100 ಟೆಸ್ಟ್ ಆಡಿದ ಬಳಿಕವೂ ಇಶಾಂತ್ 3ನೇ ವೇಗಿ: ವೆಂಕಟೇಶ್ ಪ್ರಸಾದ್ ಅಚ್ಚರಿ

ಭಾರತ ಇಂಗ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯವನ್ನಾಡಲು ಸಿದ್ಧತೆಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಯಾರೆಲ್ಲಾ ಇರಬೇಕು ಎಂಬ ಬಗ್ಗೆ ಸಾಕಷ್ಟ ಚರ್ಚೆಗಳು ನಡೆಯುತ್ತಿದೆ. ಈ ಮಧ್ಯೆ ವೇಗಿ ಇಶಾಂತ್ ಶರ್ಮಾ ವಿಚಾರವಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. 100 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರವೂ ಇಶಾಂತ್ ಶರ್ಮಾ ಅವರನ್ನು 3ನೇ ವೇಗಿಯಾಗಿ ಪರಿಗಣಿಸಲಾಗುತ್ತಿದೆ ಎಂದು ವೆಂಕಟೇಶ್ ಪ್ರಸಾದ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

"ಹೊಸ ಚೆಂಡನ್ನು ಪರಿಣಾಮಕಾರಿಯಾಗಿ ಬಳಸುವವರು ಯಾರು ಎಂಬುದು ಇಲ್ಲರುವ ಪ್ರಶ್ನೆ. ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಅದ್ಭುತವಾದ ನಿಯಂತ್ರಣದ ಜೊತೆಗೆ ಉತ್ತಮ ಲೈನ್‌ ಹಾಗೂ ಲೆಂತ್ ಹೊಂದಿದ್ದಾರೆ. ಆದರೆ ನನಗೆ ಅಚ್ಚರಿಯಾಗುತ್ತಿರುವುದು ಇಶಾಂತ್ ಶರ್ಮಾ ಅವರನ್ನು 100ನೇ ಟೆಸ್ಟ್ ಆಡಿದ ನಂತರವೂ ಮೂರನೇ ವೇಗಿಯಾಗಿ ಪರಿಗಣಿಸುತ್ತಿರುವುದಕ್ಕೆ. ಆತನಿಗೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ಗಳನ್ನು ಆಡಿದ ಅನುಭವವೂ ಸಾಕಷ್ಟಿದೆ" ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲ ಕ್ರಿಕೆಟ್ ಪಂಡಿತರು ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಕಣಕ್ಕಿಳಿಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ್ ಪ್ರಸಾದ್ ಎದುರಾಳಿಯೊಂದಿಗೆ ಆಡಿದ ಅನುಭವ ಹಾಗೂ ಜ್ಞಾನ ಇಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.

"ಅಶ್ವಿನ್ ಹಾಗೂ ಜಡೇಜಾ ಮತ್ತು ಮೂವರು ವೇಗಿಗಳು ಅತ್ಯುತ್ತಮ ಆಯ್ಕೆ ಎಂದು ಭಾವಿಸುತ್ತೇನೆ. ಬೂಮ್ರಾ, ಶಮಿ ಹಾಗೂ ಇಶಾಂತ್ ಶರ್ಮಾ ಮೂವರು ಕೂಡ ವಿಭಿನ್ನ ಪರಿಸ್ಥಿತಿಗಳಲ್ಲಿ ಆಡಿದ ಉತ್ತಮ ಅನುಭವವನ್ನು ಹೊಂದಿದ್ದಾರೆ. ಅವರಿಗೆ ತಮ್ಮ ಪಾತ್ರದ ಬಗ್ಗೆ ಅತ್ಯುತ್ತಮ ಅರಿವಿದೆ" ಎಂದು ವೆಂಕಟೇಶ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡುವ ಈ ಐತಿಹಾಸಿಕ ಪಂದ್ಯ ಅಂತಿಮ ದಿನದವರೆಗೂ ಮುಂದುವರಿಯುವ ನಿರೀಕ್ಷೆಯನ್ನು ವೆಂಕಟೇಶ್ ಪ್ರಸಾದ್ ವ್ಯಕ್ತಪಡಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳು ಪರಿಸ್ಥಿತಿಗೆ ಶೀಘ್ರವಾಗಿ ಹೊಂದಿಕೊಳ್ಳಬೇಕು ಹಾಗೂ ಬೌಲರ್‌ಗಳು ತಮಗೆ ಸೂಕ್ತವಾಗುವ ತುದಿಯನ್ನು ಗುರುತಿಸಿಕೊಳ್ಳಬೇಕು ಎಂದು ವೆಂಕಟೇಶ್ ಪ್ರಸಾದ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, June 14, 2021, 16:14 [IST]
Other articles published on Jun 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X