ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಟ್ರೇಡ್ ಮೂಲಕ ಅದೃಷ್ಟ ಬದಲಾಯಿಸಿಕೊಂಡ ಸ್ಟಾರ್ ಆಟಗಾರರು ಇವರು!

IPL: These 5 cricketers luck changed after they were traded to other franchise

ಐಪಿಎಲ್ 16ನೇ ಆವೃತ್ತಿಗೂ ಮುನ್ನ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೂ ಮುನ್ನ ಆಟಗಾರರ ರೀಟೈನ್ ಹಾಗೂ ಬಿಡುಗಡೆ ಪ್ರಕ್ರಿಯೆ ಮುಕ್ತಾಯವಾಗಿದೆ. ಡಿಸೆಂಬರ್ 23ರಲ್ಲಿ ಕೊಚ್ಚಿಯಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಯಾವೆಲ್ಲಾ ಆಟಗಾರರು ಇರಲಿದ್ದಾರೆ ಎಂಬ ಬಗ್ಗೆ ಈಗ ಸ್ಪಷ್ಟ ಮಾಹಿತಿಗಳು ಹೊರಬಿದ್ದಿದೆ. ಈ ಸಂದರ್ಭದಲ್ಲಿ ಕೆಲ ಆಟಗಾರರನ್ನು ಹರಾಜಿಗಾಗಿ ಬಿಡುಗಡೆ ಮಾಡಲು ಅವಕಾಶ ಕೊಡದೆಯೇ ಟ್ರೇಡ್ ಮಾಡಿಕೊಳ್ಳುವ ಮೂಲಕ ಆಟಗಾರರನ್ನು ತಂಡಗಳಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗಳು ಕೂಡ ನಡೆದಿದೆ. ಈ ಪ್ರಕ್ರಿಯೆಗೆ ಇನ್ನು ಕೂಡ ಅವಕಾಶವಿದೆ ಎಂಬುದು ಗಮನಾರ್ಹ ಅಂಶ.

ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಫ್ರಾಂಚೈಸಿಗಳಿಗೆ ಇರುವ ಅವಕಾಶಗಳಲ್ಲಿ ಟ್ರೇಡ್ ಕೂಡ ಒಂದಾಗಿದೆ. ಎರಡು ಫ್ರಾಂಚೈಸಿಗಳು ಮಾತುಕತೆ ನಡೆಸಿ ವ್ಯವಹಾರಕ್ಕೆ ಒಪ್ಪಿಗೆಯಾದರೆ ಆಟಗಾರನನ್ನು ಹರಾಜುಪಟ್ಟಿಗೆ ಬಿಡುಗಡೆಗೊಳಿಸದೆಯೇ ಮತ್ತೊಂದು ಫ್ರಾಂಚೈಸಿ ತಂಡಕ್ಕೆ ಸೇರ್ಪಡೆಗೊಳಿಸಬಹುದು. ಈ ಬಾರಿ ಕೂಡ ಹೇಗೆ ಹಲವು ಟ್ರೇಡ್ ಪ್ರಕ್ರಿಯೆಗಳು ಈಗಾಗಲೇ ನಡೆದಿದ್ದು ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ ಕೆಕೆಆರ್‌ಗೆ ಟ್ರೇಡ್ ಮೂಲಕ ಬಿಟ್ಟುಕೊಟ್ಟಿರುವುದು ಈ ಬಾರಿಯ ಪ್ರಮುಖ ಟ್ರೇಡ್ ಆಗಿದೆ.

IND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠIND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠ

ಇನ್ನು ಐಪಿಎಲ್ ಇತಿಹಾಸವನ್ನು ನೋಡಿದರೆ ಟ್ರೇಡ್ ಮೂಲಕ ತಂಡವನ್ನು ಬದಲಾಯಿಸಿಕೊಂಡು ಅದೃಷ್ಟವೇ ಬದಲಾದ ಸ್ಟಾರ್ ಆಟಗಾರರು ಇದ್ದಾರೆ. ಹೀಗೆ ಅದೃಷ್ಟ ಬದಲಾದ ಐವರು ಸ್ಟಾರ್ ಆಟಗಾರರು ಯಾರು ಎಂಬುದನ್ನು ನೋಡೋಣ.. ಮುಂದೆ ಓದಿ..

