾಶವನ್ನು ಹಾಳುಮಾಡಿತು. ಆದರೆ, ಆರ್‌ಸಿಬಿ ವೈಫಲ್ಯಕ್ಕೆ ಪ್ರತಿಕ್ರಿಯೆಯಾಗಿ ತಂಡದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಐಪಿಎಲ್ 2022: ಕೋಚ್ ಆಶಿಶ್ ನೆಹ್ರಾ ನೀಡಿದ ಬೆಂಬಲದಿಂದ ಇದೆಲ್ಲವೂ ಸಾಧ್ಯವಾಯಿತು: ಹಾರ್ದಿಕ್ ಪಾಂಡ್ಯಐಪಿಎಲ್ 2022: ಕೋಚ್ ಆಶಿಶ್ ನೆಹ್ರಾ ನೀಡಿದ ಬೆಂಬಲದಿಂದ ಇದೆಲ್ಲವೂ ಸಾಧ್ಯವಾಯಿತು: ಹಾರ್ದಿಕ್ ಪಾಂಡ್ಯ

ಆರ್‌ಸಿಬಿ ಅನಗತ್ಯವಾಗಿ ಮ್ಯಾಕ್ಸ್‌ವೆಲ್ ಅನ್ನು ಉಳಿಸಿಕೊಂಡಿದೆ ಎಂದು ಪಾರ್ಥೀವ್ ನಂಬಿದ್ದಾರೆ. ಅವರು ಲೀಗ್‌ನಲ್ಲಿ ಎಂದಿಗೂ ಮಿಂಚಿಲ್ಲ, ಒಂದು ವೇಳೆ ಮ್ಯಾಕ್ಸ್‌ವೆಲ್ ಮಿಂಚಿದರೆ, ಮತ್ತೆ ಐದು ವರ್ಷಗಳ ಕಾಲ ಅವರು ಮಿಂಚಿದ ಉದಾಹರಣೆ ಇಲ್ಲ ಎಂದು ಟೀಕಿಸಿದ್ದಾರೆ.

''ಆರ್‌ಸಿಬಿ .. ಗ್ಲೆನ್ ಮ್ಯಾಕ್ಸ್‌ವೆಲ್ ಉಳಿಸಿಕೊಂಡಿರುವುದನ್ನು ನೋಡಿ ನನಗೆ ಆಘಾತವಾಯಿತು. ಅವರು ಆರ್‌ಸಿಬಿ ಪರ ಆಡಿದ ಏಕೈಕ ಸೀಸನ್ ನಲ್ಲಿ ಸ್ವಲ್ಪ ಉತ್ತಮ ರನ್ ಗಳಿಸಿದರು. ಐಪಿಎಲ್‌ನಲ್ಲಿ ಅವರ ಪ್ರದರ್ಶನ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಅವರು ಪ್ರತಿ ಐದು ಸೀಸನ್‌ಗಳಿಗೆ ಒಮ್ಮೆ ಚೆನ್ನಾಗಿ ಆಡುತ್ತಾರೆ. ಆ ಪ್ರದರ್ಶನದೊಂದಿಗೆ ಅವರು ಹಣವನ್ನ ಜೇಬಿಗಿಳಿಸುತ್ತಾರೆ. ಇಂತಹ ಆಟಗಾರ ಪ್ರತಿ ವರ್ಷ ಆಡಬೇಕು ಎಂದು ನಿರೀಕ್ಷಿಸುವುದು ಆರ್‌ಸಿಬಿ ಮಾಡಿದ ಘೋರ ತಪ್ಪು. ಐಪಿಎಲ್ 2022ರ ಸೀಸನ್‌ನಿಂದ ರೀಟೈನ್ ಆದ ಆಟಗಾರರು ಸರಿಯಾಗಿ ಆಡದಿರುವುದು ಫ್ರಾಂಚೈಸಿಗೆ ತೀವ್ರ ಹೊಡೆತ ನೀಡಿದೆ'' ಎಂದು ಪಾರ್ಥಿವ್ ಪಟೇಲ್ ಹೇಳಿದರು.

ಐಪಿಎಲ್ 2021 ರ ಸೀಸನ್‌ನಲ್ಲಿ 14 ಪಂದ್ಯಗಳಲ್ಲಿ 513 ರನ್ ಗಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ 11 ಕೋಟಿ ರೂ.ಗೆ ಉಳಿಸಿಕೊಂಡಿದೆ. ಆದಾಗ್ಯೂ ಅವರು ಈ ಋತುವಿನಲ್ಲಿ 13 ಪಂದ್ಯಗಳನ್ನು ಆಡಿದರು ಮತ್ತು ಕೇವಲ 301 ರನ್ ಗಳಿಸಿ ನಿರಾಸೆಗೊಂಡರು.

ಇನ್ನು 7 ಕೋಟಿ ರೂಪಾಯಿಗೆ ರೀಟೈನ್ ಆದ ಮೊಹಮ್ಮದ್ ಸಿರಾಜ್ ಅವರು 15 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಪಡೆದರು. ಹರಾಜಿನಿಂದ ಹೊರಗುಳಿದ ಯುಜವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಸೇರಿಕೊಂಡರು. ಸಿರಾಜ್ ಅವರ ಘೋರ ವೈಫಲ್ಯವು ತಂಡದ ಗೆಲುವಿನ ಅವಕಾಶವನ್ನು ಹಾಳು ಮಾಡಿತು. ವಿರಾಟ್ ಕೊಹ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

Story first published: Monday, May 30, 2022, 9:55 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X