ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತ ನೈಟ್ ರೈಡರ್ಸ್ ಕೋಚ್ ಸ್ಥಾನದಿಂದ ಕೆಳಗಿಳಿದ ಜಾಕ್ ಕ್ಯಾಲಿಸ್

KKR ತಂಡಕ್ಕೆ ದೊಡ್ಡ ಆಘಾತ..? | Jack Kallis | Oneindia Kannada
Jacques Kallis steps down as Kolkata Knight Riders head coach

ಕೋಲ್ಕತ್ತ, ಜುಲೈ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್‌ನ ಕೋಚಿಂಗ್ ಜವಾಬ್ದಾರಿಯಿಂದ ಜಾಕ್ ಕ್ಯಾಲಿಸ್ ಮತ್ತು ಸೈಮನ್ ಕ್ಯಾಟಿಚ್ ಕೆಳಗಿಳಿದಿದ್ದಾರೆ. ಇಬ್ಬರೂ ಮಾಜಿ ಕ್ರಿಕೆಟಿಗರು ಭಾನುವಾರ (ಜುಲೈ 14) ಕೋಚ್ ಸ್ಥಾನ ತ್ಯಜಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

2015ರಲ್ಲಿ ಕ್ಯಾಲಿಸ್ ಕೆಕೆಆರ್ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಅಕ್ಟೋಬರ್ 2015ರಂದು ಕೆಕೆಆರ್ ಮುಖ್ಯ ತರಬೇತುದಾರರಾಗಿ ಆಯ್ಕೆಗೊಳ್ಳುವುದಕ್ಕೂ ಮುನ್ನ ಜಾಕ್ ಕ್ಯಾಲಿಸ್, ಕೆಕೆಆರ್ ಆಟಗಾರರಾಗಿ ತಂಡದಲ್ಲಿದ್ದರು. ಮುಂದಿನ ಸೀಸನ್‌ನಿಂದ ಕೆಕೆಆರ್ ಹೊಸ ತರಬೇತುದಾರರು ಮತ್ತು ಸಿಬ್ಬಂದಿಗಳೊಂದಿಗೆ ಸ್ಪರ್ಧೆಗಿಳಿಯಲಿದೆ.

'2011ರಿಂದ ಹಿಡಿದು ಒಟ್ಟಿಗೆ 9 ವರ್ಷಗಳ ಕಾಲ ಕೆಕೆಆರ್‌ನೊಂದಿಗೆ ಆಟಗಾರನಾಗಿ, ಮೆಂಟರ್‌ ಆಗಿ, ಮುಖ್ಯ ಕೋಚ್ ಆಗಿ ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ಹೊಸ ಅವಕಾಶ ಹುಡುಕಲು ಇದು ಸಕಾಲ ಎಂದು ನನಗನ್ನಿಸುತ್ತಿದೆ. ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಕ್ಕೆ ಫ್ರಾಂಚೈಸಿ ಮಾಲಕರು, ಆಟಗಾರರು, ಸಿಬ್ಬಂದಿಗಳಿಗೆ ಧನ್ಯವಾದಗಳು' ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಕ್ಯಾಲಿಸ್ ಹೇಳಿದ್ದಾರೆ.

ವಿಶ್ವಕಪ್‌ ಫೈನಲ್‌ನಲ್ಲಿ ಇದೇ ತಂಡ ಗೆಲ್ಲೋದು ಎಂದ ಪೀಟರ್ಸನ್‌ವಿಶ್ವಕಪ್‌ ಫೈನಲ್‌ನಲ್ಲಿ ಇದೇ ತಂಡ ಗೆಲ್ಲೋದು ಎಂದ ಪೀಟರ್ಸನ್‌

ಇನ್ನೊಂದು ಬದಿ, 2016ರಿಂದ ಕೆಕೆಆರ್ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದ ಕ್ಯಾಟಿಚ್ ಕೂಡ ಜವಾಬ್ದಾರಿ ತ್ಯಜಿಸಿದ್ದಾರೆ. ಮಾಜಿ ಆಸ್ಟ್ರೇಲಿಯಾ ಆಟಗಾರ ಸೈಮನ್, ಕೆರಿಬಿಯನ್ ಪ್ರೀಮಿಯರ್ ಲೀಗ್‌(ಸಿಪಿಎಲ್‌)ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಯಶಸ್ಸಿನ ಬಳಿಕ ಕೆಕೆಆರ್ ಸೇರಿಕೊಂಡಿದ್ದರು. ಕ್ಯಾಟಿಚ್ ಅಡಿಯಲ್ಲಿ ಕೆಕೆಆರ್ 2012 ಮತ್ತು 2014ರಲ್ಲಿ ಚಾಂಪಿಯನ್ ಅನ್ನಿಸಿಕೊಂಡಿತ್ತು.

Story first published: Sunday, July 14, 2019, 17:29 [IST]
Other articles published on Jul 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X