ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನುಮಾನವೇ ಇಲ್ಲ, ಈ ತಂಡವೇ ವಿಶ್ವಕಪ್ ಗೆಲ್ಲುವ ಫೇವರೀಟ್ ಎಂದ ಕ್ರಿಕೆಟ್ ದಿಗ್ಗಜ ಜಾಕ್ ಕ್ಯಾಲೀಸ್

Jacques Kallis said India will be one of the favourites in T20 World Cup

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಜಾಕ್ ಕ್ಯಾಲೀಸ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಹೇಳಿಕೆ ನೀಡಿದ್ದಾರೆ. ಏಷ್ಯಾ ಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದಿಂದ ಸರ್ವಾಂಗೀಣ ಪ್ರದರ್ಶನ ಬಾರದ ಹೊರತಾಗಿಯೂ ಭಾರತ ತಂಡ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಜಾಕ್ ಕ್ಯಾಲೀಸ್ ವ್ಯಕ್ತಪಡಿಸಿದ್ದಾರೆ.

ಟಿ20 ಮಾದರಿಯಲ್ಲಿ ಭಾರತ ಸದ್ಯ ನಂಬರ್ 1 ತಂಡವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಪ್ರದರ್ಶನ ಅಗ್ರ ಶ್ರೇಯಾಂಕಕ್ಕೆ ಪೂರಕವಾಗಿಲ್ಲ. ಅದರಲ್ಲೂ ಇತ್ತೀಚೆಗೆ ಅಂತ್ಯವಾದ ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಕಳೆಗುಂದಿದಂತೆ ಕಾಣಿಸಿದೆ. ಹಾಗಿದ್ದರೂ ದಕ್ಷಿಣ ಆಪ್ರಿಕಾದ ದಿಗ್ಗಜ ಆಟಗಾರ ಭಾರತ ತಂಡದ ಮೇಲೆ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!

ಭಾರತಕ್ಕೆ ಗೆಲ್ಲುವ ಅವಕಾಶವಿದೆ

ಭಾರತಕ್ಕೆ ಗೆಲ್ಲುವ ಅವಕಾಶವಿದೆ

ಕ್ಯಾಲಿಸ್ ಭಾರತ ತಂಡದ ಬಗ್ಗೆ ಮಾತನಾಡುತ್ತಾ "ಭಾರತವು ಕೆಲವು ಉತ್ತಮ ಟಿ20 ಕ್ರಿಕೆಟ್ ಆಡಿದೆ. ಹಾಗಾಗಿ ಮುಂದಿನ ವಿಶ್ವಕಪ್‌ನಲ್ಲಿ ಕಂಡಿತಾ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ವಿಶ್ವಕಪ್‌ನಂತಾ ಟೂರ್ನಿಯಲ್ಲಿ ಅದೃಷ್ಟವೂ ಬೇಕಾಗುತ್ತದೆ. ಭಾರತ ತಂಡ ಆ ಅದೃಷ್ಟವನ್ನು ಕೂಡ ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ವಿಶ್ವಕಪ್ ಗೆಲ್ಲುವ ಅವಕಾಶ ಭಾರತ ತಂಡಕ್ಕಿದೆ ಎಂದಿದ್ದಾರೆ ಜಾಕ್ ಕ್ಯಾಲೀಸ್.

ಸ್ಪಿನ್ನರ್‌ಗಳು ಪರಿಣಾಮ ಬೀರಲಿದ್ದಾರೆ

ಸ್ಪಿನ್ನರ್‌ಗಳು ಪರಿಣಾಮ ಬೀರಲಿದ್ದಾರೆ

ಇನ್ನು ಇದೇ ಸಂದರ್ಭದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ವೇಗಿಗಳ ರೀತಿಯಲ್ಲಿಯೇ ಸ್ಪಿನ್ನರ್‌ಗಳು ಕೂಡ ಪರಿಣಾಮ ಬೀರಲಿದ್ದಾರೆ ಎಂದು ಜಾಕ್ ಕ್ಯಾಲಿಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಒಂದು ಹಂತದಲ್ಲಿ ವೇಗಿಗಳಂತೆಯೇ ಸ್ಪಿನ್ನರ್‌ಗಳು ಕೂಡ ಅತ್ಯಂತ ಪರಿಣಾಮಕಾರಿಯಾಗಲಿದ್ದಾರೆ ಎಂದಿದ್ದಾರೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್ ಕ್ಯಾಲೀಸ್. ಭಾರತ ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧ ಸೆಣೆಸಾಡುವ ಮೂಲಕ ಆರಂಭಿಸಲಿದೆ.

ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡ

ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡ

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Saturday, September 24, 2022, 12:36 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X