ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಮಾಷೆ ರೀತಿಯಲ್ಲಿ ಜಸ್‌ಪ್ರೀತ್‌ ಬೂಮ್ರಾಗೆ ಥ್ಯಾಂಕ್ಸ್ ಹೇಳಿದ 'ಜಾರ್ವೋ 69'

Jarvo 69 Thanked Jasprit Bumrah Hilariously For Dismissing Jonny Bairstow

ಲಂಡನ್‌: ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ ಸರಣಿಯ ವೇಳೆ ಮೈದಾನಕ್ಕೆ ಪ್ರವೇಶಿಸಿ ಮನರಂಜನೆ ನೀಡಿ ಸುದ್ದಿಯಾಗಿದ್ದ ಇಂಗ್ಲೆಂಡ್‌ ಮೂಲದ ಭಾರತೀಯ ಅಭಿಮಾನಿ, ಯೂಟ್ಯೂಬರ್ ಡೇನಿಯಲ್ ಜಾರ್ವಿಸ್ ಅಲಿಯಾಸ್ 'ಜರ್ವೋ 69' ಮತ್ತೆ ಸುದ್ದಿಯಲ್ಲಿದ್ದಾರೆ. ಜಾರ್ವೋ ತಮಾಷೆ ರೀತಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ಥ್ಯಾಂಕ್ಸ್ ಹೇಳಿದ್ದಾರೆ. ಬೂಮ್ರಾಗೆ ಥ್ಯಾಂಕ್ಸ್ ಹೇಳಿ ಜಾರ್ವೋ ಮಾಡಿರುವ ಫೇಸ್ಬುಕ್ ಪೋಸ್ಟ್ ತಮಾಷೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.

ವಿವಾಹ ವಿಚ್ಛೇದನ ಪಡೆದುಕೊಂಡ ಭಾರತೀಯ ಕ್ರಿಕೆಟಿಗರ ಪಟ್ಟಿವಿವಾಹ ವಿಚ್ಛೇದನ ಪಡೆದುಕೊಂಡ ಭಾರತೀಯ ಕ್ರಿಕೆಟಿಗರ ಪಟ್ಟಿ

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಅನುಭವಿ ಬ್ಯಾಟ್ಸ್‌ಮನ್‌ ಜಾನಿ ಬೇರ್ಸ್ಟೋವ್, ಜಸ್‌ಪ್ರೀತ್‌ ಓವರ್‌ನಲ್ಲಿ ಡಕ್ ಔಟ್ (0 ರನ್‌ಗೆ ಔಟ್) ಆಗಿದ್ದರು. ಬೇರ್ಸ್ಟೋವ್ ಅವರನ್ನು 0 ರನ್‌ಗೆ ಔಟ್ ಮಾಡಿದ್ದಕ್ಕಾಗಿ ಜಾರ್ವೋ ಅವರು ಬೂಮ್ರಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜಾರ್ವೋ ಹೀಗೆ ಥ್ಯಾಂಕ್ಸ್ ಹೇಳಿದ್ದಕ್ಕೆ ಕಾರಣವಿದೆ.

ಬೂಮ್ರಾಗೆ ಜಾರ್ವೋ ಥ್ಯಾಂಕ್ಸ್ ಹೇಳಿದ್ಯಾಕೆ ಗೊತ್ತಾ?!

ಜಸ್‌ಪ್ರೀತ್‌ ಬೂಮ್ರಾಗೆ ಜಾರ್ವೋ 69 ಥ್ಯಾಂಕ್ಸ್ ಹೇಳಿ ಪೋಸ್ಟ್ ಹಾಕಿದ್ದಕ್ಕೆ ಒಂದು ತಮಾಷೆಯ ಕಾರಣವಿದೆ. ಲಂಡನ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಇಂಗ್ಲೆಂಡ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ಜಾರ್ವೋ ಸ್ಟೇಡಿಯಂ ಒಳಗೆ ಪ್ರವೇಶಿಸಿ ಮತ್ತೆ ಗೊಂದಲ ಮೂಡಿಸಿದ್ದರು. ಆವತ್ತು ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕೆ ಪ್ರವೇಶಿಸಿದ್ದ ಜಾರ್ವೋ ಬೌಲಿಂಗ್ ಆ್ಯಕ್ಷನ್ ಮಾಡುತ್ತ ಬಂದು ನಾನ್ ಸ್ಟ್ರೈಕರ್ ಎಂಡ್‌ನಲ್ಲಿದ್ದ ಜಾನಿ ಬೇರ್ಸ್ಟೋವ್‌ಗೆ ಡಿಕ್ಕಿ ಹೊಡೆದಿದ್ದರು. ಆ ಬಳಿಕ ಭದ್ರತಾ ಸಿಬ್ಬಂದಿಗಳು ಜಾರ್ವೋ ಅವರನ್ನು ಮೈದಾನದಿಂದ ಹೊರಗೆ ಎಳೆದುಕೊಂಡು ಹೋಗಿದ್ದರು. ಆ ಹೊತ್ತು ಬೇರ್ಸ್ಟೋವ್ ಕೂಡ ಜಾರ್ವೋ ಬಗ್ಗೆ ಅಸಮಾಧಾನ ತೋರಿಕೊಂಡಿದ್ದರು. ಆ ಇನ್ನಿಂಗ್ಸ್‌ನಲ್ಲಿ ಬೇರ್ಸ್ಟೋವ್ 37 ರನ್ ಬಾರಿಸಿ ಆ ಬಳಿಕ ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿದ್ದರು. ಅಂದಿನ ಆ ಘಟನೆಗೆ ಸಂಬಂಧಿಸಿ ಜಾರ್ಬೋ ಎಫ್‌ಬಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ ಮುಗಿದ ಬಳಿಕ ಜಾರ್ವೋ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

ಏನಿದೆ ಜಾರ್ವೋ 69 ಎಫ್‌ಬಿ ಪೋಸ್ಟ್‌ನಲ್ಲಿ?

