ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಮುಂಬೈ ಮತ್ತು ಚೆನ್ನೈಎರಡೂ ತಂಡವನ್ನ ಪ್ರತಿನಿಧಿಸಿದ್ದ 5 ಆಟಗಾರರು

 team

ಐಪಿಎಲ್ ಐತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಅತಿ ಯಶಸ್ವಿ ತಂಡಗಳಾಗಿದ್ದವು. ಒಟ್ಟು 14 ಆವೃತ್ತಿಯಲ್ಲಿ ಎರಡು ತಂಡಗಳು ಒಂಬತ್ತು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದವು. ಈ ಎರಡು ತಂಡಗಳು ಗುರುವಾರ ಸೆಣಸಲಿದ್ದು, ಈ ಕಾದಾಟದಲ್ಲಿ ಯಾವ ತಂಡ ವಿಜಯಶಾಲಿಯಾಗಲಿದೆ ಎಂಬುದು ನೆಟ್ಟಿಗರಲ್ಲಿ ಪ್ರಮುಖ ಪ್ರಶ್ನೆಯಾಗಿದೆ.

ನಾಯಕರಾದ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಇಬ್ಬರೂ ಪ್ಲೇಆಫ್‌ನ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ, ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಲು ಹರಸಾಹಸ ಪಡುತ್ತಲೆ ಇದೆ. ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, ಇವರೆಗೂ ಗೆಲುವಿನ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡ ರಚನೆಯಲ್ಲಿ ಗೊಂದಲಗಳನ್ನು ಸೃಷ್ಠಿಸಿಕೊಂಡಿದ್ದು, ಆರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಲು ಸಾಧ್ಯವಾಗಿದೆ.

ಈ ಪಂದ್ಯ ನೋಡುವುದಕ್ಕೂ ಮೊದಲು ಕುತೂಹಲ ಮೂಡಿಸುವ ವಿಚಾರ ಒಂದಿದೆ. ಅದೇನಂದ್ರೆ ಸಿಎಸ್‌ಕೆ ಮತ್ತು ಮುಂಬೈ ಮಹಾಕದನದಲ್ಲಿ ಎರಡು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ ಟಾಪ್ ಐದು ಆಟಗಾರರು ಯಾರು ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.

ಚೆನೈ ತಂಡದ ಡ್ವೇನ್ ಬ್ರಾವೋ

ಚೆನೈ ತಂಡದ ಡ್ವೇನ್ ಬ್ರಾವೋ

ವೆಸ್ಟ್ ಇಂಡಿಯಾದ ಆಲ್ ರೌಂಡರ್ ಬ್ರಾವೊ ಐಪಿಎಲ್‌ನಲ್ಲಿ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರು. ಬ್ರಾವೋ ತಮ್ಮ ಐಎಪಿಲ್ ವೃತ್ತಿಜೀವನವನ್ನು ಮುಂಬೈನೊಂದಿಗೆ ಪ್ರಾರಂಭಿಸಿದರು. ಮೊದಲ ಮೂರು ಆವೃತ್ತಿಗಳಲ್ಲಿ ಮುಂಬೈ ಪ್ರತಿನಿಧಿಸಿದರು. ನಂತರ 2011ರ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಸೇರಿಕೊಂಡು ಈ ಆವೃತ್ತಿಯ ವರೆಗೂ ಚೆನೈ ತಂಡದಲ್ಲಿದ್ದಾರೆ. 2016 ಮತ್ತು 2017ರಲ್ಲಿ ಸಿಎಸ್‌ಕೆ ತಂಡವನ್ನು ಐಪಿಎಲ್‌ನಿಂದ ನಿಷೇಧಿಸಿದಾಗ ಬ್ರಾವೋ ಗುಜರಾತ್ ಲಯನ್ಸ್ ಅನ್ನು ಪ್ರತಿನಿಧಿಸಿದ್ದರು.

ಬ್ರಾವೋ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದು, ಹೆಚ್ಚಾಗಿ ಹಳದಿ ಸೈನ್ಯದೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರ ಬೌಲಿಂಗ್ ಪ್ರದರ್ಶನದಿಂದ ಐಪಿಎಲ್ ಇತಿಹಾಸದಲ್ಲಿ ಪ್ರಮುಖ ವಿಕೆಟ್-ಟೇಕರ್ ಆಗಿದ್ದಾರೆ. ಆಲ್‌ರೌಂಡರ್ ಬ್ರಾವೋ ಬೌಲಿಂಗ್ ಮಾತ್ರ ವಲ್ಲದೇ ಬ್ಯಾಟಂಗ್್ನಲ್ಲಿಯು ಉತ್ತಮ ಪ್ರದರ್ಶನ ನೀಡಿದ್ದಾರೆ. ಚೆನ್ನೈ ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿರುವ ಬ್ರಾವೋ ತಂಡಕ್ಕೆ ಅನೇಕ ಸಂದರ್ಭದಲ್ಲಿ ವಿಶೇಷ ಗೆಲುವುಗಳನ್ನು ಒದಗಿಸಿದ್ದಾರೆ.

