ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಈಗ ಯಾರ ತಲೆ ಮೇಲಿದೆ?

IPL Points Table and updated Orange Cap & Purple Cap list

ಬೆಂಗಳೂರು, ಏಪ್ರಿಲ್ 9: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡು ಮೂರು ವಾರಗಳು ಕಳೆದಾಗಿದೆ. ಟೂರ್ನಿಯ ಒಟ್ಟು 22 ಪಂದ್ಯಗಳು ಫಲಿತಾಂಶ ಕಂಡಿವೆ. ಈ 22 ಪಂದ್ಯಗಳ ಬಳಿಕ ಪಾಯಿಂಟ್ ಟೇಬಲ್‌ನಲ್ಲಿ ಏರಿಳಿತಗಳಾಗಿವೆ. ಅಗ್ರ ಸ್ಥಾನದಲ್ಲಿದ್ದ ಚೆನ್ನೈಯನ್ನು ಕೋಲ್ಕತ್ತಾ ಕೆಳಗಿಳಿಸಿದೆ (ಚಿತ್ರ ಕೃಪೆ: ಡ್ರೀಮ್ 11).

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಸದ್ಯದ ಪಾಯಿಂಟ್ ಟೇಬಲ್‌ನಲ್ಲಿ ನೆಟ್‌ ರನ್ ರೇಟ್ ಆಧಾರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಗ್ರ ಸ್ಥಾನದಲ್ಲಿದೆ. ಆಡಿರುವ 5 ಪಂದ್ಯಗಳಲ್ಲಿ ಕೆಕೆಆರ್ 4ರಲ್ಲಿ ಗೆಲುವು ಕಂಡಿದೆ. ಕೆಕೆಆರ್ ಖಾತೆಯಲ್ಲಿ 8 ಅಂಕಗಳಿವೆ. ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ 5ರಲ್ಲಿ 4 ಪಂದ್ಯ ಗೆದ್ದು 8 ಪಾಯಿಂಟ್ ಕಲೆ ಹಾಕಿದೆ.

ವಿಶ್ವಕಪ್ 2019ಗಾಗಿ ಏಪ್ರಿಲ್ 15ರಂದು ಟೀಂ ಇಂಡಿಯಾ ಪ್ರಕಟವಿಶ್ವಕಪ್ 2019ಗಾಗಿ ಏಪ್ರಿಲ್ 15ರಂದು ಟೀಂ ಇಂಡಿಯಾ ಪ್ರಕಟ

ಈ 22 ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ತಂಡಗಳ ಸಂಕ್ಷಿಪ್ತ ವಿವರ ಇಲ್ಲಿದೆ. ಆದರೆ ಗಮನಿಸಿ; ಇದು 23ನೇ ಪಂದ್ಯಕ್ಕೂ ಮುನ್ನ ಅಂದರೆ 9 ಏಪ್ರಿಲ್ 2019ರ ವರೆಗಿನ ಅಂಕಿ-ಅಂಶಗಳು.

ಕೆಕೆಆರ್‌ಗೆ ಆ್ಯಂಡ್ರೆ ರಸೆಲ್ ಬಲ

ಕೆಕೆಆರ್‌ಗೆ ಆ್ಯಂಡ್ರೆ ರಸೆಲ್ ಬಲ

ಆರಂಭದಲ್ಲಿ ಒಂದೂ ಸೋಲು ಕಂಡಿರದ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲತ್ತು. ಆದರೆ ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಬೆಂಬಲದಿಂದ ಕೆಕೆಆರ್ ಆಡಿರುವ 5ರಲ್ಲಿ 4 ಪಂದ್ಯಗಳನ್ನು ಗೆದ್ದು +1.058 ನೆಟ್ ರನ್‌ರೇಟ್ ಕಲೆ ಹಾಕಿದೆ. ಹೀಗಾಗಿ ಕೆಕೆಆರ್ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 5ರಲ್ಲಿ 4 ಪಂದ್ಯ ಗೆದ್ದಿರುವ ಸಿಎಸ್‌ಕೆ +0.159 ನೆಟ್ ರನ್‌ ರೇಟ್‌ನಿಂದ ದ್ವಿತೀಯ ಸ್ಥಾನದಲ್ಲಿದೆ.

ಮೊದಲ ಐದು ಸ್ಥಾನಗಳಲ್ಲಿ ಮುಂಬೈ

ಮೊದಲ ಐದು ಸ್ಥಾನಗಳಲ್ಲಿ ಮುಂಬೈ

6ರಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಕಿಂಗ್ಸ್ XI ಪಂಜಾಬ್ ತೃತೀಯ ಸ್ಥಾನ, ಸನ್ ರೈಸರ್ಸ್ ಹೈದರಾಬಾದ್ ನಾಲ್ಕನೇ ಸ್ಥಾನ (6ರಲ್ಲಿ 3 ಗೆಲುವು) ಪಡೆದಿದೆ. ಟೂರ್ನಿ ಆರಂಭಗೊಂಡ ಬಳಿಕ ಸತತ 2 ಪಂದ್ಯಗಳನ್ನು ಸೋತ ಮುಂಬೈ ಇಂಡಿಯನ್ಸ್ ಆಡಿರುವ 5ರಲ್ಲಿ 3 ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ.