ಅಸಲಿಗೆ ಜಾರ್ವೋ ಎಫ್‌ಬಿ ಪೋಸ್ಟ್ ಹಾಕಿಕೊಂಡಿದ್ದು ಸೆಪ್ಟೆಂಬರ್‌ 6ರಂದು. ಆವತ್ತು ಪೋಸ್ಟ್‌ ಹಾಕಿದ್ದ ಜಾರ್ವೋ, "ಜಸ್‌ಪ್ರೀತ್‌ ಬೂಮ್ರಾಗೆ ಥ್ಯಾಂಕ್ಸ್ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಬೂಮ್ರಾ ಅವರು ಜಾನಿ ಬೇರ್ಸ್ಟೋವ್ ಅವರನ್ನು 0ಗೆ ಔಟ್ ಮಾಡಿದ್ದಾರೆ. ಆವತ್ತೊಂದು ದಿನ ಇದೇ ಜಾನಿ ಬೇರ್ಸ್ಟೋವ್ ನನಗೆ ಬೈದಿದ್ದ," ಎಂದು ಬರೆದುಕೊಂಡಿದ್ದಾರೆ. ಜಾರ್ವೋ ಈ ಪೋಸ್ಟ್‌ಗೆ ಬಹುತೇಕರು ಹಲ್ಲು ಕಿಸಿಯುವ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಜಾರ್ವೋ ಜಾನಿ ಬೇರ್ಸ್ಟೋವ್‌ಗೆ ಡಿಕ್ಕಿ ಹೊಡೆದಿದ್ದಾಗ ಬೇರ್ಸ್ಟೋವ್ ಜಾರ್ವೋಗೆ ಬೈದಿದ್ದರು ಅನ್ನೋದು ಈ ಪೋಸ್ಟ್‌ನಿಂದ ಗೊತ್ತಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಬಯೋ ಬಬಲ್ ಒಳಗೆ ನಡೆಯುತ್ತವೆ. ಸಾರ್ವಜನಿಕರು ಸ್ಟೇಡಿಯಂ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆಯಾದರೂ ಅವರು ಮೈದಾನಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಕೋವಿಡ್-19 ಭೀತಿಯಿಂದಾಗಿ ಈ ನಿರ್ಬಂಧ ಹೇರಲಾಗಿದೆ. ಆದರೂ ನಿಯಮ ಮೀರಿ ಮೈದಾನಕ್ಕೆ ಪ್ರವೇಶಿಸಿ ತನ್ನನ್ನು ಮುಟ್ಟಿದ್ದರಿಂದ ಕೋಪಗೊಂಡ ಬೇರ್ಸ್ಟೋವ್ ಜಾರ್ವೋಗೆ ಮೈದಾಡಿದ್ದರು. ಆದರೆ ಬೈದಿರುವ ಬೇರ್ಸ್ಟೋವ್‌ಗೆ ಜಾರ್ವೋ ತಮಾಷೆ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

ಅನೇಕ ಸಾರಿ ಮೈದಾನಕ್ಕೆ ಪ್ರವೇಶಿಸಿದ್ದ ಜಾರ್ವೋ

ಜಾರ್ವೋ ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಿದ್ದು ಮೂರನೇ ಬಾರಿ. ಅದೂ ಕೂಡ ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲೇ ಜಾರ್ವೋ ಹಲವಾರು ಬಾರಿ ಮೈದಾನಕ್ಕೆ ಪ್ರವೇಶಿಸಿ ನೋಡುಗರಿಗೆ ಮನರಂಜನೆ, ಆಯೋಜಕರಿಗೆ ಕಿರಿಕಿ ನೀಡಿದ್ದರು. ಜಾರ್ವೋ ಮೊದಲ ಬಾರಿಗೆ ಟೆಸ್ಟ್‌ ಪಂದ್ಯದ ಮಧ್ಯೆ ಮೈದಾನಕ್ಕೆ ಪ್ರವೇಶಿಸಿದ್ದು ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ ವೇಳೆ. ಆವತ್ತು ಮೈದಾನಕ್ಕೆ ಬಂದು ಜಾರ್ವೋ ಭಾರತದ ಪರ ಫೀಲ್ಡಿಂಗ್ ಸೆಟ್ ಮಾಡೋಕೆ ಮುಂದಾಗಿದ್ದರು. ಆ ಬಳಿಕ ಲೀಡ್ಸ್‌ನ ಹೆಡಿಂಗ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ವೇಳೆಯೂ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ಜಾರ್ವೋ ಭಾರತದ ಪರ ಬ್ಯಾಟಿಂಗ್ ಮಾಡಲು ಯತ್ನಿಸಿದ್ದರು. ಆ ಬಳಿಕ ಮತ್ತೆ ಮೂರನೇ ಬಾರಿ ಲಂಡನ್‌ ಸ್ಟೇಡಿಯಂಗೆ ಪ್ರವೇಶಿಸಿದ್ದರು. ಇಷ್ಟೇ ಅಲ್ಲ, ಹಿಂದೆ ಒಲಿಂಪಿಕ್ಸ್ ವೇಳೆಯೂ ಜಾರ್ವೋ ಹೀಗೇ ಹುಚ್ಚಾಟ ಮಾಡಿದ್ದರು ಎನ್ನಲಾಗಿದೆ. ಏನೇ ಅನ್ನಿ, ಈ ಜಾರ್ವೋ ವರ್ತನೆ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯಂತೂ ನೀಡುತ್ತಿದೆ.

Story first published: Wednesday, September 8, 2021, 15:37 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X