ಈ ಅಂಶವೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಾಯಿತಾ?

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಫಾರ್ಮ್ ಸದ್ಯದ ಆತಂಕಕಾರಿ ವಿಚಾರವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸಿದ ಅವರು ಇದೀಗ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಕೂಡ ವಿಫಲವಾಗಿದ್ದಾರೆ. 31 ಎಸೆತಗಳಲ್ಲಿ 27 ರನ್ ಗಳಿಸಿದ್ದಾಗ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವ ತ್ಯಜಿಸಿದ ನಂತರ ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿ ಭಾರತ ತಂಡದ ನಾಯಕನಾಗಿ ಆಯ್ಕೆಯಾದರು. ಅದಾದ ನಂತರ ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ ಸರಾಸರಿಯಲ್ಲಿ ಕುಸಿತ ಆರಂಭವಾಯಿತು. ಬ್ಯಾಟಿಂಗ್‌ನಲ್ಲಿ ಸ್ಥಿರವಾದ ಪ್ರದರ್ಶನ ನೀಡಲು ಆರಂಭಿಸಿದರು.

ಮುಂಬೈ ತಂಡದ ಮೇಲೆ ವಿಶೇಷ ಅಭಿಮಾನ: ರಣಜಿ ಆಡಲು ಮುಂದಾದ 360 ಡಿಗ್ರಿ ಆಟಗಾರಮುಂಬೈ ತಂಡದ ಮೇಲೆ ವಿಶೇಷ ಅಭಿಮಾನ: ರಣಜಿ ಆಡಲು ಮುಂದಾದ 360 ಡಿಗ್ರಿ ಆಟಗಾರ

ಸತತವಾಗಿ ಅವರು ಬ್ಯಾಟಿಂಗ್ ವಿಫಲವಾಗುತ್ತಿರುವ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಈಗಾಗಲೇ ರೋಹಿತ್ ಶರ್ಮಾರನ್ನು ಟಿ20 ಮಾದರಿಯಲ್ಲಿ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ರೋಹಿತ್ ಶರ್ಮಾ ಮೇಲಿನ ಹೊರೆ ಕಡಿಮೆ ಮಾಡಲು ಟಿ20 ಮಾದರಿಯಲ್ಲಿ ಅವರನ್ನು ನಾಯಕನ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗುತ್ತಿದ್ದು, ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ನೇಮಿಸುವುದು ಬಹುತೇಕ ಖಚಿತವಾಗಿದೆ.

ಕಡಿಮೆಯಾಗುತ್ತಿದೆ ಬ್ಯಾಟಿಂಗ್ ಸರಾಸರಿ

ಕಡಿಮೆಯಾಗುತ್ತಿದೆ ಬ್ಯಾಟಿಂಗ್ ಸರಾಸರಿ

ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಸರಾಸರಿ ತೀವ್ರವಾಗಿ ಕಡಿಮೆಯಾಗುತ್ತಿದೆ. ದೊಡ್ಡ ಮೊತ್ತವನ್ನು ಗಳಿಸುವಲ್ಲಿ ಅವರು ಸತತವಾಗಿ ವಿಫಲವಾಗುತ್ತಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಈ ವರ್ಷ ಅವರು ಕೆಲವು ಟೆಸ್ಟ್ ಪಂದ್ಯಗಳನ್ನು ಆಡಲಿಲ್ಲ. ಆದರೆ, ಏಕದಿನ ಮತ್ತು ಟಿ20 ಮಾದರಿಯಲ್ಲಿ ಅವರು ಆಡಿದ ಪಂದ್ಯಗಳಲ್ಲಿ ರನ್ ಗಳಿಸಲು ಸಂಪೂರ್ಣವಾಗಿ ವಿಫಲವಾದರು.

ಈ ವರ್ಷದಲ್ಲಿ ಇದುವರೆಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದು 90 ರನ್ ಗಳಿಸಿದ್ದಾರೆ. 7 ಏಕದಿನ ಪಂದ್ಯಗಳನ್ನಾಡಿದ್ದು, 198 ರನ್ ಗಳಿಸಿದ್ದಾರೆ, ಇನ್ನು ಈ ವರ್ಷ 29 ಟಿ20 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 656 ರನ್ ಗಳಿಸಿದ್ದಾರೆ.

2027ರ ಫುಟ್ಬಾಲ್ ಏಷ್ಯಾಕಪ್ ಆಯೋಜನೆಯಿಂದ ಹಿಂದೆ ಸರಿದ ಭಾರತ; ಸೌದಿ ಅರೇಬಿಯಾಗೆ ಒಲಿದ ಆತಿಥ್ಯ

ರೋಹಿತ್ ಶರ್ಮಾಗೆ ನಾಯಕತ್ವ ಹೊರೆ?