ಬ್ರಾವೋ ಈ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಏಕೈಕ ಬೌಲಿಂಗ್ ಅಸ್ತ್ರವಾಗಿದ್ದಾರೆ. ಕಳೆದ ಆರು ಪಂದ್ಯಾವಳಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜೊತೆಗೆ ಬ್ಯಾಟ್‌ ಮಾಡಲು ಕಡಿಮೆ ಅವಕಾಶಗಳು ಸಿಕ್ಕಿವೆ. ಪವರ್ ಹಿಟ್ಟರ್ ಆಗಿರುವ ಬ್ರಾವೋ ಬ್ಯಾಟಿಂಗ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಅಂಬಾಟಿ ರಾಯಡು

ಅಂಬಾಟಿ ರಾಯಡು

2010 ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ರಾಯಡು ಸ್ಥಿರ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸಿದರು. ಮುಂಬೈ ತಂಡದ ಪರವಾಗಿ ತೋರಿದ ಪ್ರದರ್ಶನದಿಂದ ರಾಷ್ಟ್ರೀಯ ತಂಡಕ್ಕೂ ಸೇರ್ಪಡೆಯಾದ್ರು.

ಚೆನೈ ತಂಡದ ಎರಡು ವರ್ಷಗಳ ನಿಷೇಧದ ನಂತರ ಅವರು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡರು. 2018 ಮತ್ತು 2021 ರಲ್ಲಿ ಚೆನೈ ತಂಡ ಚಾಂಪಿಯನ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಈ ವರ್ಷದ ಮೆಗಾ ಹರಾಜಿನಲ್ಲಿ, ಅವರನ್ನು ಮರಳಿ ಖರೀದಿಸಲು ಸಿಎಸ್‌ಕೆ 6.75 ಕೋಟಿ ಖರ್ಚು ಮಾಡಿತು.

ಐಪಿಎಲ್‌ನ ಈ ಆವೃತ್ತಿಯಲ್ಲಿ, ರಾಯುಡು ಅವರ ಅತ್ಯಧಿಕ ಸ್ಕೋರ್ 46 ರನ್. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಅವರು ಕಳೆದ ಆರು ಪಂದ್ಯಗಳಲ್ಲಿ ಕೇವಲ 128 ರನ್‌ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಭಜ್ಜಿ ಪಾಜಿ ಎಂದು ಪ್ರೀತಿಯಿಂದ ಕರೆಯಲ್ಪಡುವ, ಮಾಜಿ ಭಾರತೀಯ ಆಲ್‌ರೌಂಡರ್ ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಕೇವಲ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವುಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಗಿವೆ. ಅವರು 2008 ರಲ್ಲಿ ಮುಂಬೈ ತಂಡದಲ್ಲಿದ್ದರು.

ಐದು ಬಾರಿ ಐಪಿಎಲ್ ಚಾಂಪಿಯನ್‌ ಆಗಿರುವ ತಂಡದಿಂದ ಬಿಡುಗಡೆಯಾದ ನಂತರ, ಹರ್ಭಜನ್ ಸಿಂಗ್ ಅವರನ್ನು 2018 ರ ಹರಾಜಿನಲ್ಲಿ ಸಿಎಸ್‌ಕೆ ಸೇರಿಕೊಂಡರು. ಆಫ್ ಸ್ಪಿನ್ನರ್ 2019 ರಲ್ಲಿ 11 ಪಂದ್ಯಗಳಲ್ಲಿ 16 ವಿಕೆಟ್್ಗಳನ್ನು ಗಳಿಸಿದ್ದರು. ಮುಂಬೈ ತಂಡದ ಪರವಾಗಿ ಹೆಚ್ಚಿನ ಆಟಗಳನ್ನಾಡಿದರು. ಕಳೆದ 10 ವರ್ಷಗಳಲ್ಲಿ 136 ಪಂದ್ಯಗಳನ್ನಾಡಿರುವ ಅವರು 127 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಹರ್ಭಜನ್ ಅವರು 2022 ರ ಹರಾಜಿನಲ್ಲಿ ಅನ್‌ಸೋಲ್ಡ್‌ ಆದರು. ಒಟ್ಟು 163 ಐಪಿಎಲ್ ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಹೊಂದಿದ್ದಾರೆ. ಅವರು ಎಲ್ಲಾ ಸ್ವರೂಪದ ಆಟಗಳಿಂದ ನಿವೃತ್ತಿ ಘೋಷಿಸಿ, ಕಾಮೆಂಟರಿ ಪ್ಯಾನೆಲ್‌ಗೆ ಸೇರಿದರು.

ಪಿಯೂಷ್ ಚಾವ್ಲಾ

ಪಿಯೂಷ್ ಚಾವ್ಲಾ

ಎರಡು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ ನಂತರ, ಪಿಯೂಷ್ ಚಾವ್ಲಾ ಅವರು 6.75 ಕೋಟಿ ಗೆ 2020 ರಲ್ಲಿ ಚೆನ್ನೈಗೆ ಸೇರಿದರು. ಆದರೆ ಟೂರ್ನಿ ಮುಂದುವರೆದಂತೆ, ಚಾವ್ಲಾ ಅವರು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ತಂಡವು ಸಹ ಅವರನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನುಭವಿ ಲೆಗ್ ಸ್ಪಿನ್ನರ್ ಕೇವಲ ಸಿಎಸ್‌ಕೆ ಪರ ಏಳು ಪಂದ್ಯಗಳನ್ನಾಡಿ, ಆರು ವಿಕೆಟ್‌ಗಳನ್ನು ಪಡೆದರು.