ಕೆಎಲ್ ರಾಹುಲ್, 2016 ಐಪಿಎಲ್

ಕೆಎಲ್ ರಾಹುಲ್, 2016 ಐಪಿಎಲ್

ಕೆಲ್ ರಾಹುಲ್ 2015ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಆದರೆ 2016ರ ಐಪಿಎಲ್‌ಗೆ ಮುನ್ನ ಹೈದರಾಬಾದ್ ತಂಡ ಆರ್‌ಸಿಬಿ ತಂಡಕ್ಕೆ ಟ್ರೇಡ್ ಮಾಡಿಕೊಂಡಿತು. ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಬ್ರೇಕ್ ಪಡೆದುಕೊಂಡರು. ಈ ಆವೃತ್ತಿಯಲ್ಲಿ ನೀಡಿದ ಪ್ರದರ್ಶನದ ಬಳಿಕ ಭಾರತ ತಂಡಕ್ಕೂ ಆಯ್ಕೆಯಾದ ಕೆಎಲ್ ರಾಹುಲ್ ಬಳಿಕ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ಮನೀಶ್ ಪಾಂಡೆ, 2009ರ ಐಪಿಎಲ್

ಮನೀಶ್ ಪಾಂಡೆ, 2009ರ ಐಪಿಎಲ್

ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಮನೀಶ್ ಪಾಂಡೆ ಎರಡನೇ ಆವೃತ್ತಿಗೆ ಮುನ್ನ ಟ್ರೇಡಿಂಗ್ ಮೂಲಕ ಆರ್‌ಸಿಬಿ ತಂಡದ ಪಾಲಾದರು. ಇದು ಮನೀಶ್ ಪಾಂಡೆ ಪಾಲಿಗೆ ಬಹುದೊಡ್ಡ ತಿರುವು ನೀಡಿತು. ಆರ್‌ಸಿಬಿ ಪರವಾಗಿ ಮೊದಲ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮನೀಶ್ ಪಾಂಡೆ ಆ ಆವೃತ್ತಿಯಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಶಾರ್ದೂಲ್ ಠಾಕೂರ್, 2017ರ ಐಪಿಎಲ್

ಶಾರ್ದೂಲ್ ಠಾಕೂರ್, 2017ರ ಐಪಿಎಲ್

2017ರ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ಶಾರ್ದೂಲ್ ಠಾಕೂರ್ ಪಂಜಾಬ್ ಕಿಂಗ್ಸ್ ತಂಡದಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾದರು. ಆ ತಂಡದಲ್ಲಿ ಎಂಎಸ್ ಧೋನಿ ಕೂಡ ಇದ್ದರು. ಬಳಿಕ 2018ರಲ್ಲಿ ಎಂಎಸ್ ಧೋನಿ ನಾಯಕರಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದರು ಶಾರ್ದೂಲ್ ಠಾಕೂರ್. ಪಂಜಾಬ್ ಫ್ರಾಂಚೈಸಿಯಿಂದ ಪುಣೆ ತಂಡಕ್ಕೆ ಬದಲಾಗಿದ್ದು ಶಾರ್ದೂಲ್ ಠಾಕೂರ್ ವೃತ್ತಿ ಜೀವನದಲ್ಲಿ ಮಹತ್ತರ ತಿರುವಿಗೆ ಕಾರಣವಾಯಿತು.

ದಿನೇಶ್ ಕಾರ್ತಿಕ್, 2012ರ ಐಪಿಎಲ್ ಆವೃತ್ತಿ

ದಿನೇಶ್ ಕಾರ್ತಿಕ್, 2012ರ ಐಪಿಎಲ್ ಆವೃತ್ತಿ

2012ರ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ದಿನೇಶ್ ಕಾರ್ತಿಕ್ ಪಂಜಾಬ್ ಮೂಲದ ಫ್ರಾಂಚೈಸಿಯಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡ್ ಮೂಲಕ ಸೇರ್ಪಡೆಯಾದರು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಪಾರ್ಥೀವ್ ಪಟೇಲ್, 2015

ಪಾರ್ಥೀವ್ ಪಟೇಲ್, 2015

2015 ಹಾಗೂ 2017ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದಾಗ ಪಾರ್ಥಿವ್ ಪಟೇಲ್ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದರು. ಅದಕ್ಕೂ ಮುನ್ನ ಆರ್‌ಸಿಬಿ ತಂಡದಲ್ಲಿದ್ದ ಪಟೇಲ್ ಅವರನ್ನು 2015ರ ಐಪಿಎಲ್ ಆವೃತ್ತಿಗೂ ಮುನ್ನ ಮುಂಬೈ ಫ್ರಾಂಚೈಸಿ ಟ್ರೇಡ್ ಮೂಲಕ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಅವಕಾಶವನ್ನು ಪಟೇಲ್ ಉತ್ತಮವಾಗಿ ಬಳಸಿಕೊಂಡು ಮಿಂಚಿದ್ದರು.

Story first published: Wednesday, November 16, 2022, 15:43 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X