ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!

ನವದೆಹಲಿ: ಟೀಮ್ ಇಂಡಿಯಾದ ಆಟಗಾರ ದೀಪಕ್ ಚಾಹರ್, ಜನಪ್ರಿಯ ಯುವ ಆಟಗಾರ ರಾಹುಲ್ ಚಾಹರ್ ಅವರ ಅಣ್ಣ. ಇವರಿಬ್ಬರೂ ಬಾಲಿವುಡ್ ಮಾಡೆಲ್ ಮಾಲತಿ ಚಾಹರ್ ಅವರ ಕಿರಿಯ ಸಹೋದರರು. ಇವರಲ್ಲಿ ಅಣ್ಣ ದೀಪಕ್ ಚಾಹರ್ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದು ಡೇಟಿಂಗ್ ಗಾಳಿ ಸುದ್ದಿಗಾಗಿ. ಇದು ನಿಜವೇ ಆದರೆ ಕ್ರಿಕೆಟ್ ಮತ್ತು ಬಾಲಿವುಡ್ ಲೋಕದ ಮತ್ತಿಬ್ಬರು ಜೊತೆಯಾದಂತೆ ಆಗುತ್ತದೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್

ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿಯಲ್ಲಿ ದೀಪಕ್ ಚಾಹರ್ ಹೀರೋ ಆಗಿ ಮೆರೆದಿದ್ದರು. ಕೇವಲ ಏಳು ರನ್‌ಗೆ ಆರು ವಿಕೆಟ್ ಮುರಿದು ಭಾರತದ ಗೆಲುವಿಗೆ ಕಾರಣರಾಗಿದ್ದರು. ಹೀಗಾಗಿ ಐಸಿಸಿ ಟಿ20 ಅತ್ಯುತ್ತಮ ಪ್ರದರ್ಶನದ ಪ್ರಶಸ್ತಿಯನ್ನೂ ಚಾಹರ್ ತನ್ನದಾಗಿಸಿಕೊಂಡಿದ್ದರು.

ಶೀಘ್ರವೇ ದೀಪಕ್ ಮತ್ತು ಜಯಾ ಮದುವೆ?

ಶೀಘ್ರವೇ ದೀಪಕ್ ಮತ್ತು ಜಯಾ ಮದುವೆ?

ಅದೇ ದೀಪಕ್ ಚಾಹರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಚಾಹರ್ ತನ್ನ ವೈಯಕ್ತಿಕ ಬದುಕಿನ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ. ಅದೇನೆಂದರೆ ದೀಪಕ್ ಚಾಹರ್, ಬಿಗ್‌ ಬಾಸ್ ಸ್ಪರ್ಧಿ ಸಿದ್ಧಾರ್ಥ್ ಭಾರದ್ವಾಜ್ ಅವರ ತಂಗಿ ಜಯ ಭಾರದ್ವಾಜ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗಾಳಿ ಸುದ್ದಿಯಾಗಿದೆ. ದೀಪಕ್ ಮತ್ತು ಜಯ ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜಯ ಭಾರದ್ವಾಜ್ ಅವರು ಟಿವಿ ಸರಣಿಗಳಲ್ಲಿ ಒಂದಿಷ್ಟು ಸಾರಿ ಕಾಣಿಸಿಕೊಂಡಿದ್ದರು. ಬಿಗ್‌ ಬಾಸ್ 5, ಸ್ಪ್ಲಿಟ್ಸ್‌ವಿಲ್ಲಾ-2 ಮೊದಲಾದ ಕಾರ್ಯಕ್ರಮಗಳಲ್ಲಿ ಜಯ ಕಾಣಿಸಿಕೊಂಡದ್ದರು. ಕೆಲವೊಂದು ಮೂಲಗಳ ಪ್ರಕಾರ, ದೀಪಕ್ ಮತ್ತು ಜಯ ತಮ್ಮ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರ ನಿಶ್ಚಿತಾರ್ಥ ಶೀಘ್ರವೇ ನಡೆಯುವುದರಲ್ಲಿದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದರೆ ಕ್ರಿಕೆಟ್ ಮತ್ತು ಬಾಲಿವುಡ್ ಲೋಕದ ಮತ್ತೊಬ್ಬರು ಜೊತೆಯಾದಂತೆ ಆಗುತ್ತದೆ.

ದೀಪಕ್‌ಗಾಗಿ ಜಯ ದುಬೈಗೆ ಪ್ರಯಾಣ

ದೀಪಕ್‌ಗಾಗಿ ಜಯ ದುಬೈಗೆ ಪ್ರಯಾಣ

ಇನ್ನು ಕೇವಲ 10 ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯ ದ್ವಿತೀಯ ಹಂತದ ಸ್ಪರ್ಧೆಗಳು ನಡೆಯಲಿವೆ. ದೀಪಕ್ ಚಾಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಹೀಗಾಗಿ ಜಯ ಭಾರದ್ವಾಜ್ ಕೂಡ ದೀಪಕ್ ಅವರನ್ನು ಚಿಯರ್ ಮಾಡಲು ಯುಎಇಗೆ ತೆರಳಿದರೂ ತೆರಳಬಹುದು. ಮಾಹಿತಿಯ ಪ್ರಕಾರ ದೀಪಕ್ ಈಗಾಗಲೇ ತನ್ನ ಪ್ರಿಯತಮೆಯನ್ನು ತಂಡದ ಇತರ ಸದಸ್ಯರಿಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ. ಐಪಿಎಲ್ ಟೂರ್ನಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ನಡೆಯಲಿದೆ. ದ್ವಿತೀಯ ಹಂತದಲ್ಲಿ ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಹೆಚ್ಚು ಬಾರಿ ಟ್ರೋಫಿ ಗೆದ್ದ ದಾಖಲೆ ಹೊಂದಿವೆ. ಮುಂಬೈ 5 ಬಾರಿ ಟ್ರೋಫಿ ಗೆದ್ದಿದ್ದರೆ, ಚೆನ್ನೈ ಮೂರು ಬಾರಿ ಟ್ರೋಫಿ ಗೆದ್ದ ದಾಖಲೆ ಹೊಂದಿದೆ.

T 20 ವಿಶ್ವಕಪ್ ಆಡಲು ಹೊರಟ ತಂಡಕ್ಕೆ ಧೋನಿ ಮಾರ್ಗದರ್ಶನ | Oneindia Kannada
ವಿಶ್ವಕಪ್‌ ಮೀಸಲು ತಂಡದಲ್ಲಿ ಚಾಹರ್

ವಿಶ್ವಕಪ್‌ ಮೀಸಲು ತಂಡದಲ್ಲಿ ಚಾಹರ್

ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)15 ಜನರ ತಂಡ ಪ್ರಕಟಿಸಿದೆ. ಇದರಲ್ಲಿ ದೀಪಕ್ ಚಾಹರ್ ತಮ್ಮ ರಾಹುಲ್ ಚಾಹರ್ ಕಾಣಿಸಿಕೊಂಡಿದ್ದಾರೆ. ದೀಪಕ್ ಅವರು ಮೀಸಲು ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತೀಯ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 16:24 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X