ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಫ್ರಾಂಚೈಸಿಯ ಈ ರಣತಂತ್ರವೇ ತಂಡದ ದೊಡ್ಡ ಯಶಸ್ಸಿಗೆ ಕಾರಣ: ಶೇನ್ ವಾಟ್ಸನ್

IPL 2022: Shane Watson praises RCB for appoint Faf Du plessis as captain

ಆಸ್ಟ್ರೇಲಿಯಾ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಶೇನ್ ವಾಟ್ಸನ್ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ತಂಡದ ಯಶಸ್ಸಿಗೆ ಆರ್‌ಸಿಬಿ ಫ್ರಾಂಚೈಸಿ ತೆಗೆದುಕೊಂಡ ಒಂದು ಪ್ರಮುಖ ನಿರ್ಧಾರವೇ ಕಾರಣ ಎಂದು ಶೇನ್ ವಾಟ್ಸನ್ ಬಣ್ಣಿಸಿದ್ದಾರೆ.

ಐಪಿಎಲ್‌ನಲ್ಲಿ ಈವರೆಗೆ ಒಂದು ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಟೂರ್ನಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಸತತ ಮೂರನೇ ಬಾರಿಗೆ ಪ್ಲೇಆಫ್‌ಗೇರಿದ ಸಾಧನೆ ಮಾಡಿದೆ.

RCB vs RR: ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ತಂಡಕ್ಕೆ ಸೋಲಿನ ಭೀತಿ ಇದೆ ಎಂದ ಸ್ಮಿತ್RCB vs RR: ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ತಂಡಕ್ಕೆ ಸೋಲಿನ ಭೀತಿ ಇದೆ ಎಂದ ಸ್ಮಿತ್

ಫಾಫ್‌ಗೆ ನಾಯಕತ್ವ ದೊಡ್ಡ ತಿರುವು

ಫಾಫ್‌ಗೆ ನಾಯಕತ್ವ ದೊಡ್ಡ ತಿರುವು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಈ ಬಾರಿ ಫಾಫ್ ಡು ಪ್ಲೆಸಿಸ್ ವಹಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದ ಬಳಿಕ ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ನಂತರ ನಾಯಕತ್ವದ ಹೊಣೆಗಾರಿಕೆ ವಹಿಸಿತ್ತು. ಆರ್‌ಸಿಬಿ ಫ್ರಾಂಚೈಸಿಯ ಈ ರಣತಂತ್ರ ತಂಡಕ್ಕೆ ದೊಡ್ಡ ತಿರುವು ನೀಡಿತು ಎಂದಿದ್ದಾರೆ ಆಸಿಸ್ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್. ಇನ್ನು ಮುಂದುವರಿದು ಮಾತನಾಡಿದ ವಾಟ್ಸನ್ "ವಿರಾಟ್ ಕೊಹ್ಲಿಯಂತಾ ಆಟಗಾರನಿಂದ ಉತ್ತಮ ಆಟವನ್ನು ತೆಗೆಯಲು ಸಾಧ್ಯವಿರುವ ಕೆಲವೇ ಆಟಗಾರರ ಪೈಕಿ ಫಾಫ್ ಕೂಡ ಒಬ್ಬರು" ಎಂದಿದ್ದಾರೆ ವಾಟ್ಸನ್.

ಮ್ಯಾನೇಜ್‌ಮೆಂಟ್‌ನಿಂದ ಅದ್ಭುತ ನಿರ್ಧಾರ

ಮ್ಯಾನೇಜ್‌ಮೆಂಟ್‌ನಿಂದ ಅದ್ಭುತ ನಿರ್ಧಾರ

"ತಂಡದ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್‌ಗೆ ನೀಡುವುದು ಅದ್ಭುತವಾದ ರಣತಂತ್ರವಾಗಿದೆ. ಅವರು ಈಗ ಫ್ಲೇಆಫ್‌ಗೆ ಪ್ರವೇಶಿಸಿದ್ದು ಟ್ರೋಫಿಯನ್ನು ಗೆಲ್ಲುವತ್ತ ದೃಷ್ಟಿನೆಟ್ಟಿದ್ದಾರೆ. ಆತನೋರ್ವ ಶ್ರೇಷ್ಠ ಆಟಗಾರನಾಗಿದ್ದು ಅದ್ಭುತ ನಾಯಕನೂ ಹೌದು. ತುಂಬಾ ಸಹಾನುಭೂತಿ ಹಾಗೂ ಕಾಳಜಿಯುಳ್ಳ ವ್ಯಕ್ತಿ. ಯಾವಾಗಲೂ ಅವರಿಂದ ಅದ್ಭುತ ಪ್ರದರ್ಶನಗಳು ಬರುತ್ತದೆ. ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಹೇಜಲ್‌ವುಡ್‌ ಜೊತೆಗೆ ಉತ್ತಮ ಬಾಂಧವ್ಯ ಕೂಡ ಹೊಂದಿದ್ದಾರೆ" ಎಂದು ವ್ಯಾಟ್ಸನ್ ಗ್ರೇಡ್ ಕ್ರಿಕೆಟರ್ ಪಾಡ್‌ಕ್ಯಾಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಸಿಬಿ ನನ್ನ ನೆಚ್ಚಿನ ತಂಡ ಎಂದ ವಾಟ್ಸನ್

ಆರ್‌ಸಿಬಿ ನನ್ನ ನೆಚ್ಚಿನ ತಂಡ ಎಂದ ವಾಟ್ಸನ್

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ಶೇನ್ ವಾಟ್ಸನ್ ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ತನ್ನ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ. "ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ನನ್ನ ನೆಚ್ಚಿನ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿತ್ತು. ಅದಕ್ಕೆ ಕಾರಣ ಹರಾಜಿನಲ್ಲಿ ಅವರು ಉತ್ತಮವಾದ ಆಟಗಾರರನ್ನು ಆಯ್ಕೆ ಮಾಡಿದ್ದು. ಈ ತಂಡ ಅದ್ಭುತವಾಗಿ ಸಂಯೋಜನೆಯನ್ನು ಹೊಂದಿದೆ. ಫಾಫ್ ಡು ಪ್ಲೆಸಿಸ್ ಅವರನ್ನು ಆಯ್ಕೆ ಮಾಡಿದ್ದು ಅವರ ಅತ್ಯುತ್ತಮ ಆಯ್ಕೆಯಾಗಿದೆ. ಯಾಕೆಂದರೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಾಗ ಅಂಥಾ ಆಟಗಾರರಿಮದ ಅತ್ಯುತ್ತಮ ಆಟವನ್ನು ಹೊರತೆಗೆಯಲು ಫಾಫ್ ಅವರಿಂದ ಮಾತ್ರ ಸಾಧ್ಯ. ಅಲ್ಲದೆ ತಂಡವನ್ನು ಉತ್ತಮ ಹಾದಿಯಲ್ಲಿ ಮುನ್ನುಗ್ಗಿಸಲು ಅವರಿಂದ ಸಧ್ಯ ಎಂದಿದ್ದಾರೆ ಶೇನ್ ವಾಟ್ಸನ್.

ಆರ್‌ಸಿಬಿ ಸ್ಕ್ವಾಡ್ ಹೀಗಿದೆ

ಆರ್‌ಸಿಬಿ ಸ್ಕ್ವಾಡ್ ಹೀಗಿದೆ

ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಜತ್ ಪಾಟಿದಾರ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ಚಾಮ ವಿ ಮಿಲಿಂದ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

Story first published: Friday, May 27, 2022, 20:33 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X