ಆರೆಂಜ್ ಆರ್ಮಿಯಲ್ಲಿ ಆರಂಜ್ ಕ್ಯಾಪ್

ಆರೆಂಜ್ ಆರ್ಮಿಯಲ್ಲಿ ಆರಂಜ್ ಕ್ಯಾಪ್

ಈ ಐಪಿಎಲ್ ಟೂರ್ನಿಯಲ್ಲಿ ವೈಯಕ್ತಿಕ ಅತ್ಯಧಿಕ ರನ್‌ಗಾಗಿ ಸದ್ಯಕ್ಕೆ ಆರೆಂಜ್ ಕ್ಯಾಪ್, ಆರೆಂಜ್ ಆರ್ಮಿ ಖ್ಯಾತಿಯ ಸನ್ ರೈಸರ್ಸ್ ಹೈದರಾಬಾದ್‌ನ ಡೇವಿಡ್ ವಾರ್ನರ್ ತಲೆ ಮೇಲಿದೆ. ವಾರ್ನರ್ ಒಟ್ಟು 6 ಪಂದ್ಯಗಳಲ್ಲಿ 349 ರನ್‌ನೊಂದಿಗೆ ಆರೆಂಜ್ ಕ್ಯಾಪ್ ಧರಿಸಿದ್ದಾರೆ. ಕಿತ್ತಳೆ ಕ್ಯಾಪ್ ಯಾದಿಯಲ್ಲಿ ಹೈದರಾಬಾದ್‌ನ ಮತ್ತೊಬ್ಬ ಆರಂಭಿಕ ಆಟಗಾರ ಜಾನಿ ಬೇರ್ಸ್ಟೋವ್ 263 ರನ್‌ನೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಪಂಜಾಬ್‌ನ ಕೆಎಲ್ ರಾಹುಲ್ (217 ರನ್), ಡೆಲ್ಲಿಯ ಶ್ರೇಯಸ್ ಐಯ್ಯರ್ (215), ಕೋಲ್ಕತ್ತಾದ ಆ್ಯಂಡ್ರೆ ರಸೆಲ್ (207) ಕ್ರಮವಾಗಿ 3-5ನೇ ಸ್ಥಾನ ಆವರಿಸಿದ್ದಾರೆ.

ರಬಾಡಾ ಬೆಸ್ಟ್ ಬೌಲರ್

ರಬಾಡಾ ಬೆಸ್ಟ್ ಬೌಲರ್

ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಾಗಿಸೋ ರಬಾಡಾ ಒಟ್ಟು 11 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಸಾಧನೆಯಲ್ಲಿ ಸದ್ಯಕ್ಕೆ ಮೊದಲ ಸ್ಥಾನದಲ್ಲಿದ್ದಾರೆ. 6 ಪಂದ್ಯಗಳಲ್ಲಿ ರಬಾಡಾ 11 ವಿಕೆಟ್ ಮುರಿದಿದ್ದಾರೆ. ಆರ್‌ಸಿಬಿಯ ಯುಜುವೇಂದ್ರ ಚಾಹಲ್ (9), ರಾಜಸ್ಥಾನ್ ರಾಯಲ್ಸ್‌ನ ಶ್ರೇಯಸ್ ಗೋಪಾಲ್‌ (8), ಹೈದರಾಬಾದ್‌ನ ಸಂದೀಪ್ ಶರ್ಮಾ (8), ಸಿಎಸ್‌ಕೆಯ ಇಮ್ರಾನ್ ತಾಹಿರ್ (7) ಕ್ರಮವಾಗಿ 3-5ನೇ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಕೇವಲ 1 ಪಂದ್ಯದಲ್ಲಿ 6 ವಿಕೆಟ್ ಪಡೆದಿರುವ ಮುಂಬೈ ಇಂಡಿಯನ್ಸ್ ವೇಗಿ ಅಲ್ಝಾರಿ ಜೋಸೆಫ್, ಪರ್ಪಲ್ ಕ್ಯಾಪ್ ಶ್ರೇಯಾಂಕದಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಅಂದ್ಹಾಗೆ ಒಂದೇ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧಕರಲ್ಲಿ ಈ ಬಾರಿ ಅಲ್ಝಾರಿ ಮೊದಲಿಗ.

Story first published: Tuesday, April 9, 2019, 17:41 [IST]
Other articles published on Apr 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X