ರೋಹಿತ್ ಶರ್ಮಾಗೆ ನಾಯಕತ್ವ ಹೊರೆ?

ರೋಹಿತ್ ಶರ್ಮಾ ನಾಯಕನಾದ ನಂತರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಫಿಟ್ನೆಸ್ ಕಾರಣದಿಂದ ಅವರು ಇನ್ನು ಹೆಚ್ಚಿನ ದಿನ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ರೋಹಿತ್ ಶರ್ಮಾ ಇದುವರೆಗೂ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ದಾಖಲೆ ಉತ್ತಮವಾಗಿದ್ದರೂ, ನಾಯಕತ್ವ ವಹಿಸಿಕೊಂಡ ನಂತರ ಅವರು ರನ್ ಗಳಿಸಲು ವಿಫಲವಾಗಿರುವುದು ಕೂಡ ಸತ್ಯ.

ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿರುವ ಏಕೈಕ ಆಟಗಾರ ಅವರು. ವಿರಾಟ್ ಕೊಹ್ಲಿ ನಾಯಕತ್ವದ ಅವಧಿಯಲ್ಲಿ ವಿಶ್ರಾಂತಿ ಪಡೆದಾಗ ರೋಹಿತ್ ಶರ್ಮಾ ಸ್ಟಾಂಡ್ -ಇನ್ ನಾಯಕನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅವರ ಉತ್ತಮ ದಾಖಲೆಯನ್ನು ನೋಡಿದ ನಂತರವೇ ಅವರನ್ನು ವಿರಾಟ್ ಕೊಹ್ಲಿ ನಂತರ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.

ನಾಯಕನಾದ ನಂತರ ಬ್ಯಾಟಿಂಗ್ ಲೆಕ್ಕಾಚಾರ

ನಾಯಕನಾದ ನಂತರ ಬ್ಯಾಟಿಂಗ್ ಲೆಕ್ಕಾಚಾರ

2022 ರಲ್ಲಿ ರೋಹಿತ್ ಗಾಯದ ಕಾರಣ ಅಥವಾ ವಿಶ್ರಾಂತಿಯ ಕಾರಣದಿಂದಾಗಿ ಹೆಚ್ಚಿನ ಪಂದ್ಯಗಳನ್ನು ಆಡಲಿಲ್ಲ. 7 ಪಂದ್ಯಗಳನ್ನಾಡಿರುವ ಅವರು ಕೇವಲ 2 ಅರ್ಧಶತಕಗಳನ್ನು ಗಳಿಸಿದ್ದಾರೆ. 2018ರ ನಂತರ ಮೊದಲ ಬಾರಿಗೆ ಅವರ ಸರಾಸರಿ 40ಕ್ಕಿಂತ ಕಡಿಮೆಯಾಗಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಹಲವು ದ್ವಿಕಪಕ್ಷೀಯ ಸರಣಿಗಳನ್ನು ಗೆದ್ದುಕೊಂಡರು ಕೂಡ ಏಷ್ಯಾಕಪ್ ಮತ್ತು ಟ20 ವಿಶ್ವಕಪ್‌ ಗೆಲ್ಲುವಲ್ಲಿ ವಿಫಲವಾಗಿದೆ. ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಕೂಡ ಸಾಕಷ್ಟು ರನ್ ಬರ ಅನುಭವಿಸಿದರು. ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಅವರಿಂದ ಯಾವುದೇ ಉತ್ತಮ ಇನ್ನಿಂಗ್ಸ್ ಬರಲಿಲ್ಲ.

2022ರಲ್ಲಿ ರೋಹಿತ್ ಶರ್ಮಾರಿಂದ ಯಾವುದೇ ಉತ್ತಮ ಇನ್ನಿಂಗ್ಸ್ ಬಂದಿಲ್ಲ. ಉತ್ತಮವಾಗಿ ಆರಂಭ ಪಡೆದರು ಕೂಡ ಅವರು ಬೇಗನೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. 2023ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಕೂಡ ರೋಹಿತ್ ಶರ್ಮಾ ನಾಯಕರಾಗಿರಲಿದ್ದಾರೆ. ಭಾರತಕ್ಕೆ ನಾಯಕನೇ ಸಮಸ್ಯೆಯಾಗುವ ಮುನ್ನ ರೋಹಿತ್ ಶರ್ಮಾ ತಮ್ಮ ಫಾರ್ಮ್ ಕಂಡುಕೊಳ್ಳಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Monday, December 5, 2022, 19:01 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X