Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಂಕಾ ಪ್ರೀಮಿಯರ್ ಲೀಗ್: 70 ವಿದೇಶಿ ಕ್ರಿಕೆಟಿಗರಲ್ಲಿ ಇರ್ಫಾನ್ ಪಠಾಣ್ ಹೆಸರು

Irfan Pathan in Lanka Premier League Foreign Players Draft

ನವದೆಹಲಿ: ಲಂಕಾ ಪ್ರೀಮಿಯರ್ ಲೀಗ್‌ಗಾಗಿ ಹೆಸರಿಸಲಾಗಿರುವ 70 ಮಂದಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಹೆಸರೂ ಕೂಡ ಸೇರಿದೆ. ಈ ಟೂರ್ನಿ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ ಆರಂಭಗೊಳ್ಳಲಿದೆ.

ಎಲ್‌ಪಿಎಲ್‌ನಲ್ಲಿ ಆಡಲು ಇರ್ಫಾನ್ ಪಠಾಣ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್‌ ಇನ್ ಇಂಡಿಯಾ ಅನುಮತಿ ನೀಡಿದೆ ಎನ್ನಲಾಗಿದೆ. ಸಕ್ರಿಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಬಿಸಿಸಿಐಯಿಂದ ಅನುಮತಿಯಿಲ್ಲ. ಆದರೆ ಪಠಾಣ್ ಜನವರಿಯಲ್ಲಿ ನಿವೃತ್ತಿ ನೀಡಿರುವುದರಿಂದ ಬಿಸಿಸಿಐಯಿಂದ ತೊಂದರೆಯೇನಿಲ್ಲ.

ಪ್ರಮುಖ ಆಟಗಾರರ ಸಾಲಿನಲ್ಲಿರುವ ಇರ್ಫಾನ್ ಪಠಾಣ್, ಲೀಗ್‌ನಲ್ಲಿನ ಐದು ಫ್ರಾಂಚೈಸಿಗಳಲ್ಲೊಂದು ಆರಿಸುವವರೆಗೂ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿರಲಿದ್ದಾರೆ. ಆಟಗಾರರ ಸಂಪೂರ್ಣ ಪಟ್ಟಿ, ಫ್ರಾಂಚೈಸಿ ಮಾಲೀಕರು ಇತ್ಯಾದಿಗಳೆಲ್ಲ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ಫ್ರ್ಯಾಂಚೈಸೀ ಮಾಲೀಕರನ್ನು ನಿರ್ಧರಿಸಲಾಗಿದೆಯಾದರೂ ಎಸ್‌ಎಲ್‌ಸಿಯು ಸರ್ಕಾರದ ಕೆಲ ಅನುಮತಿಗಳಿಗಾಗಿ ಕಾಯುತ್ತಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳೆಂದರೆ ಕೊಲಂಬೋ, ಕ್ಯಾಂಡಿ, ಗ್ಯಾಲೆ, ದಂಬುಲ್ಲ ಮತ್ತು ಜಫ್ನಾ. 2012ರಲ್ಲಿ ಶ್ರೀಲಂಕಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿ ನಡೆದಿತ್ತು. ಅದಾಗಿ ಮತ್ತೆ ಇದೇ ಮೊದಲ ಬಾರಿ ಟಿ20 ಟೂರ್ನಿ ನಡೆಯುವುದರಲ್ಲಿದೆ.

Story first published: Friday, August 14, 2020, 20:08 [IST]
Other articles published on Aug 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+