ಇದಾದ ಬಳಿಕ ಮುಂಬೈ ಇಂಡಿಯನ್ಸ್‌ ಪ್ರತಿನಿಧಿಸಿದ ಚಾವ್ಕಾ ಆ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದರು. ಆ ಪಂದ್ಯದಲ್ಲಿ ಒಂದು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಕೆಕೆಆರ್ ತಂಡದ ಖಾಯಂ ಆಟಗಾರರಾಗಿದ್ದ ಈತ, ಸಿಎಸ್‌ಕೆ ಮತ್ತು ಮುಂಬೈ ತಂಡದಲ್ಲಿ ಸ್ಥಿರ ಸ್ಥಾನವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಚಾವ್ಲಾ ಅವರ 14 ವರ್ಷಗಳ ಐಪಿಎಲ್ ಪ್ರಯಾಣದಲ್ಲಿ 165 ಪಂದ್ಯಗಳನ್ನು ಆಡಿದ್ದಾರೆ ಮತ್ತು 157 ವಿಕೆಟ್ ಪಡೆದಿದ್ದಾರೆ. ಪಂಜಾಬ್ ತಂಡದೊಂದಿಗೆ ಐಪಿಎಲ್ ಪಾದಾರ್ಪಣೆ ಮಾಡಿರುವ ಅವರು, ಆರಂಭಿಕ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಪಡೆದರು.

Dhoni ತಮ್ಮ ಹಿಂದಿನ ಅವತಾರದಲ್ಲಿ ಕಾಣಿಸಿಕೊಂಡರು | Oneindia Kannada
ಕರಣ್ ಶರ್ಮಾ

ಕರಣ್ ಶರ್ಮಾ

ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ತಂಡಗಳೊಂದಿಗೆ ಗುರುತಿಸಿಕೊಂಡಿರುವ ಕರಣ್ ಶರ್ಮಾ ಮೂರು ವಿಜೇತ ತಂಡದಲ್ಲಿರುವ ಕೆಲವೇ ಆಟಗಾರರಲ್ಲಿ ಒಬ್ಬರು. ಅವುಗಳಲ್ಲಿ ಎರಡು ಬಾರಿ ಮುಂಬೈ ಇಂಡಿಯನ್ಸ್ ಮತ್ತು ಒಂದು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು. 2017ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಟ್ರೋಫಿಯನ್ನು ಎತ್ತಿದಾಗ ಮುಂಬೈ ತಂಡದಲ್ಲಿದ್ದರು. ಲೆಗ್ ಸ್ಪಿನ್ನರ್ ಆಗಿರುವ ಶರ್ಮಾ ಒಂಬತ್ತು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದರು.

ನಂತರದಲ್ಲಿ 2018 ರಲ್ಲಿ CSK ಗೆ ತೆರಳಿ, ಎಂ.ಎಸ್ ಧೋನಿ ನಾಯಕತ್ವದಲ್ಲಿ ತಮ್ಮ ಮೂರನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಎತ್ತಿದರು. ಎರಡು ವರ್ಷಗಳ ನಿಷೇಧದ ನಂತರ ಸೂಪರ್ ಕಿಂಗ್ಸ್ ಲೀಗ್‌ಗೆ ಮರಳಿತು. ಆ ಆವೃತ್ತಿಯ ಆರು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಸಾಧಾರಣ ಪ್ರದರ್ಶನ ನೀಡಿದರು. ಇವರನ್ನು ಅದೃಷ್ಟವಂತ ಆಟಗಾರ ಎಂದು ಸಹ ಭಾವಿಸಲಾಗುತ್ತದೆ. ಏಕೆಂದರೆ ಮುಂಬೈ ತಂಡದಲ್ಲಿ ಒಂದು ಬಾರಿ, ಹೈದ್ರಾಬಾದ್ ಮತ್ತು ಚೆನ್ನೈ ತಂಡದಲ್ಲಿ ಒಂದು ಬಾರಿ ಪ್ರಶಸ್ತಿ ಗೆದ್ದ ತಂಡದಲ್ಲಿದ್ದಾರೆ.

ಆದ್ರೀಗ ಪ್ರಸ್ತುತ ಆರ್‌ಸಿಬಿ ತಂಡದಲ್ಲಿರುವ ಕರಣ್ ಶರ್ಮಾ, ತಂಡದ ಪರ ಮೊದಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಲಿದ್ದಾರೆಯೇ ಎಂದು ಅಭಿಮಾನಿಗಳು ಕಾದುನೋಡುತ್ತಿದ್ದಾರೆ.

Story first published: Thursday, April 21, 2022, 20:35 [IST]
Other articles published on Apr 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X